ಮಣಿಪಾಲದಲ್ಲಿ ಶೆಣೈ’ಸ್ ಐಯ್ಯಂಗಾರ್ ಬೇಕರಿ ಕೇಕ್ಸ್ ಆ್ಯಂಡ್ ಕ್ರಂಬ್ ಕೆಫೆ ಉದ್ಘಾಟನೆ

ಮಣಿಪಾಲ, ಜು. 12: ಇಲ್ಲಿನ ಅಲೆವೂರು ರಸ್ತೆಯಲ್ಲಿರುವ (ಲೇಕ್ ಮಾರ್ಗ) ಬಾಳಿಗ ಟವರ್‌ನಲ್ಲಿ ಶೆಣೈ’ಸ್ ಐಯ್ಯಂಗಾರ್ ಬೇಕರಿ ಕೇಕ್ಸ್ ಆ್ಯಂಡ್ ಕ್ರಂಟ್ಸ್ ಕೆಫೆ ಜು. ೧೨ರಂದು ಉದ್ಘಾಟನೆಗೊಂಡಿತು.ಮುಖ್ಯ ಅತಿಥಿಗಳಾಗಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ಗೋಕುಲದಾಸ್ ನಾಯಕ್, ಮಣಿಪಾಲ ಠಾಣೆಯ ಪೊಲೀಸ್ ನಿರೀಕ್ಷಕ ಮಹೇಶ್, ಪ್ರಸಾದ್, ಜಿಲ್ಲಾ ಆಹಾರ ಸುರಕ್ಷಾ ಅಧಿಕಾರಿ ವಿವೇಕ ತ್ರಿಮಲೈ ಜಿಲ್ಲಾ ಫುಡ್ ಅಸೋಸಿಯೇಶನ್ ಅಧ್ಯಕ್ಷ ವಿಶ್ವನಾಥ ಕುಲಾಲ್, ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ-ಆಪ್. ಸೊಸೈಟಿ ಸಿಇಒ ನಿತ್ಯಾನಂದ ನಾಯಕ್, ಉದ್ಯಮಿ […]
ಉಡುಪಿ: ಯುವ ನ್ಯಾಯವಾದಿ ಸಂದೇಶ್ ಕುಮಾರ್ ನಿಧನ

ಉಡುಪಿ: ಉಡುಪಿ ವಕೀಲರ ಸಂಘದ ಸಕ್ರಿಯ ಸದಸ್ಯರೂ, ನ್ಯಾಯವಾದಿಗಳೂ ಆದ ಸಂದೇಶ್ ಕುಮಾರ್ ಅವರು ಇಂದು (ಜು.12) ನಿಧನರಾಗಿದ್ದಾರೆ. ಸಂದೇಶ್ ಕುಮಾರ್ ರವರ ಅಕಾಲಿಕ ನಿಧನ ಮತ್ತು ಅಗಲುವಿಕೆಯು ಅವರ ಕುಟುಂಬದವರಿಗೆ, ಹಿತೈಷಿಗಳಿಗೆ ಹಾಗೂ ವಕೀಲ ಮಿತ್ರರಿಗೆ ತೀವ್ರ ದಿಗ್ಭ್ರಮೆ ಮತ್ತು ಆಘಾತವನ್ನು ಉಂಟು ಮಾಡಿದೆ. ಮೃತರ ಪಾರ್ಥಿವ ಶರೀರದ ವಿಧಿ ವಿಧಾನಗಳನ್ನು ಇಂದು ಸಂಜೆ 3:30ಕ್ಕೆ ಅವರ ಸ್ವಗೃಹವಾದ ಕಡೆಕಾರಿನಲ್ಲಿ ನೆರವೇರಿಸಲಾಗುವುದು. ತದನಂತರ ಉದ್ಯಾವಾರದ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆಯು ಜರುಗಲಿದೆ ಎಂದು ಮೃತರ ಕುಟುಂಬದ ಮೂಲಗಳು […]
ಶಾಲೆಯಲ್ಲಿ ನಡೆದ ಲೈಂಗಿಕ ದೌರ್ಜನ್ಯಗಳನ್ನು ಮುಚ್ಚಿಟ್ಟಿರುವುದು ಗಮನಕ್ಕೆ ಬಂದರೆ ಕಠಿಣ ಶಿಕ್ಷೆ, ಎಲ್ಲಾ ಶಾಲೆಗಳಿಗೆ ಹೈಕೋರ್ಟ್ ಖಡಕ್ ವಾರ್ನಿಂಗ್

