ಗುರುವಾಯನಕೆರೆ ವಿದ್ವತ್ ಪಿಯು ಕಾಲೇಜಿನಿಂದ ಸಾಧಕರೊಂದಿಗೆ ಸಂವಾದ ಮತ್ತು ಸನ್ಮಾನ ಸಮಾರಂಭ

ಭಾವನೆಗಳಿಂದ ಪರಿತ್ಯಾಗಿಗಳಾಗಿ ಶಿಸ್ತಿಗೆ ವಿದ್ವತ್ತರಾಗಿ ಬೆಳ್ತಂಗಡಿ: ಪ್ರತಿಯೊಬ್ಬರಲ್ಲೂ ಅದ್ಭುತ ದೈವೀ ಶಕ್ತಿಯಿದೆ. ಅದನ್ನ ಗುರುತಿಸಿ ಪ್ರಕಟಿಸುವುದೇ ವಿದ್ಯಾಭ್ಯಾಸದ ಮೂಲ ಉದ್ದೇಶ. ಯುವ ಮನಸ್ಸಿನಲ್ಲಿ ಬಹಳಷ್ಟು ಕನಸುಗಳು ತುಂಬಿರುತ್ತವೆ. ಪದವಿ ಪೂರ್ವ ಶಿಕ್ಷಣ ಬದುಕಿನ ಕನಸುಗಳನ್ನು ಸಾಕ್ಷಾತ್ಕಾರಗೊಳಿಸುವ ಅಮೂಲ್ಯ ಸಮಯ. ಮನಸ್ಸನ್ನು ಹಿಡಿತದಲ್ಲಿಟ್ಟು, ಭಾವನೆಗಿಂತ ಮಿಗಿಲಾಗಿ ಶಿಸ್ತು, ಭಕ್ತಿ, ಶ್ರದ್ಧೆಗೆ ಸಮಯ ನೀಡಿದಲ್ಲಿ ಯಶಸ್ಸು ನಿಶ್ಚಿತ ಎಂದು ವಿಧಾನ ಪರಿಷತ್ ಮಾಜಿ ಸದಸ್ಯರು ಹಾಗೂ ಬೆಳ್ತಂಗಡಿ ಹಿರಿಯ ವಕೀಲರಾದ ಕೆ.ಪ್ರತಾಪಸಿಂಹ ನಾಯಕ್ ನುಡಿದರು. ಗುರುವಾಯನಕೆರೆ ವಿದ್ವತ್ ಪಿಯು ಕಾಲೇಜು […]
ಪೇಸ್‌ನಲ್ಲಿ ಬ್ಯಾಟರಿ ಥರ್ಮಲ್ ಮ್ಯಾನೇಜ್‌ಮೆಂಟ್ ಕುರಿತು ಎಫ್‌ಡಿಪಿ ಉದ್ಘಾಟನೆ

ಮಂಗಳೂರು, ಆ. 3: ಪಿ.ಎ. ಕಾಲೇಜ್ ಆಫ್ ಎಂಜಿನಿಯರಿಂಗ್ (ಪೇಸ್), ಮಂಗಳೂರಿನ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ವತಿಯಿಂದ ‘ಬ್ಯಾಟರಿ ಥರ್ಮಲ್ ಮ್ಯಾನೇಜ್‌ಮೆಂಟ್ ಸಿಸ್ಟಮ್ಸ್: ಪ್ರೆಸೆಂಟ್ & ಫ್ಯೂಚರ್’ ವಿಷಯದ ಕುರಿತು ಆಯೋಜಿಸಿರುವ ಒಂದು ವಾರದ AICTE ATAL Academy ಪ್ರಾಯೋಜಿತ ಅಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮ (ಎಫ್‌ಡಿಪಿ) ಸೋಮವಾರ ಉದ್ಘಾಟನೆಗೊಂಡಿತು. ಕಾರ್ಯಕ್ರಮವು ಆಗಸ್ಟ್ 3ರಿಂದ 8ರವರೆಗೆ ನಡೆಯಲಿದೆ.ಬೆಂಗಳೂರು ಬಿ.ಎಂ.ಎಸ್. ಕಾಲೇಜ್ ಆಫ್ ಎಂಜಿನಿಯರಿಂಗ್‌ನ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಸಹ ಪ್ರಾಧ್ಯಾಪಕ ಡಾ. ವೆಂಕಟೇಶ್ ಟಿ. ಲಮಾಣಿ ಮುಖ್ಯ ಅತಿಥಿಯಾಗಿ […]
Karnataka Dams: ಕರ್ನಾಟಕದ ಜಲಾಶಯಗಳ ಅಪ್‍ಡೇಟ್, ಮುಳುಗಡೆಯ ಭೀತಿಯಾ? ಅಥವಾ ರೈತರ ಮೊಗದಲ್ಲಿ ಮಂದಹಾಸವೇ.

