ಬೆಳ್ತಂಗಡಿಯ ಮುಂಡಾಜೆಯಲ್ಲಿ ದಾಖಲೆ 348.5 ಮಿ.ಮೀ ಮಳೆ, ಧರ್ಮಸ್ಥಳ ಸಂಪರ್ಕ ರಸ್ತೆಗಳಿಗೆ ಭೂಕುಸಿತದ ಹೊಡೆತ, ಮಲೆನಾಡಿನಲ್ಲೂ ದಾಖಲೆ ಮಳೆ

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಅಬ್ಬರ ಮುಂದುವರಿದಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮುಂಡಾಜೆಯಲ್ಲಿ ದಾಖಲೆಯ 348.5 ಮಿ.ಮೀ. ಮಳೆಯಾಗಿದೆ. ಅದೇ ತಾಲೂಕಿನ ಕಲ್ಮಂಜದಲ್ಲಿ 283.5 ಮಿ.ಮೀ. ಮಳೆ ದಾಖಲಾಗಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಪ್ರಕಟಿಸಿದ ಮಾಹಿತಿಯಂತೆ, ಆಗಸ್ಟ್‌ 1ರ ಬೆಳಗ್ಗೆ 8.30ರಿಂದ ಆಗಸ್ಟ್‌ 2ರ ಬೆಳಗ್ಗೆ 7.30ರವರೆಗೆ ರಾಜ್ಯದ ಹಲವು ಪ್ರದೇಶಗಳಲ್ಲಿ 50 ಮಿ.ಮೀ.ಗಿಂತ ಅಧಿಕ ಮಳೆಯಾಗಿದೆ. ಮುಂಡಾಜೆ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಸುರಿದ ಧಾರಾಕಾರ ಮಳೆಯಿಂದ ಜನಜೀವನ ಸಂಪೂರ್ಣ […]

ಯಡಕುಮರಿ ಬಳಿ ಭೂಕುಸಿತ: ಬೆಂಗಳೂರು-ಮಂಗಳೂರು ರೈಲು ಸಂಚಾರ ಸಂಪೂರ್ಣ ಸ್ಥಗಿತ, ಪ್ರಯಾಣಿಕರ ಪರದಾಟ

ಹಾಸನ: ಜಿಲ್ಲೆಯ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆಯ ಅಬ್ಬರ ಮುಂದುವರಿದಿದ್ದು, ಯಡಕುಮರಿ ಸಮೀಪ ರೈಲ್ವೆ ಹಳಿ ಮೇಲೆ ಗುಡ್ಡ ಕುಸಿದ ಪರಿಣಾಮ ಬೆಂಗಳೂರು–ಮಂಗಳೂರು ಮಾರ್ಗದ ರೈಲು ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಘಟನಾ ಸ್ಥಳಕ್ಕೆ ರೈಲ್ವೆ ಇಲಾಖೆ ಸಿಬ್ಬಂದಿ ಆಗಮಿಸಿ ಗುಡ್ಡ ತೆರವು ಕಾರ್ಯವನ್ನು ಭರದಿಂದ ಕೈಗೊಂಡಿದ್ದಾರೆ. ಹಳಿ ಪುನಃ ಸುರಕ್ಷಿತವಾಗುವವರೆಗೆ ಕಾಮಗಾರಿ ಮುಂದುವರಿಯಲಿದ್ದು, ಸುರಕ್ಷತಾ ದೃಷ್ಟಿಯಿಂದ ಈ ಮಾರ್ಗದಲ್ಲಿ ಸಂಚರಿಸುವ ಎಲ್ಲಾ ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ರೈಲು ಸಂಚಾರ ರದ್ದತಿಯಿಂದ ಪ್ರಯಾಣಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. […]

ಅ. 1ರಿಂದ ಬದಲಾಗಲಿದೆ FD ನಿಯಮ; RBI ಹೊಸ ರೂಲ್ಸ್‌ ನಿಮಗೆ ಗೊತ್ತಿರಲಿ

ನವದೆಹಲಿ: ಸ್ಥಿರ ಠೇವಣಿ (FD) ಹೂಡಿಕೆದಾರರಿಗೆ ಸಂಬಂಧಿಸಿದಂತೆ ಭಾರತೀಯ ರಿಸರ್ವ್ ಬ್ಯಾಂಕ್ (RBI)ನ ನಿಯಮಗಳಲ್ಲಿ ಮಹತ್ವದ ಬದಲಾವಣೆಗಳು ಜಾರಿಗೆ ಬರಲಿವೆ. ವಿಶೇಷವಾಗಿ ದೊಡ್ಡ ಮೊತ್ತದ ಬಲ್ಕ್ ಡೆಪಾಸಿಟ್‌ಗಳ (Bulk Deposits) ಮೇಲಿನ ಬಡ್ಡಿದರ ನಿಗದಿ ಹಾಗೂ ಪಾರದರ್ಶಕತೆಗೆ ಸಂಬಂಧಿಸಿದ ನಿಯಮಗಳಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಬ್ಯಾಂಕ್‌ಗಳು ಠೇವಣಿಗಳ ಮೇಲಿನ ಬಡ್ಡಿದರಗಳನ್ನು ಮುಂಚಿತವಾಗಿ ಪ್ರಕಟಿಸುವುದು ಮತ್ತು ಒಂದೇ ರೀತಿಯ ಠೇವಣಿಗಳಿಗೆ ಏಕರೂಪದ ದರವನ್ನು ಅನುಸರಿಸುವುದು RBI ನಿಯಮಗಳ ಪ್ರಮುಖ ಅಂಶಗಳಾಗಿವೆ. ಬಲ್ಕ್ ಡೆಪಾಸಿಟ್ ಎಂದರೇನು? ಬಲ್ಕ್ ಡೆಪಾಸಿಟ್ ಎಂದರೆ […]