ಮಣಿಪಾಲ MSDC ಯಲ್ಲಿ ಜಪಾನೀಸ್ ಭಾಷೆ ಕಲಿಯುವ ಒಂದೊಳ್ಳೆ ಅವಕಾಶ,ಜಪಾನೀಸ್ ಭಾಷಾ ಕೋರ್ಸ್‌ಗೆ ಅರ್ಜಿ ಆಹ್ವಾನ

ಮಣಿಪಾಲ: ಮಣಿಪಾಲ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ (MSDC), ಕೆಟಿಸಿ (KTC) ಹಾಗೂ ಜಪಾನ್‌ನ ಚುಒಹ್ ಪಬ್ಲಿಷಿಂಗ್ ಕಂಪನಿಯ ಸಹಯೋಗದಲ್ಲಿ ಜಪಾನೀಸ್ ಭಾಷಾ ಕೋರ್ಸ್ (N5 – Beginner Level) ಆರಂಭಿಸಲಾಗುತ್ತಿದ್ದು, ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕೋರ್ಸ್ ಜುಲೈ 20, 2026 ರಿಂದ ಆರಂಭವಾಗಲಿದ್ದು, ಜಪಾನ್‌ನಲ್ಲಿ ಕೌಶಲ್ಯಾಧಾರಿತ ಉದ್ಯೋಗಗಳನ್ನು ಗುರಿಯಾಗಿಸಿಕೊಂಡವರಿಗೆ ಇದು ಉತ್ತಮ ಅವಕಾಶವಾಗಿದೆ. ಈ ತರಬೇತಿಯಲ್ಲಿ ಜಪಾನೀಸ್ ಭಾಷೆಯನ್ನು ಓದುವುದು, ಬರೆಯುವುದು, ಬರವಣಿಗೆ ಪದ್ಧತಿಗಳನ್ನು ಕಲಿಯುವುದು, ಅರ್ಥಮಾಡಿಕೊಂಡು ಪ್ರತಿಕ್ರಿಯಿಸುವುದು, ಕಂಜಿ (Kanji) ಅಕ್ಷರಗಳ ಪಾಂಡಿತ್ಯ, ಸಂಭಾಷಣಾ […]

ಉಡುಪಿ ಹೀರೋ ಶಕ್ತಿ ಮೋಟಾರ್ಸ್’ನಲ್ಲಿ ಉದ್ಯೋಗಾವಕಾಶ

ಉಡುಪಿ: ಉಡುಪಿ ಹೀರೋ ಶಕ್ತಿ ಮೋಟಾರ್ಸ್’ನಲ್ಲಿ ಉದ್ಯೋಗಾವಕಾಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಪುರುಷ ಅಭ್ಯರ್ಥಿಗಳು -5 ಜನ ವಯಸ್ಸು: 25 ರಿಂದ 35 ರ ವರೆಗೆ #ಚಾಲನಾ ಪರವಾನಗಿ # PDI # ಪಾರ್ಸೆಲ್ ಪಿಕ್ಕೆರ್ # ಮೆಕ್ಯಾನಿಕ್‌ಗಳು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ.ಮೊ:7996210666 Email: [email protected]

ಉಡುಪಿ ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಓರಿಯಂಟೇಶನ್ ಕಾರ್ಯಕ್ರಮ

ಉಡುಪಿ: ಉಪೇಂದ್ರ ಪೈ ಮೆಮೋರಿಯಲ್ ಕಾಲೇಜು (UPMC), ಕುಂಜಿಬೆಟ್ಟು ವತಿಯಿಂದ 2026-27ನೇ ಶೈಕ್ಷಣಿಕ ವರ್ಷದ ನೂತನ ವಿದ್ಯಾರ್ಥಿಗಳಿಗೆ ಓರಿಯಂಟೇಶನ್ ಕಾರ್ಯಕ್ರಮವನ್ನು ಜುಲೈ 13 ರಂದು ಯುಪಿಎಂಸಿ ಕ್ಯಾಂಪಸ್‌ನ ವಿಬಿಸಿಎಲ್ ಆಡಿಟೋರಿಯಂನಲ್ಲಿ ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ ಮಾಹೆಯ ಸಹ ಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ನಮ್ಮ ದೇಶದಲ್ಲಿ ಯುವಜನರ ಸಂಖ್ಯೆ ಬಹಳಷ್ಟಿದೆ. ವಿದ್ಯಾರ್ಥಿಗಳಾದ ನೀವು ಇದರಲ್ಲಿ ಸೇರಿದ್ದೀರಿ. ಈಗಿನ ಕಾಲದಲ್ಲಿ ವೃತ್ತಿ ಕೌಶಲ ತುಂಬಾ ಮುಖ್ಯವಾದುದು, ವೃತ್ತಿ ಕೌಶಲ ಇಲ್ಲದಿದ್ದರೆ ಉದ್ಯೋಗ ಸಿಗುವುದು […]

