ಜು.12ರಂದು ಉಡುಪಿಯಲ್ಲಿ ‘ಉಡುಪಿ ವಿಷನ್-2035’ ಸಭೆ

ಉಡುಪಿ: ಹತ್ತು ವರ್ಷಗಳ ಅವಧಿಗೆ ಉಡುಪಿಯ ಸಮಗ್ರ ಅಭಿವೃದ್ಧಿಯ ನೀಲನಕಾಶೆ ತಯಾರಿಸಲು ಪೂರ್ವ ಭಾವಿ ಸಿದ್ಧತೆಯಾಗಿ ಇದೇ ಜುಲೈ12ರಂದು ಸಂಜೆ 5:30ಕ್ಕೆ ಉಡುಪಿಯ ಹೊಟೇಲ್ ಕಿದಿಯೂರಿನ ಶೇಷಶಯನ್ ಹಾಲ್‌ನಲ್ಲಿ ವಿವಿಧ ಸಂಘಟನೆಗಳು, ಜನಪ್ರತಿನಿಧಿಗಳು, ಗಣ್ಯರನ್ನೊಳಗೊಂಡ ‘ಉಡುಪಿ ವಿಷನ್-2035’ ಸಭೆ ಯನ್ನು ಕರೆಯಲಾಗಿದೆ ಎಂದು ಉಡುಪಿ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಅಮ್ಮುಂಜೆ ಪ್ರಭಾಕರ ನಾಯಕ್ ಹೇಳಿದ್ದಾರೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೊಂದು ಸಮಾಲೋಚನಾ ಸಭೆಯಾಗಿದ್ದು, ವಿವಿಧ ಕ್ಷೇತ್ರಗಳಲ್ಲಿ ಮುಂದಿನ ಹತ್ತು ವರ್ಷಗಳಲ್ಲಿ […]

ಬೀಡಿನಗುಡ್ಡೆಯಲ್ಲಿ ಎಂಆರ್‌ಎಫ್ ಘಟಕ ನಿರ್ಮಾಣಕ್ಕೆ ವಿರೋಧ

ಉಡುಪಿ: ಉಡುಪಿ ನಗರ ಪ್ರದೇಶದ ಒಣಕಸಗಳನ್ನು ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡುವ ಉದ್ದೇಶದಿಂದ ಬೀಡಿನಗುಡ್ಡೆಯಲ್ಲಿ ನಿರ್ಮಿಸಲಾಗುತ್ತಿರುವ ಎಂಆರ್‌ಎಫ್(ಮೆಟೀರಿಯಲ್ ರಿಕವರಿ ಪೆಸಿಲಿಟಿ) ಘಟಕಕ್ಕೆ ಬೀಡಿನಗುಡ್ಡೆ ಅಭಿವೃದ್ಧಿ ಸಮಿತಿ ತೀವ್ರ ವಿರೋಧ ವ್ಯಕ್ತಪಡಿಸಿದೆ. ಬೀಡಿನಗುಡ್ಡೆ ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಉಡುಪಿ ನಗರಸಭೆ ಪೌರಾಯುಕ್ತ ಮಹಾಂತೇಶ್ ಹಂಗರಗಿ ಸಮ್ಮುಖದಲ್ಲಿ ಬೀಡಿನ ಗುಡ್ಡೆಯ ಎಂಆರ್‌ಎಫ್ ಘಟಕದಲ್ಲಿ ನಡೆದ ಸಭೆಯಲ್ಲಿ ಈ ವಿರೋಧ ವ್ಯಕ್ತವಾಗಿದೆ. ಕೇಂದ್ರ ಸರಕಾರದ ಸ್ವಚ್ಛ ಭಾರತ್ ಮಿಷನ್ 2.0 ಅಡಿಯಲ್ಲಿ ಸುಮಾರು 3ರಿಂದ 3.5ಕೋಟಿ ರೂ. ವೆಚ್ಚದಲ್ಲಿ 33 ಟನ್ […]

PRISM ಸ್ಟುಡಿಯೋ ವತಿಯಿಂದ ಗಿಟಾರ್ ತರಬೇತಿ

ಗಿಟಾರ್ ತರಬೇತಿ ಹುಡುಗಿಯರು ಮತ್ತು ಹುಡುಗರಿಗಾಗಿ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 98455 84885 ಮತ್ತು 9481750434 LOCATION:1FLOOR ಡಿ ಸಿ ಆಫೀಸ್ ರಸ್ತೆ ಹತ್ತಿರ ಮಣಿಪಾಲ್.Registration: 8310159071,6364237141.

ಮಲಗುವ ಮುನ್ನ ಒಂದು ಗಂಟೆ ಮೊಬೈಲ್ ದೂರವಿಡಿ: ನಿಮ್ಮ ದೇಹದಲ್ಲಿ ರಾತ್ರಿ ಸಕ್ರೀಯವಾಗುವ ಈ ಹಾರ್ಮೋನ್ ಗಳ ಬಗ್ಗೆ ತಿಳಿದುಕೊಂಡ್ರೆ ಅಚ್ಚರಿಪಡುತ್ತೀರಿ

ಸ್ಮಾರ್ಟ್‌ಫೋನ್‌ಗಳು ನಮ್ಮ ದಿನನಿತ್ಯದ ಜೀವನದ ಅವಿಭಾಜ್ಯ ಅಂಗವಾಗಿವೆ. ಆದರೆ ಮಲಗುವ ಮುನ್ನವೂ ಗಂಟೆಗಟ್ಟಲೆ ಮೊಬೈಲ್ ಬಳಸುವ ಅಭ್ಯಾಸ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಿದ್ದಾರೆ. ಮಲಗುವ ಒಂದು ಗಂಟೆ ಮೊದಲು ಮೊಬೈಲ್‌ನ್ನು ದೂರವಿಟ್ಟರೆ ನಿದ್ರೆಯ ಗುಣಮಟ್ಟದಿಂದ ಹಿಡಿದು ಹಸಿವಿನ ನಿಯಂತ್ರಣದವರೆಗೆ ಹಲವು ಪ್ರಯೋಜನಗಳು ದೊರೆಯಬಹುದು ಎಂದು ಅಧ್ಯಯನಗಳು ಸೂಚಿಸಿವೆ. ಉತ್ತಮ ನಿದ್ರೆಗೆ ಮೆಲಟೋನಿನ್ ನೆರವು ರಾತ್ರಿ ವೇಳೆ ಮೆದುಳಿನಲ್ಲಿರುವ ಪೀನಿಯಲ್ ಗ್ರಂಥಿ ಮೆಲಟೋನಿನ್ ಎಂಬ ನಿದ್ರೆಯ ಹಾರ್ಮೋನ್ ಅನ್ನು ಬಿಡುಗಡೆ ಮಾಡುತ್ತದೆ. […]

ಭಾರೀ ಮಳೆಗೆ ನದಿಯಲ್ಲಿ ತೇಲಿ ಬಂದ 3,000 ಎಲ್ ಪಿ ಜಿ ಸಿಲಿಂಡರ್‌ಗಳು: ಮುಂಬೈಯಲ್ಲಿ ಮುಂದುವರಿದ ಪ್ರವಾಹ

ಮುಂಬೈ: ದೇಶದಾದ್ಯಂತ ಮುಂಗಾರು ಮಳೆಯ ಅಬ್ಬರ ಮುಂದುವರಿದಿದ್ದು, ಹಲವು ರಾಜ್ಯಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿ ಭಾರೀ ಮಳೆಯಿಂದ ಸುಮಾರು 3,000ಕ್ಕೂ ಹೆಚ್ಚು ಎಲ್ಪಿಜಿ (LPG) ಸಿಲಿಂಡರ್‌ಗಳು ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆ ಆತಂಕಕ್ಕೆ ಕಾರಣವಾಗಿದೆ. ರಾಯಗಢ ಜಿಲ್ಲೆಯ ಪನ್ವೇಲ್ ತಾಲೂಕಿನ ಚವಾಣೆ ಗ್ರಾಮದಲ್ಲಿರುವ ಎಚ್‌ಪಿಸಿಎಲ್‌ನ ಪಾತಾಳಗಂಗಾ ಎಲ್ಪಿಜಿ ಬಾಟ್ಲಿಂಗ್ ಘಟಕಕ್ಕೆ ಪ್ರವಾಹದ ನೀರು ನುಗ್ಗಿದ ಪರಿಣಾಮ, ಸಾವಿರಾರು ಸಿಲಿಂಡರ್‌ಗಳು ಪಾತಾಳಗಂಗಾ ನದಿಯಲ್ಲಿ ತೇಲಿ ಹೋಗಿವೆ. ನದಿಯಲ್ಲಿ ಸಿಲಿಂಡರ್‌ಗಳು ತೇಲುತ್ತಿರುವ […]