ಮಣಿಪಾಲ ಜ್ಞಾನಸುಧಾದಲ್ಲಿ ನೀಟ್ ಸಾಧಕರಿಗೆ ಅಭಿನಂದನೆ

ಉಡುಪಿ: ರಾಷ್ಟ್ರಮಟ್ಟದ ಎಂಬಿಬಿಎಸ್ ಹಾಗೂ ಇತರ ವೈದ್ಯಕೀಯ ಕೋರ್ಸುಗಳ ಪ್ರವೇಶಕ್ಕೆ ಎನ್‍ಟಿಎ ನಡೆಸಿದ ನೀಟ್ 2026ರ ಫಲಿತಾಂಶದಲ್ಲಿ 720ಕ್ಕೆ 680 ಅಂಕಗಳೊಂದಿಗೆ ಜನರಲ್ ಮೆರಿಟ್‍ನಲ್ಲಿ 267ನೇ ರ್ಯಾಂಕ್ ಪಡೆದು ಅವಿಭಜಿತ ದ.ಕ. ಮತ್ತು ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನಿಯಾದ ಜ್ಞಾನಸುಧಾದ ಮೇಧಾಂಶ್ ಎನ್ ಬಿ ಇವರಿಗೆ 2.5ಲಕ್ಷ, ಹಾಗೂ 670 ಅಂಕಗಳೊಂದಿಗೆ ರಾಷ್ಟ್ರಮಟ್ಟದಲ್ಲಿ 701ನೇ ರ್ಯಾಂಕ್ ಪಡೆದುಕೊಂಡ ಅನಿರುದ್ಧ್ ಆರ್ ಉಡುಪ ಇವರಿಗೆ 2ಲಕ್ಷ ರೂಗಳ ಪ್ರೋತ್ಸಾಹಧನವನ್ನು ಘೋಷಿಸಲಾಯಿತು.

ಮಣಿಪಾಲ ಜ್ಞಾನಸುಧಾದಲ್ಲಿ ನಡೆದ ನೀಟ್ ಸಾಧಕರ ಅಭಿನಂದನಾ ಕಾರ್ಯಕ್ರಮದಲ್ಲಿ 611 ಅಂಕ ಪಡೆದ ಪಿ ಅಖಿಲ್ ಶರ್ಮ(6933ನೇ ರ್ಯಾಂಕ್ (ಜನರಲ್ ಮೆರಿಟ್)), 603 ಅಂಕ ಪಡೆz ಎನ್ ಶ್ರೇಯಸ್(9124ನೇ ರ್ಯಾಂಕ್ (ಜನರಲ್ ಮೆರಿಟ್)) ಹಾಗೂ 500ಕ್ಕಿಂತ ಅಧಿಕ ಅಂಕಗಳನ್ನು ಪಡೆದುಕೊಂಡ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಡೀನ್ ಅಕಾಡೆಮಿಕ್ಸ್ ಡಾ.ಮಿಥುನ್ ಯು ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದರು. ಮಣಿಪಾಲ ಜ್ಞಾನಸುಧಾದ ಪ್ರಾಂಶುಪಾಲರಾದ ಗಣೇಶ್ ಶೆಟ್ಟಿ ಮಾತನಾಡಿ ಮಣಿಪಾಲ ಜ್ಞಾನಸುಧಾದ ಪ್ರಥಮ ಬ್ಯಾಚ್ ನ ಫಲಿತಾಂಶವನ್ನು ಪ್ರಶಂಶಿಸಿದರು. ಈ ಬಾರಿಯ ನೀಟ್ 2026ರ ಫಲಿತಾಂಶದಲ್ಲಿ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಒಟ್ಟು 528 ವಿದ್ಯಾರ್ಥಿಗಳಲ್ಲಿ 15 ವಿದ್ಯಾರ್ಥಿಗಳು 600ಕ್ಕಿಂತ ಅಧಿಕ ಅಂಕ, 59 ವಿದ್ಯಾರ್ಥಿಗಳು 550ಕ್ಕಿಂತ ಅಧಿಕ ಹಾಗೂ 133 ವಿದ್ಯಾರ್ಥಿಗಳು 500ಕ್ಕಿಂತ ಅಧಿಕ ಅಂಕ ಪಡೆದಿದ್ದಾರೆ. ಸಂಸ್ಥೆಯ 260 ವಿದ್ಯಾರ್ಥಿಗಳು 90 ಪರ್ಸಂಟೈಲ್‍ಗಿಂತ ಅಧಿಕ ಪಡೆದಿದ್ದಾರೆ.
ಈ ಸಂದರ್ಭದಲ್ಲಿ ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್‍ನ ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀಮತಿ ಜ್ಯೋತಿ ಪದ್ಮನಾಭ ಭಂಡಿ, ಉಪ ಪ್ರಾಂಶುಪಾಲರಾದ ರವಿ ಜಿ ಮತ್ತು ಹೇಮಂತ ಎಲ್ಲಾ ವಿಭಾಗಗಳ ಮುಖ್ಯಸ್ಥರುಗಳು ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕಿ ಕು.ಮಂಜುಳಾ ಇವರು ಕಾರ್ಯಕ್ರಮ ನಿರೂಪಿಸಿದರು.