ಮಣಿಪಾಲ ಜ್ಞಾನಸುಧಾದಲ್ಲಿ ನೀಟ್ ಸಾಧಕರಿಗೆ ಅಭಿನಂದನೆ

ಉಡುಪಿ: ರಾಷ್ಟ್ರಮಟ್ಟದ ಎಂಬಿಬಿಎಸ್ ಹಾಗೂ ಇತರ ವೈದ್ಯಕೀಯ ಕೋರ್ಸುಗಳ ಪ್ರವೇಶಕ್ಕೆ ಎನ್‍ಟಿಎ ನಡೆಸಿದ ನೀಟ್ 2026ರ ಫಲಿತಾಂಶದಲ್ಲಿ 720ಕ್ಕೆ 680 ಅಂಕಗಳೊಂದಿಗೆ ಜನರಲ್ ಮೆರಿಟ್‍ನಲ್ಲಿ 267ನೇ ರ್ಯಾಂಕ್ ಪಡೆದು ಅವಿಭಜಿತ ದ.ಕ. ಮತ್ತು ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನಿಯಾದ ಜ್ಞಾನಸುಧಾದ ಮೇಧಾಂಶ್ ಎನ್ ಬಿ ಇವರಿಗೆ 2.5ಲಕ್ಷ, ಹಾಗೂ 670 ಅಂಕಗಳೊಂದಿಗೆ ರಾಷ್ಟ್ರಮಟ್ಟದಲ್ಲಿ 701ನೇ ರ್ಯಾಂಕ್ ಪಡೆದುಕೊಂಡ ಅನಿರುದ್ಧ್ ಆರ್ ಉಡುಪ ಇವರಿಗೆ 2ಲಕ್ಷ ರೂಗಳ ಪ್ರೋತ್ಸಾಹಧನವನ್ನು ಘೋಷಿಸಲಾಯಿತು. ಮಣಿಪಾಲ ಜ್ಞಾನಸುಧಾದಲ್ಲಿ ನಡೆದ ನೀಟ್ ಸಾಧಕರ ಅಭಿನಂದನಾ […]

ಗ್ರಾಹಕರಿಗೆ ಶಾಕ್ ನೀಡಿದ ವಾಹನ ತಯಾರಕ ಕಂಪನಿಗಳು,ಆಗಸ್ಟ್ 1ರಿಂದ ಬೆಲೆ ಏರಿಕೆಯ ಬಿಸಿ

ನವದೆಹಲಿ: ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಬೆಲೆ ಏರಿಕೆಯ ಹೊರೆ ನಡುವೆಯೇ ಜನರಿಗೆ ಮತ್ತೊಂದು ಆಘಾತ ಎದುರಾಗಿದೆ. ಆಗಸ್ಟ್ 1ರಿಂದ ಹಲವು ವಾಹನ ತಯಾರಕ ಕಂಪನಿಗಳು ತಮ್ಮ ವಾಹನಗಳ ಬೆಲೆ ಹೆಚ್ಚಳಕ್ಕೆ ಮುಂದಾಗಿದ್ದು, ಇದರ ನೇರ ಪರಿಣಾಮ ಗ್ರಾಹಕರ ಮೇಲೆ ಬೀಳಲಿದೆ. ಇದರ ಜೊತೆಗೆ ಟ್ರಾವೆಲ್ಸ್ ಮಾಲೀಕರ ಸಂಘಗಳೂ ಬಾಡಿಗೆ ದರ ಹೆಚ್ಚಿಸುವ ಸೂಚನೆ ನೀಡಿವೆ. ಜಾಗತಿಕ ಮಟ್ಟದಲ್ಲಿ ಯುದ್ಧದ ಪರಿಣಾಮ, ಹಣದುಬ್ಬರ ಹಾಗೂ ಉಕ್ಕು, ಅಲ್ಯೂಮಿನಿಯಂ, ರಬ್ಬರ್, ಪ್ಲಾಸ್ಟಿಕ್, ಎಲೆಕ್ಟ್ರಾನಿಕ್ ಚಿಪ್‌ಗಳು, ಬ್ಯಾಟರಿಗಳು ಮತ್ತು ವಿವಿಧ ಬಿಡಿಭಾಗಗಳ […]

