ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಯಶಸ್ವಿಯಾಯ್ತು ಅಪರೂಪದ ಶಸ್ತ್ರಚಿಕಿತ್ಸೆ: ಮೂತ್ರಪಿಂಡದಿಂದ ಹೃದಯದವರೆಗೆ ಹರಡಿದ್ದ ಕ್ಯಾನ್ಸರ್ ಗೆಡ್ಡೆ ತೆರವು: ತಜ್ಞವೈದ್ಯರ ಅಪರೂಪದ ಸಾಧನೆಯಿದು

ಮಣಿಪಾಲ: ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ವೈದ್ಯರು ಅಪರೂಪದ ಹಾಗೂ ಅತ್ಯಂತ ಸಂಕೀರ್ಣ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿ, ಶಿವಮೊಗ್ಗದ 63 ವರ್ಷದ ವ್ಯಕ್ತಿಗೆ ಹೊಸ ಜೀವ ನೀಡಿದ್ದಾರೆ. ರೋಗಿಯ ಎಡ ಮೂತ್ರಪಿಂಡದಲ್ಲಿ ಉಂಟಾಗಿದ್ದ ಕ್ಯಾನ್ಸರ್ ಗೆಡ್ಡೆ ದೇಹದ ಪ್ರಮುಖ ರಕ್ತನಾಳವಾದ ಇನ್ಫೀರಿಯರ್ ವೆನಾ ಕ್ಯಾವಾ (IVC) ಮೂಲಕ ಹೃದಯದ ಬಲ ಹೃತ್ಕರ್ಣದವರೆಗೆ ಹರಡಿದ್ದು, ಸುಮಾರು 12 ಗಂಟೆಗಳ ಕಾಲ ನಡೆದ ಶಸ್ತ್ರಚಿಕಿತ್ಸೆಯಲ್ಲಿ ಅದನ್ನು ಸಂಪೂರ್ಣವಾಗಿ ಯಶಸ್ವಿಯಾಗಿ ತೆರವುಗೊಳಿಸಲಾಗಿದೆ. ರೋಗಿಯು ಒಂದು ತಿಂಗಳಿನಿಂದ ಹೊಟ್ಟೆನೋವಿನಿಂದ ಬಳಲುತ್ತಿದ್ದರು. ತಪಾಸಣೆಯಲ್ಲಿ ಎಡ ಮೂತ್ರಪಿಂಡದಲ್ಲಿ […]

ಕಾರ್ಕಳ ಕ್ರೈಸ್ಟಿಂಗ್: ರಾಷ್ಟ್ರೀಯ ಸೇವಾ ಯೋಜನೆಯ ಆಶ್ರಯದಲ್ಲಿ ವನಮಹೋತ್ಸವ

ಕಾರ್ಕಳ: ಇಲ್ಲಿನ ಕ್ರೈಸ್ಟಿಂಗ್ ಶಿಕ್ಷಣ ಸಂಸ್ಥೆಗಳಲ್ಲಿ ಸಂಸ್ಥೆಯ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ವನಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಂಸ್ಥೆಯ ಆವರಣದಲ್ಲಿ ಸೇವಾ ಯೋಜನೆಯ ಸದಸ್ಯರು ವಿವಿಧ ಬಗೆಯ ಗಿಡಗಳನ್ನು ನೆಡುವುದರ ಮೂಲಕ ವನಮಹೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ವಾಣಿಜ್ಯ ಶಾಕ್ತ ಉಪನ್ಯಾಸಕ ದೀಪಕ್ ಅವರು “ಪ್ರಕೃತಿಯೇ ನಮ್ಮ ಜೀವನ, ಪ್ರಕೃತಿಯ ವಿನಾಶ ಎಂದರೆ ಅದು ನಮ್ಮದೇ ವಿನಾಶ. ವಿದ್ಯಾರ್ಥಿಗಳು ಪ್ರಕೃತಿಯ ಬಗ್ಗೆ ಪ್ರೀತಿ […]

ಸಿಎ ಫೌಂಡೇಶನ್ ಪರೀಕ್ಷೆಯಲ್ಲಿ ಕುಂದಾಪುರ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ.

