ಉಡುಪಿ ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಓರಿಯಂಟೇಶನ್ ಕಾರ್ಯಕ್ರಮ

ಉಡುಪಿ: ಉಪೇಂದ್ರ ಪೈ ಮೆಮೋರಿಯಲ್ ಕಾಲೇಜು (UPMC), ಕುಂಜಿಬೆಟ್ಟು ವತಿಯಿಂದ 2026-27ನೇ ಶೈಕ್ಷಣಿಕ ವರ್ಷದ ನೂತನ ವಿದ್ಯಾರ್ಥಿಗಳಿಗೆ ಓರಿಯಂಟೇಶನ್ ಕಾರ್ಯಕ್ರಮವನ್ನು ಜುಲೈ 13 ರಂದು ಯುಪಿಎಂಸಿ ಕ್ಯಾಂಪಸ್‌ನ ವಿಬಿಸಿಎಲ್ ಆಡಿಟೋರಿಯಂನಲ್ಲಿ ಆಯೋಜಿಸಲಾಯಿತು.

ಕಾರ್ಯಕ್ರಮದಲ್ಲಿ ಮಾಹೆಯ ಸಹ ಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ನಮ್ಮ ದೇಶದಲ್ಲಿ ಯುವಜನರ ಸಂಖ್ಯೆ ಬಹಳಷ್ಟಿದೆ. ವಿದ್ಯಾರ್ಥಿಗಳಾದ ನೀವು ಇದರಲ್ಲಿ ಸೇರಿದ್ದೀರಿ. ಈಗಿನ ಕಾಲದಲ್ಲಿ ವೃತ್ತಿ ಕೌಶಲ ತುಂಬಾ ಮುಖ್ಯವಾದುದು, ವೃತ್ತಿ ಕೌಶಲ ಇಲ್ಲದಿದ್ದರೆ ಉದ್ಯೋಗ ಸಿಗುವುದು ತುಂಬಾ ಕಷ್ಟ. ಅದಕ್ಕಾಗಿಯೇ ವೃತ್ತಿ ಕೌಶಲಗಳಿಗೆ ನಾವು ಹೆಚ್ಚಿನ ಒತ್ತು ನೀಡುತ್ತಿದ್ದೇವೆ. ವೃತ್ತಿ ಕೌಶಲ ಇದ್ದವರಿಗೆ ಉದ್ಯೋಗವನ್ನೂ ಕೂಡ ನೀಡುತ್ತೇವೆ ಎಂದರು. ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ತಮ್ಮ ಮಕ್ಕಳನ್ನು ಸೇರಿಸಿದ ಪೋಷಕರಿಗೆ ಕೃತಜ್ಞತೆ ಸಲ್ಲಿಸಿದರು.

ಎಂಎಸ್‌ಡಿಸಿ ಮಣಿಪಾಲದ ಅಧ್ಯಕ್ಷರಾದ ಡಾ. ಎಸ್. ಎಸ್. ಪಬ್ಲಾ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ವೃತ್ತಿ ಕೌಶಲಗಳನ್ನು ಪ್ರತಿಭೆಗಳನ್ನು ರೂಡಿಸಿಕೊಳ್ಳಲು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಬೇಕಾದಷ್ಟು ಅವಕಾಶಗಳಿವೆ. ವಿದ್ಯಾರ್ಥಿಗಳನ್ನು ಇದನ್ನು ಬಳಸಿಕೊಳ್ಳಬೇಕು ಎಂದರು.

ಸಾಧನೆಗೈದ ವಿದ್ಯಾರ್ಥಿನಿ ಕೃಪಾಶ್ರೀ ಅವರನ್ನು ಸನ್ಮಾನಿಸಲಾಯಿತು.

ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಪ್ರಭಾ ಕಾಮತ್ ಸ್ವಾಗತಿಸಿದರು. ನಿರ್ದೇಶಕಿ (ಕಾಂಪ್ಲಯನ್ಸ್) ಪ್ರೊ. ಆಶಾ ಕುಮಾರಿ ಹಾಗೂ ಪ್ರವೇಶ ನಿರ್ದೇಶಕಿ ಡಾ. ಪದ್ಮಲತಾ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಸಹನಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.