ಒಗ್ಗಟ್ಟಿನಿಂದ ಕೆಲಸ ಮಾಡೋಣ: ಸಿ.ಎಂ

ನವದೆಹಲಿ: ‘ರಾಜ್ಯದ ವಿಚಾರ ಬಂದಾಗ, ರಾಜ್ಯದ ಹಿತಕ್ಕಾಗಿ ನಾವೆಲ್ಲ ಒಟ್ಟಿಗೇ ಕೆಲಸ ಮಾಡೋಣ. ರಾಜ್ಯದ ಜನರ ಕಲ್ಯಾಣಕ್ಕೆ ಪಕ್ಷ ರಾಜಕಾರಣ ಪಕ್ಕಕ್ಕೆ ಇಡೋಣ’ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು. ಹಲವು ವರ್ಷಗಳಿಂದ ಕೇಂದ್ರ ಸರ್ಕಾರದ ಮಟ್ಟದಲ್ಲಿ ನನೆಗುದಿಗೆ ಬಿದ್ದಿರುವ ರಾಜ್ಯದ ಪ್ರಸ್ತಾವಗಳಿಗೆ ಅನುಮೋದನೆ ಪಡೆಯುವ ಹಾಗೂ ಒತ್ತಡ ಹೇರುವ ಸಂಬಂಧ ಕರ್ನಾಟಕ ಭವನದಲ್ಲಿ ಸೋಮವಾರ ರಾತ್ರಿ ನಡೆದ ಸಂಸದರ ಸಭೆಯಲ್ಲಿ ಅವರು ಮಾತನಾಡಿದರು.‘ರಾಜ್ಯದ ಪ್ರಗತಿಗೆ ನಿಮ್ಮ ಸಹಕಾರ ಬಯಸುತ್ತೇನೆ. ಕೇಂದ್ರ ಸರ್ಕಾರದ ಮುಂದೆ ಬಾಕಿ ಉಳಿದಿರುವ […]

ಅಸ್ಸಾಂ ಪ್ರವಾಹ ಪರಿಸ್ಥಿತಿ ಸುಧಾರಿಸಿದ್ರೂ 4.45 ಲಕ್ಷ ಜನಕ್ಕೆ ತಪ್ಪದ ಸಂಕಷ್ಟ

ಗುವಾಹಟಿ: ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಈಗ ಕೊಂಚ ಸುಧಾರಿಸಿದೆ, ಕಳೆದ 24 ಗಂಟೆಯಲ್ಲಿ ಯಾವುದೇ ಸಾವು – ನೋವುಗಳು ಸಂಭವಿಸಿಲ್ಲ. ಆದಾಗ್ಯೂ ಇಲ್ಲಿನ 6 ಜಿಲ್ಲೆಗಳ ಸುಮಾರು 4.45 ಲಕ್ಷಕ್ಕೂ ಹೆಚ್ಚು ಮಂದಿ ಇನ್ನೂ ಸಂಕಷ್ಟದ ಪರಿಸ್ಥಿತಿಯಲ್ಲೇ ದಿನದೂಡುವಂತಾಗಿದೆ ಎಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ASDMA) ಹೇಳಿದೆ. ASDMA ಬಿಡುಗಡೆ ಮಾಡಿದ ವರದಿ, ಶಿವಸಾಗರ್, ಗೋಲಾಘಾಟ್, ಚರೈದಿಯೋ, ಜೋರ್ಹಾಟ್, ನಾಗಾಂವ್ ಹಾಗೂ ಕಾಮರೂಪ್ (ಮೆಟ್ರೋಪಾಲಿಟನ್) ಜಿಲ್ಲೆಗಳ ಒಟ್ಟು 4,45,495 ಜನರು ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಗೋಲಾಘಾಟ್ […]

ನಿಮ್ಮ ಮಕ್ಕಳ ಭವಿಷ್ಯ ಚೆನ್ನಾಗಿರಬೇಕೇ? ಇಂದಿನಿಂದಲೇ ಹೀಗೆ ಮಾಡಿ

ಜು.28 ವಿಶ್ವ ಪ್ರಕೃತಿ ಸಂರಕ್ಷಣಾ ದಿನ: ಪ್ರಕೃತಿಯನ್ನು ಉಳಿಸುವುದು ಇಂದು ಆಯ್ಕೆಯಲ್ಲ, ನಮ್ಮೆಲ್ಲರ ಜವಾಬ್ದಾರಿ! ನಮ್ಮ ಮುಂದಿನ ಪೀಳಿಗೆ ನೆಮ್ಮದಿಯಿಂದ ಬದುಕಬೇಕೆಂದರೆ, ಅವರಿಗೆ ಸ್ವಚ್ಛ ಗಾಳಿ, ನೀರು ದೊರೆಯಬೇಕಾದರೆ ನಾವು ಇಂದು ಎಚ್ಚೆತ್ತುಕೊಳ್ಳಬೇಕಿದೆ. ಪ್ರಕೃತಿ ಎಂದರೆ ಕೇವಲ ಕಾಡು, ಬೆಟ್ಟ, ನದಿ, ಸಮುದ್ರಗಳಲ್ಲ. ನಾವು ಉಸಿರಾಡುವ ಗಾಳಿ, ಕುಡಿಯುವ ನೀರು, ತಿನ್ನುವ ಆಹಾರದಿಂದ ಹಿಡಿದು ನಮ್ಮ ಬದುಕಿನ ಪ್ರತಿಯೊಂದು ಹೆಜ್ಜೆಯಲ್ಲೂ ಪ್ರಕೃತಿಯ ಕೊಡುಗೆ ಇದೆ. ಆದರೆ ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಅತಿಯಾದ ನಗರೀಕರಣ, ಕಾಡುಗಳ ನಾಶ, ಪ್ಲಾಸ್ಟಿಕ್ […]