ಅಚ್ಚಡದಲ್ಲಿ ಬೀದಿ ನಾಯಿಗಳ ದಾಳಿ: ಐದು ಆಡುಗಳು ಬಲಿ; ಕ್ರಮಕ್ಕೆ ಗ್ರಾಮಸ್ಥರ ಆಗ್ರಹ

ಉಡುಪಿ: ಕಟಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಚ್ಚಡದಲ್ಲಿ ಬೀದಿ ನಾಯಿಗಳ ಹಾವಳಿ ಮತ್ತೆ ಆತಂಕಕ್ಕೆ ಕಾರಣವಾಗಿದ್ದು, ನಿವೃತ್ತ ಶಿಕ್ಷಕರೊಬ್ಬರ ಮನೆಯಲ್ಲಿ ಸಾಕಿದ್ದ ಐದು ಆಡುಗಳನ್ನು ಬೀದಿ ನಾಯಿಗಳ ಗುಂಪು ಕಚ್ಚಿ ಕೊಂದಿರುವ ಬಗ್ಗೆ ವರದಿಯಾಗಿದೆ. ಅಚ್ಚಡದ ನಿವೃತ್ತ ಶಿಕ್ಷಕ ವಿಠಲ ಮಾಸ್ಟರ್ ಅವರ ಮನೆಯ ಹಟ್ಟಿಗೆ ನುಗ್ಗಿದ ಬೀದಿ ನಾಯಿಗಳ ಗುಂಪು ಐದು ಆಡುಗಳನ್ನು ಕಚ್ಚಿ ಕೊಂದಿದ್ದು, ಕೆಲವು ಆಡುಗಳನ್ನು ಎಳೆದೊಯ್ದಿದೆ ಎಂದು ಕುಟುಂಬದವರು ತಿಳಿಸಿದ್ದಾರೆ. ಇದೇ ನಾಯಿಗಳ ಗುಂಪು ಕೆಲ ದಿನಗಳ ಹಿಂದೆ ಮನೆಯ ಕೋಳಿ […]
ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯ ಮತ್ತು ಐಸಿಎಆರ್–ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದ ನಡುವೆ ಒಪ್ಪಂದ

ಕಾರ್ಕಳ: ನಿಟ್ಟೆಯ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಜು.೧೫ ರಂದು ನಿಟ್ಟೆ ತಾಂತ್ರಿಕ ಕಾಲೇಜಿನ ಹಾಗೂ ಸುತ್ತೂರಿನ ಐಸಿಎಆರ್–ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರ (ICAR–JSS Krishi Vigyan Kendra) ದ ನಡುವೆ ಸಂಶೋಧನೆ, ನಾವೀನ್ಯತೆ, ತಂತ್ರಜ್ಞಾನ ವರ್ಗಾವಣೆ ಹಾಗೂ ವಿದ್ಯಾರ್ಥಿಗಳ ಇಂಟರ್ನ್‌ಶಿಪ್ ಅವಕಾಶಗಳನ್ನು ಉತ್ತೇಜಿಸುವ ಉದ್ದೇಶದಿಂದ ಪರಸ್ಪರ ಸಹಕಾರ ಒಪ್ಪಂದಕ್ಕೆ (ಎಂಒಯು) ಸಹಿ ಹಾಕಲಾಯಿತು. ಐಸಿಎಆರ್–ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರಾದ ಡಾ. ಜ್ಞಾನೇಶ್ ನಂಜಪ್ಪ ಮತ್ತು ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ […]