ಮನೆಯಲ್ಲಿ ಚಿನ್ನ ಇಟ್ಟಿದ್ದೀರಾ? ಇನ್ನು ಬಡ್ಡಿಯೂ ಸಿಗಲಿದೆ! ಕೇಂದ್ರದ ಹೊಸ ‘ಗೋಲ್ಡ್ ಮಾನಿಟೈಸೇಷನ್’ ಯೋಜನೆ ಏನು?

ಮನೆಯಲ್ಲಿರುವ ಹಳೆಯ ಚಿನ್ನವನ್ನು ಮಾರದೇ, ಲಾಕರ್‌ನಲ್ಲಿ ಇಡದೇ ಅದರಿಂದಲೇ ಆದಾಯ ಗಳಿಸುವ ಅವಕಾಶವನ್ನು ಕೇಂದ್ರ ಸರ್ಕಾರ ಕಲ್ಪಿಸಲು ಮುಂದಾಗಿದೆ. ‘ಚಿನ್ನ ನಗದೀಕರಣ ಯೋಜನೆ’ (Gold Monetisation Scheme)ಗೆ ಹೊಸ ರೂಪ ನೀಡಲು ಸರ್ಕಾರ ಸಿದ್ಧತೆ ನಡೆಸಿದ್ದು, ಶೀಘ್ರದಲ್ಲೇ ಅಧಿಕೃತ ಘೋಷಣೆ ಮಾಡುವ ನಿರೀಕ್ಷೆಯಿದೆ. ದೇಶದಲ್ಲಿ ಚಿನ್ನದ ಆಮದು ಪ್ರಮಾಣವನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಯೋಜನೆಯನ್ನು ರೂಪಿಸಲಾಗುತ್ತಿದೆ. ಭಾರತೀಯರ ಮನೆಗಳಲ್ಲಿ ಅಪಾರ ಪ್ರಮಾಣದ ಚಿನ್ನ ಬಳಕೆಯಾಗದೆ ಉಳಿದಿದ್ದು, ಅದರ ಒಂದು ಭಾಗವನ್ನು ಆರ್ಥಿಕ ಚಟುವಟಿಕೆಗೆ ತರಲು ಸರ್ಕಾರ […]