ಕುಂದಾಪುರ: ಮೇ 2026 ರಲ್ಲಿ ಇನ್ಸ್ಟಿಟ್ಯೂಟ್ ಆಫ್ ಚಾರ್ಟೆಂಟ್ ಅಕೌಂಟೆಂಟ್ ಆಫ್ ಇಂಡಿಯಾ ಸಂಸ್ಥೆಯವರು ನಡೆಸಿದ ಸಿ ಎ ಫೌಂಡೇಶನ್ ಪರೀಕ್ಷೆಯಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ಪ್ರಾಕ್ತನ ವಿದ್ಯಾರ್ಥಿಗಳಾದ ಸೃಜನ್ ಜೆ. ಪಿ 276 ಅಂಕಗಳನ್ನು ಹಾಗೂ ಸಿಂಚನಾ ಸಿ. ಪೂಜಾರಿ 229 ಅಂಕಗಳನ್ನು ಗಳಿಸಿ ತೇರ್ಗಡೆ ಹೊಂದಿ ಮುಂದಿನ ಹಂತದ ಪರೀಕ್ಷೆಗೆ ಅರ್ಹತೆ ಪಡೆದಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.

ಕೊಲ್ಲೂರು: ಮೂಕಾಂಬಿಕಾ ದೇವಸ್ಥಾನದಲ್ಲಿ ಭಕ್ತೆಯ ₹80 ಸಾವಿರ ಕಳವು: 24 ಗಂಟೆಯೊಳಗೆ ಮೂವರು ಅಂತರ್ ಜಿಲ್ಲಾ ಕಳ್ಳಿಯರ ಬಂಧನ

ಉಡುಪಿ: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಭಕ್ತೆಯೊಬ್ಬರ ವ್ಯಾನಿಟಿ ಬ್ಯಾಗ್‌ನಿಂದ ₹80 ಸಾವಿರ ಕಳವು ಮಾಡಿದ ಆರೋಪದಡಿ ಮೂವರು ಮಹಿಳೆಯರನ್ನು ಕೊಲ್ಲೂರು ಪೊಲೀಸರು ಪ್ರಕರಣ ದಾಖಲಾದ 24 ಗಂಟೆಯೊಳಗೆ ಬಂಧಿಸಿದ್ದಾರೆ. ಬಂಧಿತರನ್ನು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಿವಾಸಿಗಳಾದ ನೇತ್ರಾವತಿ (33), ಶಾರದ (50) ಹಾಗೂ ದುರ್ಗಮ್ಮ (44) ಎಂದು ಗುರುತಿಸಲಾಗಿದೆ. ಪೊಲೀಸರ ಮಾಹಿತಿ ಪ್ರಕಾರ, ನಿಮಿಶಾ ಹಾಗೂ ಅವರ ಪತಿ ಪ್ರಜೋಶ್ ಅವರು ಜುಲೈ 5ರಂದು ದೇವಸ್ಥಾನದಲ್ಲಿ ದೇವರ ದರ್ಶನ ಮುಗಿಸಿ ಹೊರಾಂಗಣಕ್ಕೆ ಬಂದಾಗ, ರಾತ್ರಿ ಸುಮಾರು […]

ಬೈಂದೂರು: ವೃದ್ಧ ನಾಪತ್ತೆ

ಉಡುಪಿ: ಅಜ್ಮೀರ್ ದರ್ಗಾದ ದರ್ಶನ ಮುಗಿಸಿ ಕುಟುಂಬದವರೊoದಿಗೆ ರೈಲಿನಲ್ಲಿ ಕಾಸರಗೋಡಿಗೆ ವಾಪಾಸಾಗುತ್ತಿದ್ದ ಕೇರಳ ರಾಜ್ಯ ಕಾಸರಗೋಡು ತಾಲೂಕು ಮಂಜೇಶ್ವರ ಕನ್ಯಾಲಾಹೌಸ್ ಧರ್ಮತಡ್ಕೆ ನಿವಾಸಿ ಮುಸಾ ಯಾನೆ ಅಬುಸಾಲಿ (68) ಎಂಬ ವೃದ್ಧರು ಜೂನ್ 27 ರಂದು ರಾತ್ರಿ 10 ಗಂಟೆಗೆ ಕಾರವಾರದಿಂದ ಬೆಳಗಿನ ಜಾವ 1 ಗಂಟೆಯ ಸುಮಾರಿಗೆ ಮಂಗಳೂರಿನ ಸಮೀಪ ಚಲಿಸುತ್ತಿದ್ದ ರೈಲಿನಿಂದ ನಾಪತ್ತೆಯಾಗಿರುತ್ತಾರೆ. ರೈಲು ಎಲ್ಲಿಯೋ ನಿಂತ ವೇಳೆ ಯಾವುದೋ ನಿಲ್ದಾಣದಲ್ಲಿ ಇಳಿದು ದಿಕ್ಕು ಕಾಣದೇ ನಾಪತ್ತೆಯಾಗಿರುವುದಾಗಿಯೂ ಅಥವಾ ಬೈಂದೂರು ರೈಲ್ವೇ ನಿಲ್ದಾಣದ ವ್ಯಾಪ್ತಿಯಲ್ಲಿ […]