ಮೂಡ್ಲಕಟ್ಟೆ ನರ್ಸಿಂಗ್ ಕಾಲೇಜಿನಲ್ಲಿ ಓಣಂ ಆಚರಣೆ

ಕುಂದಾಪುರ: ಮೂಡ್ಲಕಟ್ಟೆ ನರ್ಸಿಂಗ್ ಕಾಲೇಜಿನಲ್ಲಿ ಶನಿವಾರ ಓಣಂ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಸಿಬ್ಬಂದಿ ಸಂಭ್ರಮದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.ಮೂಡ್ಲಕಟ್ಟೆ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಪ್ರೊ. ಜೆನ್ನಿಫರ್ ಫ್ರೀಡಾ ಮೆನೆಜಸ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಿದ್ಯಾರ್ಥಿಗಳಿಂದ ಪ್ರದರ್ಶಿಸಲಾದ ಸಾಂಪ್ರದಾಯಿಕ ತಿರುವಾತಿರಂ ನೃತ್ಯ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು. ನಂತರ ವಿವಿಧ ಮನರಂಜನಾತ್ಮಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು.ಅನುಮೋಲ್, ಆಸಿಫ್ ಹಾಗೂ ಹೀನಾ ಅವರು ಓಣಂ ಹಬ್ಬದ ಮಹತ್ವವನ್ನು ತಿಳಿಸಿದರು.ಪವಿತ್ರಾ ಅವರು ಕಾರ್ಯಕ್ರಮವನ್ನು ಸಂಯೋಜಿಸಿದರು.ಆಯಿಷಾ ರಫೀದಾ ನಿರೂಪಿಸಿದರು.
BPL ಕುಟುಂಬಗಳಿಗೆ ಗುಡ್‌ನ್ಯೂಸ್: ಉಚಿತ IVF ಚಿಕಿತ್ಸೆಗೆ ಸರ್ಕಾರದಿಂದ ಸಿಗುತ್ತೆ ನೆರವು

ಬೆಂಗಳೂರು: ರಾಜ್ಯದ BPL ಹಾಗೂ ಆರ್ಥಿಕವಾಗಿ ದುರ್ಬಲ ಕುಟುಂಬಗಳಿಗೆ ಕರ್ನಾಟಕ ಸರ್ಕಾರ ಮಹತ್ವದ ಆರೋಗ್ಯ ನೆರವು ಘೋಷಿಸಿದೆ. ಆಯುಷ್ಮಾನ್ ಭಾರತ್–ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ–ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ (AB-PMJAY-CM’s ArK) ಯೋಜನೆಯಡಿ ನೆರವಿನ ಸಂತಾನೋತ್ಪತ್ತಿ ತಂತ್ರಜ್ಞಾನ (ART) ಚಿಕಿತ್ಸೆಯನ್ನು ಜಾರಿಗೆ ತರಲು ಸರ್ಕಾರ ಮುಂದಾಗಿದೆ. ಇದರಿಂದ ಅರ್ಹ ಬಡ ಕುಟುಂಬಗಳು IVF ಸೇರಿದಂತೆ ದುಬಾರಿ ಫಲವತ್ತತೆ ಚಿಕಿತ್ಸೆಯನ್ನು ಸರ್ಕಾರಿ ಯೋಜನೆಯಡಿ ಪಡೆಯಲು ಸಾಧ್ಯವಾಗಲಿದೆ. ವಿಧಾನ ಪರಿಷತ್ತಿನಲ್ಲಿ ಎಂಎಲ್‌ಸಿ ಡಾ. ಧನಂಜಯ್ ಸರ್ಜಿ ಅವರು ಕೇಳಿದ ಪ್ರಶ್ನೆಗೆ […]
ನಾಲ್ಕು ಜನಪ್ರಿಯ ಔಷಧಿಗಳ ಮಾರಾಟಕ್ಕೆ ಕೇಂದ್ರದ ನಿಯಂತ್ರಣ, ಮಾದಕ ವ್ಯಸನಕ್ಕಾಗಿ ದುರುಪಯೋಗವಾಗುತ್ತಿದೆ ಈ ಔಷಧಿಗಳು

