ಡೇವಿಡ್ ಡಿಸೋಜಾ ಕೊಲೆ ಪ್ರಕರಣ: ತಲೆಮರೆಸಿಕೊಂಡಿದ್ದ ಮತ್ತೋರ್ವ ಆರೋಪಿ ಬಂಧನ

ಉಡುಪಿ: ಕಾಪು ತಾಲ್ಲೂಕಿನ ಮುದರಂಗಡಿಯ ಸೈಂಟ್ ಕ್ಷೇವಿಯರ್ ಚರ್ಚ್ ಕಾಂಪ್ಲೆಕ್ಸ್‌ನಲ್ಲಿ ಪ್ರಿನ್ಸ್ ಎಂಟರ್‌ಪ್ರೈಸಸ್‌ ಮಾಲಕ ಡೇವಿಡ್ ಡಿಸೋಜಾ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಮತ್ತೋರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.ಆಗಸ್ಟ್ 7ರಂದು ಮಧ್ಯಾಹ್ನ 3.45ರ ಸುಮಾರಿಗೆ ಮೋಟಾರ್‌ಸೈಕಲ್‌ನಲ್ಲಿ ಬಂದಿದ್ದ ಆರೋಪಿಗಳ ಪೈಕಿ ಸಹಸವಾರ ಪಿಸ್ತೂಲ್‌ನಿಂದ ಡೇವಿಡ್ ಡಿಸೋಜಾ ಅವರ ತಲೆಗೆ ಗುಂಡು ಹಾರಿಸಿ ಹತ್ಯೆ ಮಾಡಿದ್ದ. ಈ ಕುರಿತು ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿದ್ದ ಆರೋಪಿಗಳಾದ ಅನ್ನೋಲ್ […]

ಗುಂಡಿಬೈಲು ಮುಖ್ಯ ರಸ್ತೆಯಲ್ಲಿ ಏಕಾಏಕಿ ಬಾಯ್ತೆರೆದ ಬೃಹತ್ ಕಂದಕ; ರಸ್ತೆ ಕುಸಿಯುತ್ತಿರುವುದನ್ನು ಕಂಡು ದಂಗಾದ ಸಾರ್ವಜನಿಕರು

ಉಡುಪಿ: ಉಡುಪಿ ಗುಂಡಿಬೈಲಿನ ಪೆಟ್ರೋಲ್ ಬಂಕ್‌ ಸಮೀಪ ಅಂಬಾಗಿಲು–ಕಲ್ಸಂಕ ಸಂಪರ್ಕ ಮುಖ್ಯ ರಸ್ತೆಯ ಮಧ್ಯಭಾಗದಲ್ಲಿ ಏಕಾಏಕಿ ಬೃಹತ್ ಕಂದಕವೊಂದು ಬಾಯ್ತೆರೆದಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.ಒಳಚರಂಡಿ ಮ್ಯಾನ್‌ಹೋಲ್‌ ಪಕ್ಕದಲ್ಲೇ ರಸ್ತೆ ಕುಸಿದು ಆಳವಾದ ಹೊಂಡ ನಿರ್ಮಾಣವಾಗಿದೆ. ರಸ್ತೆ ಕುಸಿಯುತ್ತಿರುವುದನ್ನು ಕಂಡ ಸಾರ್ವಜನಿಕರು ದಂಗಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಕಂದಕದ ವಿಡಿಯೊ ವೈರಲ್‌ ಆಗಿದೆ.ವಿಡಿಯೊ ವೈರಲ್‌ ಆದ ಬೆನ್ನಲ್ಲೇ ಎಚ್ಚೆತ್ತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕಂದಕದ ಸುತ್ತ ಬ್ಯಾರಿಕೇಡ್‌ ಅಳವಡಿಸಿದ್ದಾರೆ. ಅಲ್ಲದೆ, ‘ಒಳಚರಂಡಿ ಕಾಮಗಾರಿ ಪ್ರಗತಿಯಲ್ಲಿದೆ’ ಎಂಬ ಫಲಕವನ್ನೂ ಅಳವಡಿಸಿದ್ದಾರೆ. […]

