ಕಲ್ಯಾಣಪುರ, ತ್ರಿಶಾ ಪದವಿಪೂರ್ವ ಕಾಲೇಜಿನಲ್ಲಿ “ನಶಾ ಮುಕ್ತ ಸಪ್ತಾಹ ಹಾಗೂ ಸೈಬರ್ ಕ್ರೈಂ ಅಪರಾಧಗಳ ಕುರಿತು ಮಾಹಿತಿ ಅಭಿಯಾನ”

ಉಡುಪಿ – ಕಲ್ಯಾಣಪುರದಲ್ಲಿರುವ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ, ಶೈಕ್ಷಣಿಕ ಸಹಭಾಗಿತ್ವದ ತ್ರಿಶಾ ಪದವಿಪೂರ್ವ ಕಾಲೇಜಿನಲ್ಲಿ” ಅಂತಾರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಮತ್ತು ಅಕ್ರಮ ಸಾಗಾಟ ವಿರೋಧಿ ದಿನ ” ಆಚರಣೆಯ ಪ್ರಯುಕ್ತವಾಗಿ ನಶಾ ಮುಕ್ತ ಸಪ್ತಾಹ ಕಾರ್ಯಕ್ರಮ ಆಯೋಜಿಸಲಾಗಿತ್ತು.ಮುಖ್ಯ ಅತಿಥಿಗಳಾಗಿ ಆಗಮಿಸಿದ ಉಡುಪಿ ಸೈಬರ್ ಕ್ರೈಂ ವಿಭಾಗದ ಪವನ್ ಕುಮಾರ್ ಅವರು ಮಾದಕ ವ್ಯಸನದ ದುಷ್ಪರಿಣಾಮಗಳ ಕುರಿತಾಗಿ ಮಾತನಾಡುತ್ತ ಯುವ ಜನತೆ ನಮ್ಮ ದೇಶದ ಭವಿಷ್ಯ. ಯುವಕ ಯುವತಿಯರು ಮಾದಕ ವ್ಯಸನದ ಹುಚ್ಚಿಗೆ ಬಲಿಯಾಗದೆ, ಉತ್ತಮ ಹಾಗೂ […]
ಹಾಲಿನೊಂದಿಗೆ ಈ ಆಹಾರಗಳನ್ನು ಸೇವಿಸುತ್ತಿದ್ದೀರಾ?ಆರೋಗ್ಯ ಹಾಳಾಗುವ ಸಾಧ್ಯತೆ ಹೆಚ್ಚಿದೆ!

ಹಾಲು ಸಂಪೂರ್ಣ ಆಹಾರಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ. ಇದರಲ್ಲಿ ಕ್ಯಾಲ್ಸಿಯಂ, ಪ್ರೋಟೀನ್, ವಿಟಮಿನ್‌ಗಳು ಹಾಗೂ ಹಲವು ಅಗತ್ಯ ಖನಿಜಾಂಶಗಳು ಸಮೃದ್ಧವಾಗಿದ್ದು, ಮೂಳೆಗಳ ಬಲವರ್ಧನೆ, ಸ್ನಾಯುಗಳ ಬೆಳವಣಿಗೆ ಮತ್ತು ದೇಹದ ಆರೋಗ್ಯ ಕಾಪಾಡಲು ಸಹಕಾರಿಯಾಗಿದೆ. ಅನೇಕರು ಪ್ರತಿದಿನ ಹಾಲನ್ನು ನೇರವಾಗಿ ಕುಡಿಯುವುದರ ಜೊತೆಗೆ ಚಹಾ, ಕಾಫಿ ಅಥವಾ ವಿವಿಧ ಪಾನೀಯಗಳ ರೂಪದಲ್ಲೂ ಸೇವಿಸುತ್ತಾರೆ. ಆದರೆ ಕೆಲವು ಆಹಾರಗಳೊಂದಿಗೆ ಹಾಲನ್ನು ಸೇವಿಸುವುದು ಜೀರ್ಣಕ್ರಿಯೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಆರೋಗ್ಯ ತಜ್ಞರು ಹಾಗೂ ಆಯುರ್ವೇದ ತಜ್ಞರು ಎಚ್ಚರಿಸುತ್ತಾರೆ. […]
ಮಂಗಳೂರು: ಜಿಲ್ಲಾ ಕುಪ್ಮಾ ಸಮಿತಿ ಚಿಂತನಾ ಸಭೆ

