ಕಾರ್ಕಳ ರೋಟರಿ ಬಾಲಭವನದಿಂದ ರಸ್ತೆಯಲ್ಲಿಯೇ ಬೇಕಾಬಿಟ್ಟಿ ಕಾರು ಪಾರ್ಕಿಂಗ್, ಜವಾಬ್ದಾರಿಯೇ ಮರೆತವರಿಂದ ಸಾರ್ವಜನಿಕರಿಗೆ ಸಮಸ್ಯೆ, ಅಪಘಾತವಾದರೂ ಕೇಳೋರಿಲ್ಲ!

ಕಾರ್ಕಳ: ಇಲ್ಲಿನ ಕೋರ್ಟ್ ರಸ್ತೆಯಲ್ಲಿರುವ ಕಾರ್ಕಳ ರೋಟರಿ ಬಾಲಭವನದಲ್ಲಿ ಏನೇ ಕಾರ್ಯಕ್ರಮಗಳಾದರೂ ಕಾರ್ಯಕ್ರಮಕ್ಕೆ ಬರುವವರು ಮುಖ್ಯ ರಸ್ತೆಯಲ್ಲಿಯೇ ಅಡ್ಡಾದಿಟ್ಟಿ ಪಾರ್ಕಿಂಗ್ ಮಾಡುತ್ತಿರುವ ಪರಿಣಾಮ ಸಾರ್ವಜನಿಕರಿಗೆ, ಸ್ಥಳೀಯರಿಗೆ ಇದೀಗ ಭಾರೀ ಸಮಸ್ಯೆಯಾಗುತ್ತಿದೆ. ಮುಖ್ಯವಾಗಿ ರಾತ್ರಿ ಸಮಯದಲ್ಲಿ ಸಭಾಭವನದಲ್ಲಿ ಯಾವುದೇ ಸಣ್ಣ ಪುಟ್ಟ ಕಾರ್ಯಕ್ರಮಗಳಾದರೂ ಯಾವುದೇ ನಾಗರಿಕ ಪ್ರಜ್ಞೆಯಿಲ್ಲದವಂತೆ, ಎಳ್ಳಷ್ಟೂ ಜವಾಬ್ದಾರಿ ಇಲ್ಲದವರಂತೆ ಸುಶಿಕ್ಷಿತರೇ ರಸ್ತೆಯಲ್ಲಿ ಕಾರುಗಳನ್ನು ನಿಲ್ಲಿಸುತ್ತಿರುವುದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ. ರಸ್ತೆಯ ಎರಡೂ ಬದಿಗಳಲ್ಲಿ ಮಾತ್ರವಲ್ಲದೇ ಇಲ್ಲಿನ ಜಂಕ್ಷನ್ ನ ನಡುವಿನಲ್ಲಿಯೂ ವಾಹನಗಳನ್ನು ಬೇಕಾಬಿಟ್ಟಿ ನಿಲ್ಲಿಸುತ್ತಿದ್ದಾರೆ. ಇದರ […]
ಪುತ್ತಿಗೆ ಸ್ವರ್ಣ ಫ್ರೆಂಡ್ಸ್ ವತಿಯಿಂದ ಅವಳಿ ಸಾರ್ವಜನಿಕ ಬಸ್ಸು ನಿಲ್ದಾಣ ಲೋಕಾರ್ಪಣೆ.