ಕರ್ನಾಟಕದಲ್ಲಿ ಮಳೆಯ ಅಬ್ಬರ: ಕಾವೇರಿ, ಕೃಷ್ಣಾ ಜಲಾಶಯಗಳ ನೀರಿನ ಮಟ್ಟ ಏರಿಕೆ. ಹಾರಂಗಿ 92%, ಕಬಿನಿ 95%, ಆಲಮಟ್ಟಿ 90% ಭರ್ತಿ. ನದಿ ತೀರದ ಜನರಿಗೆ ಎಚ್ಚರಿಕೆ. ಕಾವೇರಿ ಕೊಳ್ಳದ ಜಲಾಶಯಗಳ ರಭಸ ಹಾರಂಗಿ ಅಣೆಕಟ್ಟು: ಶೇಕಡಾ 92.08% ರಷ್ಟು ಭರ್ತಿಯಾಗಿದ್ದು, ಗರಿಷ್ಠ ಮಟ್ಟವಾದ 2859 ಅಡಿಗೆ ತಲುಪಲು ಕೇವಲ ಕೆಲವೇ ಅಡಿಗಳು ಬಾಕಿ ಇವೆ. ಒಳಹರಿವು 11,645 ಕ್ಯೂಸೆಕ್‍ಗಳಷ್ಟಿದೆ. ಹೇಮಾವತಿ ಅಣೆಕಟ್ಟು: ಶೇಕಡಾ 76.56% ದಾಟಿದ್ದು, ಪ್ರಸ್ತುತ ಮಟ್ಟ 2912.24 ಅಡಿಯಲ್ಲಿದೆ.
ಅಲ್ಪಸಂಖ್ಯಾತ ವಿದ್ಯಾರ್ಥಿಗಳ ದೂರಶಿಕ್ಷಣ ಪ್ರವೇಶಾತಿ: ಅರ್ಜಿ ಸಲ್ಲಿಕೆ – ಅವಧಿ ವಿಸ್ತರಣೆ

ಉಡುಪಿ: ಪದವಿ ಶಿಕ್ಷಣದಿಂದ ವಂಚಿತರಾಗಿರುವ ರಾಜ್ಯದ ಅಲ್ಪಸಂಖ್ಯಾತರ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ ಮತ್ತು ಪಾರ್ಸಿ ಸಮುದಾಯದ ವಿದ್ಯಾರ್ಥಿಗಳಿಂದ ಪ್ರಸಕ್ತ ಶೈಕ್ಷಣಿಕ ಸಾಲಿಗೆ ಸಂಬoಧಿಸಿದoತೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಿಂದ ದೂರ ಶಿಕ್ಷಣ ಮಾದರಿಯಲ್ಲಿ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೋಮಾ ಹಾಗೂ ಸರ್ಟಿಫಿಕೇಟ್ ಕೋರ್ಸ್ಗಳ ಪ್ರವೇಶಾತಿಗೆ ವೆಬ್‌ಸೈಟ್ https://minority.ksouportal.comನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಅವಧಿಯನ್ನು ಆಗಸ್ಟ್ 10 ರ ವರೆಗೆ ವಿಸ್ತರಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ವೆಬ್‌ಸೈಟ್ https://dom.karnataka.gov.in ಅಥವಾ ಸಹಾಯವಾಣಿ ಸಂ: 9900667916, […]
ಯುವ ವಿಚಾರ ವೇದಿಕೆ (ರಿ) ಕೊಳಲಗಿರಿ: ಆಟಿಡೊಂಜಿ ದಿನ

ಉಡುಪಿ: ಕನ್ನಡ ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಯುವವಿಚಾರ ವೇದಿಕೆ (ರಿ) ಕೊಳಲಗಿರಿ ವತಿಯಿಂದ “ಆಟಿಡೊಂಜಿ ದಿನ” ಕಾರ್ಯಕ್ರಮ ನಡೆಯಿತು. ಹಿರಿಯರಾದ ಗಿರಿಜಾ ಆಚಾರ್ಯ ನರ್ನಾಡು, ಚಿನ್ನು ಕೊಳಲಗಿರಿ ಇವರು ಸಿದ್ದೆಯಿಂದ ಸೇರಿಗೆ, ಸೇರಿನಿಂದ ಕಳೆಸೆಗೆ ಅಕ್ಕಿ ಹಾಕುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ವೇದಿಕೆಯ ಅಧ್ಯಕ್ಷರಾದ ಸಂದೀಪ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಉಪ್ಪೂರು ವ್ಯವಸಾಯ ಸೇವಾ ಸಹಕಾರ ಸಂಘದ ನಿರ್ದೇಶಕರಾದ ರಮೇಶ ಕರ್ಕೇರ, ಉಪ್ಪೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸುನಿಲ್ ಶೆಟ್ಟಿ, ಹಿರಿಯರಾದ ಮಾಧವ […]