ನವದೆಹಲಿ: ಮಾದಕ ವ್ಯಸನಕ್ಕಾಗಿ ಔಷಧಿಗಳ ದುರುಪಯೋಗವಾಗುವ ಸಾಧ್ಯತೆ ಕುರಿತು ತಜ್ಞ ಸಂಸ್ಥೆಗಳು ಕಳವಳ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ, ಭಾರತದ ಅಪೆಕ್ಸ್ ಡ್ರಗ್ ರೆಗ್ಯುಲೇಟರ್ ನಾಲ್ಕು ಜನಪ್ರಿಯ ಕೇಂದ್ರ ನರಮಂಡಲದ (CNS) ಔಷಧಿಗಳ ಮಾರಾಟದ ಮೇಲೆ ನಿಯಂತ್ರಣವನ್ನು ಬಿಗಿಗೊಳಿಸಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೊರಡಿಸಿರುವ ಗೆಜೆಟ್ ಅಧಿಸೂಚನೆಯಲ್ಲಿ ಫ್ಲುಪೆಂಟಿಕ್ಸೋಲ್, ಝೋಪಿಕ್ಲೋನ್, ಗ್ಯಾಬಪೆಂಟಿನ್ ಮತ್ತು ಕ್ಯಾರಿಸೊಪ್ರೊಡಾಲ್ ಔಷಧಿಗಳನ್ನು ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ಕಾಯ್ದೆಯ ಶೆಡ್ಯೂಲ್ H1ಗೆ ಸೇರಿಸುವ ಪ್ರಸ್ತಾವನೆ ಮಾಡಲಾಗಿದೆ. ಫ್ಲುಪೆಂಟಿಕ್ಸೋಲ್ ಅನ್ನು ಸ್ಕಿಜೋಫ್ರೇನಿಯಾ ಚಿಕಿತ್ಸೆಗೆ, ಝೋಪಿಕ್ಲೋನ್ ಅನ್ನು […]
ಪರ್ಕಳ ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ’ಗೆ ಸಾಧನಾ ಪ್ರಶಸ್ತಿ 2026

ಪರ್ಕಳ: ಕರಾವಳಿ ಕರ್ನಾಟಕದ ಶ್ರೇಷ್ಠ ಬ್ಯಾಂಕ್ ಎಂದು ಜಗದ್ವಿಖ್ಯಾತಿ ಪಡೆದಿರುವ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಇದರ ವಾರ್ಷಿಕ ಸರ್ವಸದಸ್ಯರ ಮಹಾಸಭೆಯಲ್ಲಿ ಸೊಸೈಟಿಯು ಸಾಧಿಸಿದ ಸರ್ವತೋಮುಖ ಅಭಿವೃದ್ಧಿಗಾಗಿ ನೀಡುವ “ಸಾಧನಾ ಪ್ರಶಸ್ತಿ 2026“ ಪ್ರಥಮ ಬಾರಿಗೆ ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿ. ಪರ್ಕಳ ಇವರಿಗೆ ನೀಡಿ ಗೌರವಿಸಲಾಯಿತು. ಈ ಸಂದರ್ಭ ದ.ಕ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನ ಅಧ್ಯಕ್ಷರಾದ ಡಾ ಎಂ ಎನ್ ರಾಜೇಂದ್ರ ಕುಮಾರ್ , ಉಪಾಧ್ಯಕ್ಷರು […]
ಬ್ರಹ್ಮಾವರ: ತಂದೆ–ತಾಯಿ ಹತ್ಯೆ; ಆರೋಪಿ ಮಗನ ಬಂಧನ

ಉಡುಪಿ: ತಂದೆ–ತಾಯಿಗೆ ಸುತ್ತಿಗೆಯಿಂದ ತಲೆಗೆ ಹೊಡೆದು ಕೊಲೆ ಮಾಡಿದ ಆರೋಪದ ಮೇಲೆ ಪುತ್ರನನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ.ಗಾಂಧಿನಗರ ಬೈಕಾಡಿ ಗ್ರಾಮದ ಮೆಹಬೂಬ್ ಅಲಿ (55) ಹಾಗೂ ಅವರ ಪತ್ನಿ ಸಂಶದ್ ಬೇಗಂ (50) ಕೊಲೆಯಾದವರು. ಪುತ್ರ ಶಾಹಿದ್ ಅಲಿ (31) ಆರೋಪಿ.ತಂದೆ–ತಾಯಿ ಪ್ರತಿನಿತ್ಯ ಮಾನಸಿಕ ಹಿಂಸೆ ನೀಡುತ್ತಿದ್ದರೆಂಬ ಕಾರಣಕ್ಕೆ ಆ.23ರಂದು ರಾತ್ರಿ 7ರ ಸುಮಾರಿಗೆ ಅವರನ್ನು ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿರುವುದಾಗಿ ಆರೋಪಿ 112ಕ್ಕೆ ಕರೆ ಮಾಡಿ ತಿಳಿಸಿದ್ದಾನೆ. ಮಾಹಿತಿ ಆಧರಿಸಿ ಸ್ಥಳಕ್ಕೆ ತೆರಳಿದಾಗ ಇಬ್ಬರೂ ಮೃತಪಟ್ಟಿರುವುದು […]