ಡಾಬರ್ ಜೇನುತುಪ್ಪ, ಎಣ್ಣೆ ಸೇರಿ ಹಲವು ಉತ್ಪನ್ನಗಳಿಗೆ FSSAI ಬ್ರೇಕ್: ‘100% ಶುದ್ಧ’ ಹೇಳಿಕೆಯೇ ವಿವಾದಕ್ಕೆ ಕಾರಣವಾಗ್ತಿದೆ!

ನವದೆಹಲಿ: ದೇಶದ ಪ್ರಮುಖ FMCG ಕಂಪನಿಗಳಲ್ಲಿ ಒಂದಾದ ಡಾಬರ್ ಇಂಡಿಯಾಗೆ (Dabur India) ಆಹಾರ ಸುರಕ್ಷತಾ ನಿಯಂತ್ರಕ FSSAI ದೊಡ್ಡ ಶಾಕ್ ನೀಡಿದೆ. ಜೇನುತುಪ್ಪ, ಎಣ್ಣೆ, ತುಪ್ಪ, ಆಪಲ್ ಸೈಡರ್ ವಿನೆಗರ್ ಸೇರಿದಂತೆ ಹಲವು ಆಹಾರ ಉತ್ಪನ್ನಗಳ ಮೇಲೆ ಬಳಸಲಾಗಿರುವ ‘100%’ ಸಂಬಂಧಿತ ಹೇಳಿಕೆಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ FSSAI, ಪ್ರಶ್ನಾರ್ಹ ಉತ್ಪನ್ನಗಳ ಮಾರಾಟವನ್ನು ತಕ್ಷಣ ನಿಲ್ಲಿಸುವಂತೆ ಕಂಪನಿಗೆ ನಿರ್ದೇಶಿಸಿದೆ. ಈ ಕುರಿತು 15 ದಿನಗಳೊಳಗೆ Action Taken Report (ATR) ಸಲ್ಲಿಸುವಂತೆಯೂ ಸೂಚಿಸಿದೆ. ಏನಿದು ‘100%’ […]

ಬಿ.ಕಾಂ. ಆದವರಿಗೆ ಉದ್ಯೋಗಾವಕಾಶ… ಅರ್ಜಿ ಸಲ್ಲಿಸಲು ಇಂದೇ ಕೊನೆಯ ದಿನ

ಹೆಬ್ರಿ: ಹೆಬ್ರಿಯಲ್ಲಿ ಮುಖ್ಯ ಕಚೇರಿ ಹೊಂದಿರುವ ಸೂರ್ಯ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯಲ್ಲಿ ಉದ್ಯೋಗಾವಕಾಶವಿದ್ದು, ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಇಂದು (ಅಗಸ್ಟ್ 4) ಕೊನೆಯ ದಿನವಾಗಿದ್ದು, ಆಸಕ್ತರು ಆದಷ್ಟು ಶೀಘ್ರದಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಉಡುಪಿ ಜಿಲ್ಲೆಯ ಬಿ.ಕಾಂ. ಪದವೀಧರರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಕಾರ್ಕಳ ಹಾಗೂ ಹೆಬ್ರಿಗಳಲ್ಲಿ ಆಫೀಸ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಹೆಚ್ಚಿನ ಮಾಹಿತಿಗೆ 9743569322 ಸಂಪರ್ಕಿಸಬಹುದಾಗಿದೆ.