ಪೆರ್ಡೂರು: ಪೆರ್ಡೂರು ಗ್ರಾಮದ ಪುತ್ತಿಗೆಯಲ್ಲಿ 27 ವರ್ಷಗಳಿಂದ ಶೈಕ್ಷಣಿಕ, ಧಾರ್ಮಿಕ,ಆರ್ಥಿಕ ಮತ್ತು ಸಮಾಜಮುಖಿ ಕಾರ್ಯಗಳಲ್ಲಿ ಸಕ್ರೀಯವಾಗಿವಾಗಿರುವ ಸ್ವರ್ಣ ಫ್ರೆಂಡ್ಸ್ ವತಿಯಿಂದ ಪ್ರಯಾಣಿಕರ ಸುಖಕರ & ಶುಭಕರ ಪ್ರಯಾಣಕ್ಕೆ ಸುಮಾರು 1.50 ಲಕ್ಷ ರೂಪಾಯಿಗೂ ಹೆಚ್ಚು ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿಯ ಎರಡು ಬದಿಯಲ್ಲಿ ಸಾರ್ವಜನಿಕ ಬಸ್ಸು ತಂಗುದಾಣ ನಿರ್ಮಿಸಿ ಲೋಕಾರ್ಪಣೆ ಮಾಡಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಶೇಖರ ಕುಲಾಲ್ ವಹಿಸಿದ್ದರು. ಗೌರವಾಧ್ಯಕ್ಷ ಪಿ.ಕೆ ಅಹ್ಮದ್ ಉದ್ಘಾಟಿಸಿ 27 ವರ್ಷಗಳ ಹಿಂದೆ ಹುಟ್ಟು ಹಾಕಿದ ಸಂಸ್ಥೆ ಹೆಮ್ಮರವಾಗಿ ಬೆಳೆದು ಸಕ್ರೀಯವಾಗಿರುವುದಕ್ಕೆ ಸಂತಸ […]
ನೇಪಾಳ ಪ್ರವಾಹದ ಅಬ್ಬರಕ್ಕೆ 160 ಮಂದಿ ಸಾವು; 300 ಭಾರತೀಯರು ಸೇರಿ 500 ವಿದೇಶಿಗರು ನಾಪತ್ತೆ,ಇನ್ನಷ್ಟು ಮಂದಿ ಸಂಕಷ್ಟದಲ್ಲಿ!

ನವದೆಹಲಿ: ಕೆಲವೇ ಗಂಟೆಗಳಲ್ಲಿ ನಗರಗಳೇ ಕೊಚ್ಚಿಹೋಗುವಷ್ಟು ನೇಪಾಳದಲ್ಲಿ ಭೀಕರ ಹಠಾತ್ ಪ್ರವಾಹ ಸಂಭವಿಸಿದೆ. ರಸುವಾ ಪ್ರದೇಶದಲ್ಲಿ ಸಂಭವಿಸಿದ ಈ ದುರಂತದಲ್ಲಿ 160 ಮಂದಿ ಮೃತಪಟ್ಟಿದ್ದು, ಸಾವಿರಾರು ಜನರು ನಾಪತ್ತೆಯಾಗಿದ್ದಾರೆ ಎಂದು ನೇಪಾಳದ ವಿದೇಶಾಂಗ ಸಚಿವ ಶಿಶಿರ್ ಖನಾಲ್ ತಿಳಿಸಿದ್ದಾರೆ. ಕಠ್ಮಂಡುವಿನಲ್ಲಿ ನಡೆದ ಎನ್ಡಿಟಿವಿ ವರ್ಲ್ಡ್ ಅನ್ವೀಕ್ಷಾ ಶೃಂಗಸಭೆಯಲ್ಲಿ ಮಾತನಾಡಿದ ಅವರು, ಪ್ರವಾಹದಲ್ಲಿ ನಾಪತ್ತೆಯಾಗಿರುವವರಲ್ಲಿ ಹೆಚ್ಚಿನವರು ಮಾನಸ ಸರೋವರ ಯಾತ್ರಿಕರಾಗಿದ್ದಾರೆ ಎಂದು ಮಾಹಿತಿ ನೀಡಿದರು. 300 ಭಾರತೀಯರು ಸಂಪರ್ಕಕ್ಕೆ ಸಿಗುತ್ತಿಲ್ಲ ಪ್ರವಾಹ ಪೀಡಿತ ಮಾರ್ಗವನ್ನು ಭಾರತೀಯರು ಸೇರಿದಂತೆ ಹಲವು […]
‘ಟಾಕ್ಸಿಕ್’ ಭರ್ಜರಿ ಓಪನಿಂಗ್:ನೆಗೆಟಿವ್ ಪ್ರತಿಕ್ರಿಯೆಗಳ ನಡುವೆಯೂ ಮೊದಲ ದಿನವೇ ₹140 ಕೋಟಿಗೂ ಅಧಿಕ ಗಳಿಕೆ

