ದಕ್ಷಿಣ ಕನ್ನಡ: ಆಟೋ ದರ ಪರಿಷ್ಕರಣೆ: ಮೊದಲ 1.5 ಕಿ.ಮೀಗೆ ₹40 :ರಾತ್ರಿ ದರ ಎಷ್ಟು? ಲಗೇಜ್ ಗೆ ಹೆಚ್ಚುವರಿ ಹಣ?

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಟೋ ರಿಕ್ಷಾ ಪ್ರಯಾಣ ದರವನ್ನು ಪರಿಷ್ಕರಿಸಲಾಗಿದ್ದು, ಮೊದಲ 1.5 ಕಿ.ಮೀ.ಗೆ ಕನಿಷ್ಠ ₹40 ದರ ನಿಗದಿಪಡಿಸಲಾಗಿದೆ. ಈ ದರದಲ್ಲಿ ಗರಿಷ್ಠ ಮೂವರು ಪ್ರಯಾಣಿಕರು ಸಂಚರಿಸಲು ಅವಕಾಶವಿದೆ.

ಪರಿಷ್ಕೃತ ದರದಂತೆ, ಮೊದಲ 1.5 ಕಿ.ಮೀ. ಬಳಿಕ ಪ್ರತಿ ಕಿ.ಮೀ.ಗೆ ₹20 ಪಾವತಿಸಬೇಕು. ಈ ದರವೂ ಗರಿಷ್ಠ ಮೂವರು ಪ್ರಯಾಣಿಕರಿಗೆ ಅನ್ವಯವಾಗಲಿದೆ.

ಆಟೋ ಕಾಯುವಿಕೆಗೆ ಮೊದಲ 10 ನಿಮಿಷ ಉಚಿತವಾಗಿದ್ದು, ಬಳಿಕ ಪ್ರತಿ 15 ನಿಮಿಷ ಅಥವಾ ಅದರ ಭಾಗಕ್ಕೆ ₹5 ಶುಲ್ಕ ವಿಧಿಸಬಹುದಾಗಿದೆ.

ರಾತ್ರಿ 10ರಿಂದ ಬೆಳಿಗ್ಗೆ 5ರವರೆಗೆ ಮಾತ್ರ ಸಾಮಾನ್ಯ ದರದ 1.5 ಪಟ್ಟು ಶುಲ್ಕ ವಸೂಲಿ ಮಾಡಲು ಅವಕಾಶ ನೀಡಲಾಗಿದೆ. ಪರಿಷ್ಕೃತ ದರಗಳು ಆಟೋ ಚಾಲಕರು ಹಾಗೂ ಪ್ರಯಾಣಿಕರಿಗೆ ಅನ್ವಯವಾಗಲಿದ್ದು, ನಿಗದಿತ ದರಕ್ಕಿಂತ ಹೆಚ್ಚಿನ ಮೊತ್ತವನ್ನು ವಸೂಲಿ ಮಾಡುವಂತಿಲ್ಲ.