ಅಪರಿಚಿತ ವಾಟ್ಸಪ್ ಸಂಖ್ಯೆಯಿಂದ ಬಂತು ಮದುವೆ ಆಹ್ವಾನ ಪತ್ರಿಕೆ, ಓಪನ್ ಮಾಡಿದ್ದೇ ಬ್ಯಾಂಕ್ ಖಾತೆಯಿಂದ ₹9.96 ಲಕ್ಷ ಢಮಾರ್, ನಿಮಗೂ ಹೀಗಾಗಬಹುದು ಎಚ್ಚರ!

ಬೆಂಗಳೂರು: ವಾಟ್ಸಪ್‌ಗೆ ಅಪರಿಚಿತ ಸಂಖ್ಯೆಯಿಂದ ಬರುವ ಸಂದೇಶಗಳು, ಲಿಂಕ್‌ಗಳು ಅಥವಾ ಫೈಲ್‌ಗಳನ್ನು ತೆರೆಯುವ ಮುನ್ನ ಎಚ್ಚರಿಕೆ ವಹಿಸುವಂತೆ ಸೈಬರ್ ತಜ್ಞರು ಸಲಹೆ ನೀಡುತ್ತಿದ್ದಾರೆ. ಆದರೂ ಪ್ರತೀ ದಿನವೂ ಒಂದಿಲ್ಲೊಂದು ಸೈಬರ್ ಪ್ರಕರಣ ಆಗುತ್ತಲೇ ಇದೆ. ಮದುವೆ ಆಹ್ವಾನ ಪತ್ರಿಕೆ ಎಂದು ನಂಬಿ APK ಫೈಲ್ ತೆರೆದ ಸರ್ಕಾರಿ ಅಧಿಕಾರಿಯೊಬ್ಬರು ಸೈಬರ್ ವಂಚಕರ ಬಲೆಗೆ ಬಿದ್ದು ಸುಮಾರು ₹9.96 ಲಕ್ಷ ಕಳೆದುಕೊಂಡಿದ್ದಾರೆ. ಪೊಲೀಸರ ಮಾಹಿತಿ ಪ್ರಕಾರ, ಅರಣ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ರಮೇಶ್ ಬಾಬು ಅವರಿಗೆ ಜುಲೈ 14ರಂದು ಸಂಜೆ […]
ದ.ಕ-ಉಡುಪಿ ಜಿಲ್ಲೆಯಲ್ಲಿ ಇಂದು ಕರೆಂಟ್ ಇರಲ್ಲ; ಮೆಸ್ಕಾಂ ಮನವಿ ಏನು ಗೊತ್ತಾ?

ಮಂಗಳೂರು/ಉಡುಪಿ: ಮೆಸ್ಕಾಂ (MESCOM) ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗುತ್ತಿರುವ ಹಿನ್ನೆಲೆಯಲ್ಲಿ, ಜುಲೈ 21ರಂದು ಕರಾವಳಿಯ ಮಂಗಳೂರು, ಉಡುಪಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ವಿವಿಧ ಪ್ರದೇಶಗಳಲ್ಲಿ ಬೇರೆ ಬೇರೆ ಸಮಯದಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಮನವಿ ಮಾಡಿದೆ. ಯಾವೆಲ್ಲಾ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ? ಮೆಸ್ಕಾಂ ಪ್ರಕಟಣೆಯ ಪ್ರಕಾರ, ನಿರ್ವಹಣಾ ಕಾಮಗಾರಿ ನಡೆಯುವ ಪ್ರದೇಶಗಳಲ್ಲಿ ನಿಗದಿತ ಅವಧಿಯಲ್ಲಿ ವಿದ್ಯುತ್ ಪೂರೈಕೆ ಇರುವುದಿಲ್ಲ. ಮಂಗಳೂರು: ಬೆಳಗ್ಗೆ 9:30ರಿಂದ ಸಂಜೆ 5:30ರವರೆಗೆ […]
ಎದೆಹಾಲುಣಿಸುವಾಗ ಮೊಬೈಲ್ ಸ್ಕ್ರೀನ್ ನೋಡೋ ತಾಯಂದಿರೇ, ಈ ಎಚ್ಚರಿಕೆ ಇರಲಿ!

ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಫೋನ್ ನಮ್ಮ ಜೀವನದ ಅವಿಭಾಜ್ಯ ಭಾಗವಾಗಿದೆ. ಊಟ ಮಾಡುವಾಗ, ವಿಶ್ರಾಂತಿ ಪಡೆಯುವಾಗ ಮಾತ್ರವಲ್ಲದೆ, ಕೆಲ ತಾಯಂದಿರು ಮಗುವಿಗೆ ಎದೆಹಾಲುಣಿಸುವ ಸಮಯದಲ್ಲೂ ಮೊಬೈಲ್‌ನಲ್ಲಿ ಚಾಟ್ ಮಾಡುವುದು, ಸಾಮಾಜಿಕ ಜಾಲತಾಣಗಳನ್ನು ಸ್ಕ್ರೋಲ್ ಮಾಡುವುದು ಅಥವಾ ವಿಡಿಯೋ ನೋಡುವುದನ್ನು ರೂಢಿಸಿಕೊಂಡಿರುತ್ತಾರೆ. ಆದರೆ, ಹಾಲುಣಿಸುವಂತಹ ಅಮೂಲ್ಯ ಸಮಯದಲ್ಲಿ ತಾಯಿಯ ಗಮನ ಮೊಬೈಲ್‌ಗಿಂತ ಮಗುವಿನ ಮೇಲಿರುವುದು ಹೆಚ್ಚು ಮುಖ್ಯ ಎನ್ನುತ್ತಾರೆ ತಜ್ಞರು. ಎದೆಹಾಲು ಕೇವಲ ಆಹಾರವಲ್ಲ ಮಗುವಿಗೆ ಎದೆಹಾಲು ಪೌಷ್ಟಿಕ ಆಹಾರ ನೀಡುವುದರ ಜೊತೆಗೆ, ತಾಯಿ ಮತ್ತು ಮಗುವಿನ […]
ಹಾವು ಕಡಿತ ಔಷಧಿ: ಸಾಮಾಜಿಕ ಜಾಲತಾಣದಲ್ಲಿ ತಪ್ಪು ಸಂದೇಶ

ಮಂಗಳೂರು: ಹಾವು ಕಡಿತಕ್ಕೆ ಈ ಔಷಧಿ ಲಭ್ಯವಿದೆ ಎಂಬ ಶೀರ್ಷಿಕೆಯಡಿಯಲ್ಲಿ ಲಸಿಕೆಯ ಫೋಟೋದೊಂದಿಗೆ, “ನಿಮ್ಮಲ್ಲಿ ಯಾರಿಗಾದರೂ ಹಾವು ಕಚ್ಚಿದರೆ 108 ಕ್ಕೆ ಕರೆ ಮಾಡಿ ಅವರು ನಿಮ್ಮ ಮನೆಗೆ ಬಂದು ಈ ಇಂಜೆಕ್ಷನ್ ನೀಡುತ್ತಾರೆ. ನೀವು ಅಪಾಯದಿಂದ ಪಾರಾಗುತ್ತೀರಿ. ಈ ಮಾಹಿತಿಗಳನ್ನು ಎಲ್ಲಾ ಗುಂಪುಗಳಿಗೆ ಹಂಚಿಕೊಳ್ಳಿ” ಎಂಬ ವರದಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರವಾಗುತ್ತಿದೆ. ಈ ವರದಿ ತಪ್ಪು ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ಜನಸಾಮಾನ್ಯರಿಗೆ ನೀಡುತ್ತಿದೆ, ಆದ್ದರಿಂದ ಸಾರ್ವಜನಿಕರು ಈ ಮಾಹಿತಿಯ ಬಗ್ಗೆ ಎಚ್ಚರ ವಹಿಸಬೇಕು. […]
ಬೆಳ್ತಂಗಡಿ: ಮದುವೆಯಾಗುವುದಾಗಿ ನಂಬಿಸಿ ಉದ್ಯಮಿಗೆ ವಂಚಿಸಿದ ಯುವತಿ

ಬೆಳ್ತಂಗಡಿ:ಮ್ಯಾಟ್ರಿಮೋನಿ ಸೈಟ್ ಮೂಲಕ ಪರಿಚಯವಾಗಿ ಮದುವೆಯಾಗುವುದಾಗಿ ನಂಬಿಸಿ ಉದ್ಯಮಿಯಿಂದ 87 ಲಕ್ಷಕ್ಕೂ ಹೆಚ್ಚು ಹಣ ಪಡೆದು ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಬೆಳ್ತಂಗಡಿ ನಿವಾಸಿಯಾದ ಉದ್ಯಮಿಗೆ 2024ರ ಮೇ ತಿಂಗಳಲ್ಲಿ ಮ್ಯಾಟ್ರಿಮೋನಿ ವೆಬ್‌ಸೈಟ್ ಮೂಲಕ ಅನಿಷಾ ಪಾಲನ್ನ (35) ಎಂಬ ಯುವತಿಯ ಪರಿಚಯವಾಗಿದೆ. ಬಳಿಕ ಆರೋಪಿತೆಯ ಜೊತೆ ದೂರುದಾದರು ಇನ್‌ಸ್ಟಾಗ್ರಾಂ ಮತ್ತು ಮೊಬೈಲ್ ಮೂಲಕ ಸಂಪರ್ಕದಲ್ಲಿದ್ದರು. ಮದುವೆಯಾಗುವುದಾಗಿ ನಂಬಿಸಿ ಆರೋಪಿತೆ ದೂರುದಾರರಿಗೆ ಕರೆ ಮಾಡಿ ಬೇರೆ ಬೇರೆ ಕಾರಣಗಳನ್ನು ನೀಡಿ ಹಂತಹಂತವಾಗಿ ವಿವಿಧ ಬ್ಯಾಂಕ್ ಖಾತೆಗಳಿಂದ ಒಟ್ಟು […]