ಮಂಗಳೂರು: ಕರ್ನಾಟಕ ಅನುದಾನರಹಿತ ಖಾಸಗಿ ಕಾಲೇಜು ಆಡಳಿತ ಮಂಡಳಿಗಳ ಸಂಘ , ದಕ್ಷಿಣ ಕನ್ನಡ ಜಿಲ್ಲಾ ಕುಪ್ಮಾ ಸಮಿತಿ ಇದರ ಚಿಂತನಾ ಸಭೆಯು ಜೂ.23 ರಂದು ಸಂಜೆ 4:30 ಕ್ಕೆ ಮಂಗಳೂರಿನ ಹೋಟೇಲ್ ಓಶಿಯನ್ ಪರ್ಲ್ ನಲ್ಲಿ ನಡೆಯಿತು. ಅಧ್ಯಕ್ಷತೆಯನ್ನು ರಾಜ್ಯ ಕುಪ್ಮಾ ಸಮಿತಿಯ ಅಧ್ಯಕ್ಷರಾದ ಡಾ.ಎಂ ಮೋಹನ್ ಆಳ್ವ ಅವರು ವಹಿಸಿಕೊಂಡಿದ್ದರು. ನಡೆದ ಚಿಂತನಾ ಸಭೆಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಪರಿಹಾರಗಳು ವಿಷಯದ ಮೇಲೆಕುಪ್ಮಾ ರಾಜ್ಯ ಸಮಿತಿಯ ಕಾರ್ಯದರ್ಶಿ ಪ್ರೊ.ನರೇಂದ್ರ ಎಲ್ […]
ಪತಿಗಿಂತ ಹೆಚ್ಚು ಸಂಬಳ ಪಡೆಯುವ ಪತ್ನಿಗಿಲ್ಲ ಜೀವನಾಂಶ: ಹೈಕೋರ್ಟ್ ಮಹತ್ವದ ತೀರ್ಪು

ಬೆಂಗಳೂರು: ಪತಿಗಿಂತ ಹೆಚ್ಚಿನ ಆದಾಯ ಹೊಂದಿರುವ ಪತ್ನಿಗೆ ಜೀವನಾಂಶ ನೀಡುವ ಅಗತ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ನ್ಯಾಯಮೂರ್ತಿ ಡಾ. ಚಿಲ್ಲಕೂರ್ ಸುಮಲತಾ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ. 2024ರಲ್ಲಿ ವಿವಾಹವಾಗಿದ್ದ ದಂಪತಿ ಕೆಲವೇ ತಿಂಗಳಲ್ಲಿ ಪ್ರತ್ಯೇಕವಾಗಿದ್ದರು. ಬಳಿಕ ಪತ್ನಿ ಜೀವನಾಂಶ ಕೋರಿ ವಿಚಾರಣಾ ನ್ಯಾಯಾಲಯದ ಮೊರೆ ಹೋಗಿದ್ದರು. ವಿಚಾರಣೆಯ ವೇಳೆ, ಪತಿಯ ಮಾಸಿಕ ಆದಾಯ 60,646 ರೂ. ಇದ್ದರೆ, ಪತ್ನಿಯ ಮಾಸಿಕ ಆದಾಯ 1 ಲಕ್ಷ ರೂ. ಎಂಬುದು ದಾಖಲೆಗಳಿಂದ […]
ನಿಟ್ಟೆಯಲ್ಲಿ ಪ್ರಥಮ ವರ್ಷದ ಬಿಟೆಕ್ ವಿದ್ಯಾರ್ಥಿಗಳ ಇಂಡಕ್ಷನ್ ಕಾರ್ಯಕ್ರಮದ ಉದ್ಘಾಟನೆ

ನಿಟ್ಟೆ: ಭಾರತದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲೊಂದಾದ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಆಫ್ ಕ್ಯಾಂಪಸ್ ಸೆಂಟರ್ ನ ವಿದ್ಯಾಸಂಸ್ಥೆಗಳಲ್ಲೊಂದಾದ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಬಿ.ಟೆಕ್ ಕೋರ್ಸ್ ಗಳಿಗೆ ೨೦೨೬ ನೇ ಸಾಲಿನಲ್ಲಿ ಪ್ರವೇಶಾತಿ ಪಡೆದ ನೂತನ ಬ್ಯಾಚ್ ನ ಉದ್ಘಾಟನಾ ಕಾರ್ಯಕ್ರಮವು ಜೂ.29 ರಂದು ನಿಟ್ಟೆಯ ನೂತನ ಆಂಫಿಥಿಯೇಟರ್ ನಲ್ಲಿ ಜರುಗಿತು.ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಪ್ರೋ-ಚಾನ್ಸಲರ್ ಡಾ.ಶಾಂತರಾಮ್ ಶೆಟ್ಟಿ ವಿದ್ಯಾರ್ಥಿಗಳನ್ನು ಹಾಗೂ ಪೋಷಕರನ್ನು ಉದ್ದೇಶಿಸಿ ಮಾತನಾಡಿದರು. ‘ಇಂದಿನ ದಿನಗಳಲ್ಲಿ ಅಗತ್ಯತೆಗೆ ತಕ್ಕಂತೆ ವಿದ್ಯಾರ್ಥಿಗಳು ಕೌಶಲ್ಯತೆಯನ್ನು ಬೆಳೆಸಿಕೊಂಡು […]