ಸರ್ಕಾರಿ ಕೆಲಸದ ನಿರೀಕ್ಷೆಯಲ್ಲಿರುವವರಿಗೆ ಸಿಹಿಸುದ್ದಿ: ಇನ್ನೆರಡು ವಾರದಲ್ಲೇ 72 ಸಾವಿರಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿಗೆ ಆದೇಶ

ಬೆಂಗಳೂರು: ರಾಜ್ಯ ಸರ್ಕಾರವು ಸರ್ಕಾರಿ ಇಲಾಖೆಗಳಲ್ಲಿನ ಖಾಲಿ ಹುದ್ದೆಗಳ ಭರ್ತಿಗೆ ವೇಗ ನೀಡಿದ್ದು, 72 ಸಾವಿರಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ತ್ವರಿತಗೊಳಿಸಿದೆ. ಈ ಸಂಬಂಧ ಆದೇಶ ಹೊರಬಿದ್ದ ಕೇವಲ ಎರಡು ವಾರಗಳಲ್ಲೇ ವಿವಿಧ ಇಲಾಖೆಗಳು ಕನಿಷ್ಠ 15 ನೇಮಕಾತಿ ಅಧಿಸೂಚನೆಗಳನ್ನು ಪ್ರಕಟಿಸಿವೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ವತಿಯಿಂದ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸೊಸೈಟಿ (ಕೆಆರ್‌ಇಐಎಸ್) ವ್ಯಾಪ್ತಿಯ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಅಟಲ್ ಬಿಹಾರಿ ವಾಜಪೇಯಿ ಹಾಗೂ ಇಂದಿರಾ ಗಾಂಧಿ ವಸತಿ […]

ಸ್ವಜನ ಪಕ್ಷಪಾತ, ಆದಾಯ ಪ್ರಮಾಣಪತ್ರ ತಿರುಚಿದ ಆರೋಪ: ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅಮಾನತು

ಬೆಂಗಳೂರು: ಸ್ವಜನಪಕ್ಷಪಾತ ಹಾಗೂ ಅಧಿಕಾರ ದುರುಪಯೋಗದ ಆರೋಪ ಎದುರಿಸುತ್ತಿರುವ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಅಧ್ಯಕ್ಷ ಶಿವಶಂಕರಪ್ಪ ಎಸ್. ಸಾಹುಕಾರ್ ಅವರನ್ನು ಅಧ್ಯಕ್ಷ ಸ್ಥಾನದಿಂದ ಅಮಾನತುಗೊಳಿಸಿ ರಾಜ್ಯಪಾಲ ಥಾವರಚಂದ್ ಗೆಹ್ಲೋತ್ ಆದೇಶ ಹೊರಡಿಸಿದ್ದಾರೆ. ಮುಂದಿನ ಆದೇಶದವರೆಗೆ ಕೆಪಿಎಸ್‌ಸಿಯ ಹಿರಿಯ ಸದಸ್ಯರು ಹಂಗಾಮಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ. ಶಿವಶಂಕರಪ್ಪ ಸಾಹುಕಾರ್ ಅವರು ತಮ್ಮ ಪುತ್ರಿ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಕೈಗಾರಿಕಾ ವಿಸ್ತರಣಾಧಿಕಾರಿ ಹುದ್ದೆಗೆ ಆಯ್ಕೆಯಾಗಲು ಅನುಕೂಲವಾಗುವಂತೆ ಕುಟುಂಬದ ವಾರ್ಷಿಕ ಆದಾಯ ಪ್ರಮಾಣಪತ್ರದಲ್ಲಿ ಕಡಿಮೆ ಆದಾಯ ನಮೂದಿಸಿ ತಿರುಚಲು ಸಹಕರಿಸಿದ್ದರೆಂಬ […]