ಪರ್ಕಳ: ಕರಾವಳಿ ಕರ್ನಾಟಕದ ಶ್ರೇಷ್ಠ ಬ್ಯಾಂಕ್ ಎಂದು ಜಗದ್ವಿಖ್ಯಾತಿ ಪಡೆದಿರುವ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಇದರ ವಾರ್ಷಿಕ ಸರ್ವಸದಸ್ಯರ ಮಹಾಸಭೆಯಲ್ಲಿ ಸೊಸೈಟಿಯು ಸಾಧಿಸಿದ ಸರ್ವತೋಮುಖ ಅಭಿವೃದ್ಧಿಗಾಗಿ ನೀಡುವ “ಸಾಧನಾ ಪ್ರಶಸ್ತಿ 2026“ ಪ್ರಥಮ ಬಾರಿಗೆ ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿ. ಪರ್ಕಳ ಇವರಿಗೆ ನೀಡಿ ಗೌರವಿಸಲಾಯಿತು. ಈ ಸಂದರ್ಭ ದ.ಕ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನ ಅಧ್ಯಕ್ಷರಾದ ಡಾ ಎಂ ಎನ್ ರಾಜೇಂದ್ರ ಕುಮಾರ್ , ಉಪಾಧ್ಯಕ್ಷರು ವಿನಯ ಕುಮಾರ್ ಸೂರಿಂಜೆ, ನಿರ್ದೇಶಕರುಗಳಾದ ರಾಜಾರಾಮ್ ಭಟ್, ಜಯರಾಮ್ ರೈ, ಡಾ| ದೇವಿಪ್ರಸಾದ್ ಶೆಟ್ಟಿ, ಬಿ ಅಶೋಕ್ ಕುಮಾರ್ ಶೆಟ್ಟಿ,ಮೋನಪ್ಪ ಶೆಟ್ಟಿ, ಕೆ. ಜೈರಾಜ್ ರೈ, ರಾಜೇಶ್ ರಾವ್ , ಉಡುಪಿ ಸಹಕಾರ ಸಂಘಗಳ ಉಪನಿಬಂಧಕರಾದ ಶ್ರೀಮತಿ ಲಾವಣ್ಯ ಕೆ . ಆರ್ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್.ಕೆ ಉಪಸ್ಥಿತರಿದ್ದರು. ಈ ಪ್ರಶಸ್ತಿಯನ್ನು ಸೊಸೈಟಿಯ ಅಧ್ಯಕ್ಷರಾದ ನರಸಿಂಹ ನಾಯಕ್ ಮಣಿಪಾಲ ಮತ್ತು ಸಿ ಇ ಒ ನಿತ್ಯಾನಂದ ನಾಯಕ್ ಸ್ವೀಕರಿಸಿದರು ಈ ಸಂದರ್ಭ ಸೊಸೈಟಿ ಉಪಾಧ್ಯಕ್ಷ ಮಹೇಶ್ ನಾಯಕ್ ಅಂಬಲ್ಬೆಟ್ಟು ಉಪಸ್ಥಿತರಿದ್ದರು.















