ಆನಂದ್ ಡೆಂಟಲ್ & ಆರ್ಥೋ ಅಲೈನರ್ಸ್ ಮಲ್ಟಿ ಸ್ಪೆಷಾಲಿಟಿ ಕ್ಲಿನಿಕ್ಉಡುಪಿಯಲ್ಲಿ ನೂತನ ಶಾಖೆ ಶುಭಾರಂಭ

ಉಡುಪಿ: 18 ವರ್ಷಗಳ ವಾತ್ಸಲ್ಯಮಯ ಆರೈಕೆ ಮತ್ತು ನಗುಮೊಗದ ಚಿಕಿತ್ಸೆಯಿಂದ ಜನರ ನಂಬಿಕೆ ಗಳಿಸಿರುವ ಆನಂದ್ ಡೆಂಟಲ್ & ಆರ್ಥೋ ಅಲೈನರ್ಸ್ ಅವರ ನೂತನ ಮಲ್ಟಿಸ್ಪೆಷಾಲಿಟಿ ಕ್ಲಿನಿಕ್ ಆಗಸ್ಟ್ 23ರ ಭಾನುವಾರದಂದು ಉಡುಪಿ ಜಿಲ್ಲಾ ನ್ಯಾಯಾಲಯದ ಹಿಂಭಾಗದ ರಸ್ತೆ ಬಳಿ ಉದ್ಘಾಟನೆಗೊಂಡಿತು.ಹಿರಿಯ ದಂತ ಶಸ್ತ್ರಚಿಕಿತ್ಸಕ ಡಾ.ಯು. ವೆಂಕಟರಾಜ್ ಉದ್ಘಾಟನೆ ನೆರವೇರಿಸಿ, “ಈಗಾಗಲೇ ಈ ವೃತ್ತಿಯಲ್ಲಿ ಸಾಕಷ್ಟು ಹೆಸರುಗಳಿಸಿರುವ ಈ ವೈದ್ಯ ದಂಪತಿಗಳಿಗೆ ಮತ್ತಷ್ಟು ಯಶಸ್ಸು ಸಿಗಲಿ, ರೋಗಿಗಳೊಂದಿಗಿನ ಅವರ ಆತ್ಮೀಯ ಒಡನಾಟ, ತಾಳ್ಮೆಯ ಆರೈಕೆ ಮೆಚ್ಚುವಂತದ್ದು ” […]
ಎಂಸಿಸಿ ಬ್ಯಾಂಕ್ ನ ಕಾರ್ಕಳ ಶಾಖೆ ಸ್ವಂತ ಕಟ್ಟಡಕ್ಕೆ ಸ್ಥಳಾಂತರ

1912ರಲ್ಲಿ ಸ್ಥಾಪನೆಯಾಗಿ 114 ವರ್ಷಗಳ ಸಮರ್ಪಿತ ಸೇವೆಯನ್ನು ಪೂರೈಸಿರುವ MCC ಬ್ಯಾಂಕ್ ತನ್ನ ಕಾರ್ಕಳ ಶಾಖೆಯನ್ನುಬುಧವಾರ, ಆಗಸ್ಟ್ 26, 2026ರಂದು ಸಾಲ್ಮರ ರಸ್ತೆಯ ಫಾರ್ಚೂನ್ ಆರ್ಕಿಡ್ನ ನೆಲ ಮಹಡಿಯಲ್ಲಿರುವ ನೂತನ ಸ್ವಂತಕಟ್ಟಡಕ್ಕೆ ಸ್ಥಳಾಂತರಿಸಿದೆ.MCC ಬ್ಯಾಂಕ್ ನ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಅನಿಲ್ ಲೋಬೊ ಅವರು ನೂತನ ಶಾಖಾ ಕಚೇರಿಯನ್ನುಉದ್ಘಾಟಿಸಿದರು. ಶ್ರೀ ಮುನಿಯಾಲು ಉದಯ ಕುಮಾರ್ ಶೆಟ್ಟಿ ಅವರು ಸೇಫ್ ರೂಮ್ನ್ನು ಉದ್ಘಾಟಿಸಿದರು. ಅತ್ತೂರು ಸಂತಲಾರೆನ್ಸ್ ಮೈನರ್ ಬಸಿಲಿಕಾದ ಸಹಾಯಕ ಧರ್ಮಗುರುಗಳಾದ ವಂ. ಫಾ| ರಾಬಿನ್ ಸಾಂಥುಮಾಯರ್ […]
ತ್ರಿಶಾ ಪದವಿ ಪೂರ್ವ ಕಾಲೇಜಿನಲ್ಲಿ ಭರತನಾಟ್ಯ ಪ್ರಾತ್ಯಕ್ಷಿಕೆ