ಬೆಂಗಳೂರು: ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ವರದಿ ಮಾಡದೆ ಮುಚ್ಚಿಡುವುದೂ ಗಂಭೀರ ಅಪರಾಧವಾಗಿದ್ದು, ಇಂತಹ ಪ್ರಕರಣಗಳನ್ನು ಮುಚ್ಚಿಹಾಕುವ ಶಿಕ್ಷಣ ಸಂಸ್ಥೆಗಳ ವಿರುದ್ಧವೂ ಕಾನೂನು ಕ್ರಮ ಜರುಗಿಸಬಹುದು ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಎಚ್ಚರಿಕೆ ನೀಡಿದೆ. ಉಡುಪಿ ಜಿಲ್ಲೆಯ ವಸತಿ ಶಾಲೆಯ ಮುಖ್ಯೋಪಾಧ್ಯಾಯ, ಸಹ ಮುಖ್ಯೋಪಾಧ್ಯಾಯ ಹಾಗೂ ವಾರ್ಡನ್ ವಿರುದ್ಧ ಪೋಕ್ಸೊ (POCSO) ಕಾಯ್ದೆಯಡಿ ದಾಖಲಾಗಿದ್ದ ಪ್ರಕರಣವನ್ನು ರದ್ದುಪಡಿಸುವಂತೆ ಸಲ್ಲಿಸಲಾಗಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ತಿರಸ್ಕರಿಸಿ ಈ ಆದೇಶ ನೀಡಿದ್ದಾರೆ. ಸಂತ್ರಸ್ತ ಬಾಲಕನ […]
ಹುಣಸೆಹಣ್ಣು ಕೇವಲ ರುಚಿಗಷ್ಟೇ ಅಲ್ಲ; ಆರೋಗ್ಯಕ್ಕೂ ವರದಾನ! ಇದರಲ್ಲಿವೆ ಅದ್ಭುತ ಪ್ರಯೋಜನಗಳು

“ಹುಣಸೆ ಮರ ಮುಪ್ಪಾದರೂ ಹುಳಿ ಮುಪ್ಪಾಗುವುದಿಲ್ಲ” ಎಂಬ ಗಾದೆ ಮಾತು ಹುಣಸೆಹಣ್ಣಿನ ವಿಶೇಷತೆಯನ್ನು ಚೆನ್ನಾಗಿ ವಿವರಿಸುತ್ತದೆ. ದಕ್ಷಿಣ ಭಾರತದ ಅಡುಗೆಗಳಲ್ಲಿ ಅವಿಭಾಜ್ಯ ಸ್ಥಾನ ಪಡೆದಿರುವ ಹುಣಸೆಹಣ್ಣು, ಆಹಾರದ ರುಚಿಯನ್ನು ಹೆಚ್ಚಿಸುವುದಷ್ಟೇ ಅಲ್ಲದೆ ಹಲವು ಪೋಷಕಾಂಶಗಳನ್ನು ಹೊಂದಿರುವ ನೈಸರ್ಗಿಕ ಆಹಾರ ಪದಾರ್ಥವಾಗಿದೆ. ಹುಣಸೆಹಣ್ಣಿನಲ್ಲಿ ವಿಟಮಿನ್ ಸಿ, ಬಿ-ವಿಟಮಿನ್‌ಗಳು, ಮೆಗ್ನೀಸಿಯಂ, ಪೊಟ್ಯಾಸಿಯಂ, ನಾರಿನಾಂಶ ಹಾಗೂ ಆಂಟಿಆಕ್ಸಿಡೆಂಟ್‌ಗಳು ಸಮೃದ್ಧವಾಗಿದ್ದು, ದೇಹದ ಒಟ್ಟಾರೆ ಆರೋಗ್ಯ ಕಾಪಾಡಲು ನೆರವಾಗುತ್ತವೆ. ಹೃದಯದ ಆರೋಗ್ಯಕ್ಕೆ ಸಹಕಾರಿ ಹುಣಸೆಹಣ್ಣಿನಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ಮತ್ತು ಖನಿಜಾಂಶಗಳು ರಕ್ತನಾಳಗಳ ಆರೋಗ್ಯ ಕಾಪಾಡಲು ನೆರವಾಗುತ್ತವೆ. […]
ಸ್ವಿಗ್ಗಿ ಇನ್ಸ್ಟಾಮಾರ್ಟ್‌ಗೆ FSSAI ಬಿಗ್ ಶಾಕ್: ಹಾಳಾದ ಆಹಾರ ವಿತರಣೆ ಆರೋಪ, 9 ನೋಟಿಸ್ ಜಾರಿ

ನವದೆಹಲಿ: ದೇಶದಲ್ಲಿ ಆನ್‌ಲೈನ್ ತ್ವರಿತ ವಿತರಣಾ ಸೇವೆಗಳ ಬಳಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ನಡುವೆಯೇ, ಹಾಳಾದ ಹಾಗೂ ಅವಧಿ ಮೀರಿದ ಆಹಾರ ಉತ್ಪನ್ನಗಳ ವಿತರಣೆಗೆ ಸಂಬಂಧಿಸಿದ ದೂರುಗಳ ಹಿನ್ನೆಲೆಯಲ್ಲಿ ಸ್ವಿಗ್ಗಿಯ ಇನ್ಸ್ಟಾಮಾರ್ಟ್‌ಗೆ ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (FSSAI) ಬಿಗ್ ಶಾಕ್ ನೀಡಿದೆ. FSSAI, ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯ್ದೆ–2006ರ ಅಡಿಯಲ್ಲಿ ಉಲ್ಲಂಘನೆಗಳ ಆರೋಪಕ್ಕೆ ಸಂಬಂಧಿಸಿ ಸ್ವಿಗ್ಗಿ ಇನ್ಸ್ಟಾಮಾರ್ಟ್‌ಗೆ ಒಟ್ಟು 9 ನೋಟಿಸ್‌ಗಳನ್ನು ಜಾರಿಗೊಳಿಸಿದೆ. ಈ ಕುರಿತು ಸಂಸ್ಥೆ ತನ್ನ ‘ಎಕ್ಸ್’ (ಹಿಂದಿನ […]