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ವಿಶ್ವಾದ್ಯಂತ ಭರ್ಜರಿ ಆರಂಭ ಕಂಡಿದೆ. ಬಿಡುಗಡೆಯಾದ ಮೊದಲ ದಿನವೇ ಚಿತ್ರ ₹140 ಕೋಟಿಗೂ ಅಧಿಕ ಗಳಿಕೆ ಕಂಡಿದೆ ಎಂದು ಅಂದಾಜಿಸಲಾಗಿದೆ. ಭಾರತದಲ್ಲಿ ‘ಟಾಕ್ಸಿಕ್’ ಸುಮಾರು ₹120.75 ಕೋಟಿ ಹಾಗೂ ವಿದೇಶಿ ಮಾರುಕಟ್ಟೆಯಲ್ಲಿ ₹20 ಕೋಟಿ ಗಳಿಸಿದೆ ಎನ್ನಲಾಗಿದೆ. ಯಾವುದೇ ಪ್ರೀಮಿಯರ್ ಅಥವಾ ಸೆಲೆಬ್ರಿಟಿ ಶೋಗಳಿಲ್ಲದೆ ನೇರವಾಗಿ ಆರು ಭಾಷೆಗಳಲ್ಲಿ ತೆರೆಕಂಡ ಚಿತ್ರಕ್ಕೆ ಬಹುತೇಕ ಕಡೆ ಫ್ಯಾನ್ ಶೋಗಳು ಹೌಸ್ಫುಲ್ ಆಗಿವೆ. ಈ ಮೂಲಕ 2026ರಲ್ಲಿ ಮೊದಲ […]
ನೇಪಾಳ ಪ್ರವಾಹ: ಮಾನಸ ಸರೋವರ ಯಾತ್ರೆಗೆ ತೆರಳಿದ್ದ ನಾಲ್ವರು ಕನ್ನಡಿಗರು ನಾಪತ್ತೆ

ಬೆಂಗಳೂರು: ನೇಪಾಳ–ಟಿಬೆಟ್ ಗಡಿಯಲ್ಲಿ ಸಂಭವಿಸಿದ ಭೀಕರ ಪ್ರವಾಹ ಹಾಗೂ ಭೂಕುಸಿತದ ದುರಂತದಲ್ಲಿ ಕನ್ನಡಿಗರೂ ಸಿಲುಕಿಕೊಂಡಿದ್ದಾರೆ. ಮಾನಸ ಸರೋವರ ಯಾತ್ರೆಗೆ ತೆರಳಿದ್ದ ಬೆಂಗಳೂರು ಮೂಲದ ನಾಲ್ವರು ಎನ್ಆರ್ಐ ಕನ್ನಡಿಗರು ನಾಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಮೂಲತಃ ಬೆಂಗಳೂರಿನವರಾಗಿದ್ದು, ಸದ್ಯ ಅಮೆರಿಕದಲ್ಲಿ ನೆಲೆಸಿರುವ ನಾಲ್ವರು ಯಾತ್ರಿಕರು ಮಾನಸ ಸರೋವರ ಯಾತ್ರೆಗಾಗಿ ಅಮೆರಿಕದಿಂದ ನೇಪಾಳಕ್ಕೆ ಆಗಮಿಸಿದ್ದರು. ಪ್ರವಾಹ ಸಂಭವಿಸಿದ ಪ್ರದೇಶದಲ್ಲಿದ್ದ ಚೀನಾ ಎಂಬೆಸ್ಸಿಗೆ ತೆರಳಿದ್ದ ಅವರು, ದುರಂತದ ಬಳಿಕ ಸ್ನೇಹಿತರು ಹಾಗೂ ಕುಟುಂಬಸ್ಥರ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದಾರೆ. ಈ ಕುರಿತು ಅವರ ಸ್ನೇಹಿತರು […]