ಹೆಬ್ರಿ ಎಂಆರ್‌ಎಫ್ ಘಟಕದಲ್ಲಿ ಅಗ್ನಿ ಅವಘಡ: ಸಮಗ್ರ ತನಿಖೆಗೆ ಶ್ರೀಕಾಂತ್ ಕುಚ್ಚೂರು ಆಗ್ರಹ

ಉಡುಪಿ: ಹೆಬ್ರಿ ತಾಲೂಕಿನ ತಾಲೂಕು ಪಂಚಾಯತ್ ಅಧೀನದಲ್ಲಿರುವ ಹೆಬ್ರಿಯ ಎಂಆರ್‌ಎಫ್ (ಮೆಟೀರಿಯಲ್ ರಿಕವರಿ ಫೆಸಿಲಿಟಿ) ಘಟಕದಲ್ಲಿ ಸಂಭವಿಸಿದ ಅಗ್ನಿ ಅವಘಡದ ಕುರಿತು ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ್ ಕುಚ್ಚೂರು ಆಗ್ರಹಿಸಿದರು. ಉಡುಪಿಯಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2026ರ ಫೆಬ್ರುವರಿ 14ರಂದು ಘಟಕದಲ್ಲಿ ಬೆಂಕಿ ಕಾಣಿಸಿಕೊಂಡು ಲಕ್ಷಾಂತರ ರೂಪಾಯಿ ಮೌಲ್ಯದ ಯಂತ್ರೋಪಕರಣಗಳು ಸಂಪೂರ್ಣ ಸುಟ್ಟುಹೋಗಿ ಭಾರೀ ನಷ್ಟ ಉಂಟಾಗಿದೆ. ಕಳೆದ ಏಳು ತಿಂಗಳಿಂದ ಘಟಕದಲ್ಲಿ […]

ಮಂಗಳೂರು ಮತ್ತು ಗೋವಾದ ಕೊಂಕಣಿ ಕವಯತ್ರಿಯರು ಚಾರೊಳಿ ರಾಷ್ಟ್ರೀಯ ಸನ್ಮಾನಕ್ಕೆ ಆಯ್ಕೆ: ರೇಮಂಡ್ ಡಿಕುನಾ ತಾಕೊಡೆ.

ಮಂಗಳೂರಿನಲ್ಲಿ ನಡೆಯುವ ಕೊಂಕಣಿ ೫ನೇ ರಾಷ್ಟ್ರೀಯ ಚಾರೊಳಿ ಸಾಹಿತ್ಯ ಸಮ್ಮೇಳನದಲ್ಲಿ ಖ್ಯಾತ ಹಿರಿಯ ಕವಯತ್ರಿಯರಾದ ಮಂಗಳೂರಿನ ಅರುಂಧತಿ ವಿ ರಾವ್ ಮತ್ತು ಗೋವಾದ ಆನ್ನಿ ದೆ ಕೊಲ್ವಾಲೆ ಆಯ್ಕೆ ಆಗಿದ್ದಾರೆ ಎಂದು ಸಮ್ಮೇಳನದ ಅಧ್ಯಕ್ಷರಾದ ರೇಮಂಡ್ ಡಿಕೂನಾ ತಾಕೊಡೆ ಮಾಹಿತಿ ನೀಡಿದರು. ಅವರು ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ,೧೯ ಜುಲೈ ಒಂದು ದಿನದ ಕೊಂಕಣಿ ಐದನೇ ಚಾರೊಳಿ ಸಾಹಿತ್ಯ ಸಮ್ಮೇಳನಕ್ಕೆ ದೆಹಲಿ, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕಾರವಾರ, ಕೇರಳ ಮತ್ತು ದುಬೈನ ಕವಿಗಳು ನೊಂದಾವಣೆ ಮಾಡಿದ್ದಾರೆ. […]

“Mangalore IAS – A School for Civil Services” ಸಂಸ್ಥೆಯ ಉದ್ಘಾಟನಾ ಸಮಾರಂಭ

ಮಂಗಳೂರಿನಲ್ಲಿ ನಾಗರಿಕ ಸೇವೆಗಳ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೆ ಹೊಸ ಮೈಲಿಗಲ್ಲಾಗಿರುವ “Mangalore IAS – A School for Civil Services” ಸಂಸ್ಥೆಯ ಉದ್ಘಾಟನಾ ಸಮಾರಂಭ ಇಂದು ಬೆಳಿಗ್ಗೆ 10 ಗಂಟೆಗೆ ಮಂಗಳೂರಿನ ಸಂದೇಶ ಫೌಂಡೇಶನ್ ಆವರಣದಲ್ಲಿ ಅದ್ದೂರಿಯಾಗಿ ನಡೆಯಿತು ಕಾರ್ಯಕ್ರಮದ ಉದ್ಘಾಟನೆ ಯನ್ನು ರಿಬ್ಬನ್ ಕತ್ತಾರಿಸುವ ಮೂಲಕ , ಬಳ್ಳಾರಿ ಧರ್ಮಪ್ರಾಂತ್ಯದ ಬಿಷಪ್ ಹಾಗೂ ಸಂದೇಶ ಫೌಂಡೇಶನ್ ಅಧ್ಯಕ್ಷರಾದ ಅತೀ ವಂದನೀಯ ಧರ್ಮ ಧ್ಯಕ್ಷ ರಾದ ಡಾ ಹೆನ್ರಿ ಡಿಸೋಜಾ ಅವರು ಉದ್ಘಾಟನೆ ನೆರವೇರಿಸಿ ಆಶೀರ್ವಾದಿಸಿದರುನಂತರ […]

ರಾಷ್ಟ್ರೀಯ ಗ್ರಾಮೀಣ ಅಂಚೆ ನೌಕರರ ಸಂಘ ಉಡುಪಿ ವಿಭಾಗದ ಅಧ್ಯಕ್ಷರಾಗಿ ದಿವಾಕರ ಬಿ ಶೆಟ್ಟಿ ಆಯ್ಕೆ

ಉಡುಪಿ: ರಾಷ್ಟ್ರೀಯ ಗ್ರಾಮೀಣ ಅಂಚೆ ನೌಕರರ ಸಂಘ ದೆಹಲಿ ಇದರ ಅದಿನಕೆ ಒಳಪಟ್ಟ ಉಡುಪಿ ವಿಭಾಗದ ರಾಷ್ಟ್ರೀಯ ಅಂಚೆ ನೌಕರ ಸಂಘದ ನೂತನ ಅಧ್ಯಕ್ಷರಾಗಿ ಕಳತ್ತೂರು ಅಂಚೆಪಾಲಕ ದಿವಾಕರ ಬಿ ಶೆಟ್ಟಿ ಶೆಟ್ಟಿ ಅವರನ್ನು ಉಡುಪಿಯಲ್ಲಿ ನಡೆದ ರಾಷ್ಟ್ರೀಯ ಅಂಚೆ ನೌಕರರ ಸಂಘದ ಸಮ್ಮೇಳನದಲ್ಲಿ ಆಯ್ಕೆ ಮಾಡಿದ್ದಾರೆ. ಕಾರ್ಯಾಧ್ಯಕ್ಷರಾಗಿ ಸುರೇಶ್ ಶೇರಿಗಾರ್ ಬ್ರಹ್ಮಾವರ ಉಪಾಧ್ಯಕ್ಷರಾಗಿ ಕಿಟ್ಟು ಅವ್ರಾಲ್‌,ಚಂದ್ರನಾಯಕ್ ಗುಮಾಹೋಲ ಬೆಳ್ವೆ, ಪ್ರಧಾನ ಕಾರ್ಯದರ್ಶಿ ಪ್ರಸನ್ನ ಕುಮಾರ್ ಶೆಟ್ಟಿ ಕೆರಾಡಿ,ಉಪ ಕಾರ್ಯದರ್ಶಿ ವೆಂಕಟೇಶ್ ಪೈ ಬಿಪಿಸಿ ಮಣಿಪಾಲ, ಸಹ […]

ಸುಮ್ಮನೆ ಬಟ್ಟೆ ಖರೀದಿಸೋದಲ್ಲ,ಖರೀದಿಸುವ ಮುನ್ನ ಟ್ಯಾಗ್‌ನ ಬಣ್ಣ ನೋಡಿ, ಒಂದೊಂದು ಬಣ್ಣಕ್ಕಿದೆ ಒಂದೊಂದು ಅರ್ಥ!

ಹೊಸ ಬಟ್ಟೆ ಖರೀದಿಸುವಾಗ ಹೆಚ್ಚಿನವರು ಅದರ ಬಣ್ಣ, ವಿನ್ಯಾಸ ಮತ್ತು ಬಟ್ಟೆಯ ಗುಣಮಟ್ಟವನ್ನು ಕೈಯಿಂದ ಸ್ಪರ್ಶಿಸಿ ಪರಿಶೀಲಿಸುತ್ತಾರೆ. ಆದರೆ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಬಟ್ಟೆಯ ಟ್ಯಾಗ್‌ನ ಬಣ್ಣವೇ ಅದರ ಗುಣಮಟ್ಟವನ್ನು ಹೇಳುತ್ತದೆ ಎಂಬ ಮಾಹಿತಿ ವೈರಲ್ ಆಗುತ್ತಿದೆ. ವೈರಲ್ ಆಗಿರುವ ಮಾಹಿತಿಯ ಪ್ರಕಾರ, ಕಪ್ಪು ಟ್ಯಾಗ್ ಮೇಲೆ ಚಿನ್ನದ (ಗೋಲ್ಡನ್) ಅಕ್ಷರಗಳಿದ್ದರೆ ಅದು ಪ್ರೀಮಿಯಂ ಗುಣಮಟ್ಟದ ಬಟ್ಟೆಯಾಗಿದ್ದು, ಹೆಚ್ಚು ಬಾಳಿಕೆ ಬರುತ್ತದೆ ಎನ್ನಲಾಗುತ್ತಿದೆ. ಕಪ್ಪು ಟ್ಯಾಗ್ ಮೇಲೆ ಬಿಳಿ ಅಕ್ಷರಗಳಿದ್ದರೂ ಉತ್ತಮ ಗುಣಮಟ್ಟದ ಬಟ್ಟೆ ಎಂದು ಹೇಳಲಾಗುತ್ತಿದೆ. […]