ಕಾಣದಂತೆ ಮಾಯವಾದ ಮುಂಗಾರು,ದೇಶದಲ್ಲಿ ಶೇ.41 ರಷ್ಟು ಮಳೆ ಕೊರತೆ! ಮತ್ತೆ ಮುಂಗಾರು ಸುರಿಯುತ್ತಾ?

ನವದೆಹಲಿ: ದೇಶಾದ್ಯಂತ ನೈಋತ್ಯ ಮುಂಗಾರು ಮಾರುತಗಳು ದುರ್ಬಲಗೊಂಡಿದ್ದು, ಜೂನ್ 4ರಿಂದ ಜೂನ್ 18ರವರೆಗೆ ಶೇ.41ರಷ್ಟು ಮಳೆ ಕೊರತೆ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ. ಐಎಂಡಿ ಬಿಡುಗಡೆ ಮಾಡಿರುವ ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಈ ಅವಧಿಯಲ್ಲಿ ದೇಶದಲ್ಲಿ ಸಾಮಾನ್ಯವಾಗಿ ಸುರಿಯಬೇಕಿದ್ದ 72.2 ಮಿಲಿಮೀಟರ್ ಮಳೆಯ ಬದಲಾಗಿ ಕೇವಲ 42.6 ಮಿಲಿಮೀಟರ್ ಮಳೆಯಷ್ಟೇ ದಾಖಲಾಗಿದೆ. ಪ್ರದೇಶವಾರು ಮಳೆ ವ್ಯತ್ಯಾಸದ ವಿವರಗಳನ್ನು ಗಮನಿಸಿದರೆ, ಮಧ್ಯ ಭಾರತದಲ್ಲಿ ಅತಿಹೆಚ್ಚು ಶೇ.67ರಷ್ಟು ಮಳೆ ಕೊರತೆ ಕಂಡುಬಂದಿದೆ. ಪೂರ್ವ ಮತ್ತು ಈಶಾನ್ಯ […]

ಅಂತಾರಾಷ್ಟ್ರೀಯ ಯೋಗ ದಿನಾಚರಣೆ

ಉಡುಪಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಸ್ಕೌಟ್ಸ್ & ಗೈಡ್ಸ್, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ವಿವಿಧ ಯೋಗ ಸಂಸ್ಥೆಗಳ ಸಹಯೋಗದೊಂದಿಗೆ 12 ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವು ಜೂನ್ 21 ರಂದು ಬೆಳಗ್ಗೆ 7 ಗಂಟೆಗೆ ನಗರದ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಯು.ಟಿ […]