ಬಾಳೆಹಣ್ಣು ಮಂಡಿ ಮೇಲೆ ದಾಳಿ: ರಾಸಾಯನಿಕಯುಕ್ತ ಬಾಳೆಹಣ್ಣುಗಳ ನಾಶ ಪಡಿಸಿದ ಅಧಿಕಾರಿಗಳು

ಉಡುಪಿ ಆಗಸ್ಟ್ 20: ಉಡುಪಿಯ ಅಲೆವೂರು, ಕೆಮ್ತೂರು ಹಾಗೂ ದುಗ್ಲಿಪದವು ಪರಿಸರದಲ್ಲಿ ಸಹಾಯಕ ಕಮೀಷನರ್ ರಶ್ಮಿಎಸ್.ಆರ್, ಆಹಾರ ಸುರಕ್ಷತಾ ಅಧಿಕಾರಿ ವಿವೇಕ್, ಉಡುಪಿ ತಹಶೀಲ್ದಾರ್ ಗುರುರಾಜ್ ಹಾಗೂ ವಿವಿಧ ಅಧಿಕಾರಿಗಳ ತಂಡಗಳು ಇಂದು ಬಾಳೆಹಣ್ಣು ದಾಸ್ತಾನು ಕೇಂದ್ರಗಳ ಮೇಲೆ ಇಂದು ದಿಢೀರ್ ದಾಳಿ ನಡೆಸಿ, ಸುಮಾರು 10 ಕೆ.ಜಿ ಯಷ್ಟು ರಾಸಾಯನಿಕ ಬಳಸಿದ ಬಾಳೆಹಣ್ಣುಗಳನ್ನು ಜಪ್ತಿ ಮಾಡಿ, ನಾಶಪಡಿಸಿದರು. ಜೊತೆಗೆ ಬಾಳೆಹಣ್ಣಿಗೆ ಬಳಸುತ್ತಿದ್ದ, ಆರೋಗ್ಯಕ್ಕೆ ಹಾನಿಕಾರಕ ರಾಸಾಯನಿಕಗಳು, ಕೃತಕ ಬಣ್ಣ ನೀಡುವ ರಾಸಾಯನಿಕಗಳು, ಅದನ್ನು ಬಳಸಲು ಉಪಯೋಗಿಸುವ […]

ದುಬೈನಲ್ಲಿ ‘ಅಜ್ಜಿಕಥೆ’ – ದಸ್ಕತ್ ಸಿನೆಮಾ ನಿರ್ದೇಶಕರಿಂದ ಹೊಸ ಚಿತ್ರ ‘ಅಜ್ಜಿಕಥೆ

ಲವ್ ಕಾಕ್‌ಟೈಲ್, ಅಪ್ಪೆ ಟೀಚರ್, ಮಾಲ್ಗುಡಿ ಡೇಸ್, ಹೌದ್ದೋ ಹುಲಿಯ ಸೇರಿದಂತೆ ವಿಭಿನ್ನ ಕಥೆಗಳು ಹಾಗೂ ಮನರಂಜನೆಯ ಚಿತ್ರಗಳನ್ನು ಪ್ರೇಕ್ಷಕರಿಗೆ ನೀಡಿರುವ ಸ್ವಯಂ‌ಪ್ರಭ ಎಂಟರ್ಟೈನ್ಮೆಂಟ್ & ಪ್ರೋಡಕ್ಷನ್ ಸಂಸ್ಥೆಯಿಂದ ಇದೀಗ ಮತ್ತೊಂದು ಹೊಸ ಚಿತ್ರ ತೆರೆಗೆ ಬರಲು ಸಜ್ಜಾಗಿದ್ದು ವಿಭಿನ್ನ ಕಥಾಹಂದರ ಹಾಗೂ ಹಾಸ್ಯ ಮನರಂಜನೆಯೊಂದಿಗೆ ಮೂಡಿಬರುತ್ತಿರುವ ಹೊಸ ಚಿತ್ರವೇ ‘ಅಜ್ಜಿಕಥೆ’. ಇಂದು ದುಬೈನಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ‘ಅಜ್ಜಿಕಥೆ’ ಚಿತ್ರದ ಶೀರ್ಷಿಕೆಯನ್ನು ಅಧಿಕೃತವಾಗಿ ಅನಾವರಣಗೊಳಿಸಲಾಯಿತು. ಶೀರ್ಷಿಕೆ ಅನಾವರಣದೊಂದಿಗೆ ಚಿತ್ರದ ಬಗ್ಗೆ ಕುತೂಹಲವೂ ಹೆಚ್ಚಾಗಿದೆ. ‘ದಸ್ಕತ್’ ಚಿತ್ರದ […]

Azim Premji Scholarship 2026: ಹೆಣ್ಣುಮಕ್ಕಳ ಉನ್ನತ ಶಿಕ್ಷಣಕ್ಕೆ ₹30,000 ವಿದ್ಯಾರ್ಥಿವೇತನ; ಅರ್ಜಿ ಸಲ್ಲಿಸುವುದು ಹೇಗೆ?

ಹೆಣ್ಣುಮಕ್ಕಳ ಉನ್ನತ ಶಿಕ್ಷಣಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಅಜೀಂ ಪ್ರೇಮ್‌ಜಿ ಫೌಂಡೇಶನ್ 2026ನೇ ಸಾಲಿನ ವಿದ್ಯಾರ್ಥಿವೇತನ ಯೋಜನೆಯನ್ನು ಪ್ರಕಟಿಸಿದೆ. ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ವಿದ್ಯಾರ್ಥಿನಿಯರಿಗೆ ಈ ಯೋಜನೆಯಡಿ ವಾರ್ಷಿಕ ₹30,000 ವರೆಗೆ ವಿದ್ಯಾರ್ಥಿವೇತನ ಪಡೆಯುವ ಅವಕಾಶವಿದೆ. ಸರ್ಕಾರಿ ಶಾಲೆಗಳಲ್ಲಿ 10ನೇ ಅಥವಾ 12ನೇ ತರಗತಿ ಪೂರ್ಣಗೊಳಿಸಿ, ಪ್ರಸ್ತುತ ಪದವಿ ಅಥವಾ ಡಿಪ್ಲೊಮಾ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ವಿದ್ಯಾರ್ಥಿನಿಯರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಯಾರಿಗೆ ಸಿಗಲಿದೆ ವಿದ್ಯಾರ್ಥಿವೇತನ? ಯಾವುದೇ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದ ಸರ್ಕಾರಿ […]