ಉಡುಪಿ – ಕಲ್ಯಾಣಪುರದಲ್ಲಿ ಇರುವ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಶೈಕ್ಷಣಿಕ ಸಹಭಾಗಿತ್ವದ ತ್ರಿಶಾ ಪದವಿ ಪೂರ್ವ ಕಾಲೇಜಿನಲ್ಲಿ ಶ್ರೀ ಭ್ರಾಮರೀ ನಾಟ್ಯಾಲಯ (ರಿ.), ಅಮ್ಮುಂಜೆ, ಉಡುಪಿ ಇವರ ರಜತ ವರ್ಷಾಚರಣೆ ಹಾಗೂ “ಗೆಜ್ಜೆಯೊಂದಿಗೆ ಬೆಳ್ಳಿ ಹೆಜ್ಜೆ – 13” ಕಾರ್ಯಕ್ರಮದ ಅಂಗವಾಗಿ “ನೃತ್ಯ ಪರಂಪರೆ” ಎಂಬ ಶೀರ್ಷಿಕೆಯಡಿ ಭರತನಾಟ್ಯ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ಕಾರ್ಯಕ್ರಮವು ಸಂಸ್ಕೃತಿ, ಆರೋಗ್ಯ ಮತ್ತು ಶಿಕ್ಷಣ ಎಂಬ ಆಶಯಗಳನ್ನು ಒಳಗೊಂಡಿತ್ತು. ಭರತನಾಟ್ಯದ ಮೂಲಕ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಯುವಜನರಿಗೆ ಪರಿಚಯಿಸುವುದು ಹಾಗೂ ಕಲೆಯ […]
ಸಣ್ಣ ಪುಟ್ಟ ಸಮಸ್ಯೆಗಳಿಗೂ ಮದ್ದು ತಗೊಳ್ಳುವ ಅಭ್ಯಾಸ ಇದ್ರೆ ಬಿಟ್ಟು ಬಿಡಿ: ರಾಜ್ಯದಲ್ಲೀಗ ಕಳಪೆ ಔಷಧಗಳದ್ದೇ ಸದ್ದು,98 ಕಳಪೆ ಗುಣಮಟ್ಟದ ಔಷಧ ಪತ್ತೆ

ಬೆಂಗಳೂರು: ರಾಜ್ಯದಲ್ಲಿ ಕಳಪೆ ಗುಣಮಟ್ಟದ ಔಷಧಗಳ ಪೂರೈಕೆ ಆತಂಕ ಮೂಡಿಸಿದ್ದು, 2021ರಿಂದ 2026ರ ಆಗಸ್ಟ್ವರೆಗೆ ಒಟ್ಟು 98 ಔಷಧಗಳು ನಿಗದಿತ ಗುಣಮಟ್ಟದ ಮಾನದಂಡ (NSQ) ಪರೀಕ್ಷೆಯಲ್ಲಿ ವಿಫಲವಾಗಿವೆ. ಮಾತ್ರೆ, ಸಿರಪ್, ಟಾನಿಕ್ ಸೇರಿದಂತೆ ವಿವಿಧ ಔಷಧಗಳು ಗುಣಮಟ್ಟ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡಿರುವುದು ಬೆಳಕಿಗೆ ಬಂದಿದೆ. ಸರ್ಕಾರಿ ಆಸ್ಪತ್ರೆಗಳಿಗೆ ಪೂರೈಕೆಯಾದ ಕೆಲವು ಔಷಧಗಳಲ್ಲೂ ಗುಣಮಟ್ಟದ ಲೋಪ ಕಂಡುಬಂದಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಪೂರೈಕೆಯಲ್ಲಿ 26 ಔಷಧ ಕಂಪನಿಗಳ ಲೋಪ ದಾಖಲಾಗಿದ್ದು, ಈ ಪೈಕಿ ಕೇವಲ 6 ಕಂಪನಿಗಳ ವಿರುದ್ಧ ಮಾತ್ರ […]
ಮಣಿಪಾಲದ ಎಂಎಸ್ಡಿಸಿಯಲ್ಲಿ AI ಆಧಾರಿತ ಆಫೀಸ್ ಆಟೊಮೇಷನ್ ತರಬೇತಿ, ಉದ್ಯೋಗಾವಕಾಶ ಪಡೆಯಲು ಇದು ಬೆಸ್ಟ್ ಟ್ರೈನಿಂಗ್! ಟ್ರೈ ಮಾಡಿ

ಮಣಿಪಾಲ: ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಬಳಸಿಕೊಂಡು ಕಚೇರಿ ಕೆಲಸಗಳನ್ನು ಸುಲಭವಾಗಿ ಹಾಗೂ ಪರಿಣಾಮಕಾರಿಯಾಗಿ ನಿರ್ವಹಿಸುವ ಕೌಶಲ್ಯಗಳನ್ನು ಕಲಿಯಲು ಮಣಿಪಾಲ್ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ (MSDC) ವತಿಯಿಂದ ‘Office Automation Using AI Tools’ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ತರಬೇತಿಯಲ್ಲಿ MS Word, MS Excel ಮತ್ತು MS PowerPoint ಬಳಕೆಯ ಜೊತೆಗೆ ವಿವಿಧ AI ಪರಿಕರಗಳ ಸಮನ್ವಯ, ಡೇಟಾ ವಿಶ್ಲೇಷಣೆ ಹಾಗೂ ಒಳನೋಟಗಳ ಸೃಷ್ಟಿ, ಡಾಕ್ಯುಮೆಂಟ್ ವಿನ್ಯಾಸ, ಪ್ರೆಸೆಂಟೇಶನ್ ಸುಧಾರಣೆ, ಸಂವಹನ ಮತ್ತು ಪ್ರಸ್ತುತಿ […]