ವೈದ್ಯರ ಬಳಿ ಈ ವಿಚಾರಗಳನ್ನು ಮುಕ್ತವಾಗಿ ಹೇಳಿಕೊಂಡರೆ ನಿಮಗೆ ಪರಿಹಾರ ಗ್ಯಾರಂಟಿ: ಡಾಕ್ಟರ್ಸ್ ಡೇ ಸ್ಪೆಷಲ್ ಲೇಖನ

ವೈದ್ಯರನ್ನು ದೇವರಿಗೆ ಹೋಲಿಸಲಾಗುತ್ತದೆ. ಅನಾರೋಗ್ಯದ ಸಂದರ್ಭದಲ್ಲಿ ವೈದ್ಯರ ಬಳಿಗೆ ಹೋಗುವಾಗ ನಮ್ಮ ಆರೋಗ್ಯದ ಬಗ್ಗೆ ಸಂಪೂರ್ಣ ಮತ್ತು ನಿಖರವಾದ ಮಾಹಿತಿಯನ್ನು ನೀಡುವುದು ಅತ್ಯಂತ ಮುಖ್ಯ. ಯಾವುದೇ ವಿಷಯವನ್ನು ಮುಚ್ಚಿಡುವುದು ಅಥವಾ ಸುಳ್ಳು ಹೇಳುವುದು ತಪ್ಪಾದ ರೋಗನಿರ್ಣಯಕ್ಕೆ ಕಾರಣವಾಗಬಹುದು. ಇದರಿಂದ ಚಿಕಿತ್ಸೆ ವಿಳಂಬವಾಗುವ ಅಥವಾ ಪರಿಣಾಮಕಾರಿಯಾಗದ ಸಾಧ್ಯತೆಯೂ ಇದೆ. ಆದ್ದರಿಂದ ವೈದ್ಯರೊಂದಿಗೆ ಪ್ರಾಮಾಣಿಕವಾಗಿ ಮಾತನಾಡುವುದು ಉತ್ತಮ ಆರೋಗ್ಯದ ಮೊದಲ ಹೆಜ್ಜೆಯಾಗಿದೆ. ವಯಸ್ಸಿನ ಬಗ್ಗೆ ಸುಳ್ಳು ಹೇಳಬೇಡಿ ಕೆಲವರು, ವಿಶೇಷವಾಗಿ ಮಹಿಳೆಯರು, ತಮ್ಮ ನಿಜವಾದ ವಯಸ್ಸನ್ನು ಹೇಳಲು ಹಿಂಜರಿಯುತ್ತಾರೆ. ಆದರೆ […]
ಇಂದು ರಾಷ್ಟ್ರೀಯ ವೈದ್ಯರ ದಿನ: ವೈದ್ಯರ ಸೇವೆಗೆ ಗೌರವ ಸಲ್ಲಿಸುವ ವಿಶೇಷ ದಿನವಿದು!

ಆರೋಗ್ಯವೇ ಮಹಾಭಾಗ್ಯ ಎಂಬ ಮಾತು ಎಲ್ಲ ಕಾಲಕ್ಕೂ ಅನ್ವಯಿಸುತ್ತದೆ. ಆರೋಗ್ಯವನ್ನು ಕಾಪಾಡುವುದು, ಅನಾರೋಗ್ಯಕ್ಕೆ ಚಿಕಿತ್ಸೆ ನೀಡಿ ರೋಗಿಯನ್ನು ಗುಣಪಡಿಸುವುದು ವೈದ್ಯರ ಪ್ರಮುಖ ಕರ್ತವ್ಯವಾಗಿದೆ. ಜೀವ ಉಳಿಸಿ ಹೊಸ ಬದುಕು ನೀಡುವ ವೈದ್ಯರನ್ನು “ವೈದ್ಯೋ ನಾರಾಯಣೋ ಹರಿ” ಎಂದು ಗೌರವಿಸುವ ಸಂಪ್ರದಾಯ ಭಾರತದಲ್ಲಿ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ. ವೈದ್ಯರ ಈ ಅಮೂಲ್ಯ ಸೇವೆಯನ್ನು ಸ್ಮರಿಸಿ ಅವರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಪ್ರತಿವರ್ಷ ಜುಲೈ 1ರಂದು ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸಲಾಗುತ್ತದೆ. ಭಾರತದಲ್ಲಿ ರಾಷ್ಟ್ರೀಯ ವೈದ್ಯರ ದಿನವನ್ನು ಮೊದಲ […]