ಬ್ಯಾಚುಲರ್ ಆಫ್ ವಿಜ್ಯುಯಲ್ ಆರ್ಟ್ಸ್ ಪ್ರವೇಶಾತಿ: ಅರ್ಜಿ ಆಹ್ವಾನ

ಉಡುಪಿ: ಮೈಸೂರು ಸಿದ್ದಾರ್ಥ ನಗರದ ಚಾಮರಾಜೇಂದ್ರ ಸರ್ಕಾರಿ ದೃಶ್ಯ ಕಲಾ ಕಾಲೇಜು (ಕಾವಾ) ಇಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿಗೆ ರಾಜ್ಯ ಶಿಕ್ಷಣ ಪದ್ಧತಿಯಂತೆ ಪ್ರಥಮ ವರ್ಷದ ಬ್ಯಾಚುಲರ್ ಆಫ್ ವಿಜ್ಯುಯಲ್ ಆರ್ಟ್ಸ್ (ಬಿ.ವಿ.ಎ) – ಸ್ನಾತಕ ಪದವಿ ತರಗತಿಗಳ ಪ್ರವೇಶಾತಿಗಾಗಿ ದ್ವಿತೀಯ ಪಿ.ಯು.ಸಿ / ಸಮಾನಾಂತರ ಕೋರ್ಸುಗಳಲ್ಲಿ ಉತ್ತೀರ್ಣರಾಗಿರುವ ಅರ್ಹ ಅಭ್ಯರ್ಥಿಗಳಿಂದ ವೆಬ್‌ಸೈಟ್ https://uucms.karnataka.gov.in ನಲ್ಲಿ ಆನ್‌ಲೈನ್ ಮೂಲಕ ಜೂನ್ 22 ರ ವರೆಗೆ (ದಂಡ ಶುಲ್ಕದೊಂದಿಗೆ) ಅರ್ಜಿ ಆಹ್ವಾನಿಸಲಾಗಿದೆ. ಸದರಿ ಪದವಿಯಲ್ಲಿ ಚಿತ್ರಕಲೆ, ಶಿಲ್ಪಕಲೆ, ಗ್ರಾಫಿಕ್ಸ್, […]
NEET ಮರುಪರೀಕ್ಷೆಗೂ ಮುನ್ನ ವಿದ್ಯಾರ್ಥಿಗಳು ತಿಳಿದುಕೊಳ್ಳಲೇಬೇಕಾದ ಮುಖ್ಯ ಸಂಗತಿಗಳಿವು, NTA ಮಹತ್ವದ ಎಚ್ಚರಿಕೆ

ನವದೆಹಲಿ: ನೀಟ್ ಯುಜಿ-2026 (NEET UG 2026) ಮರುಪರೀಕ್ಷೆಯ ದಿನಾಂಕ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಅಭ್ಯರ್ಥಿಗಳಿಗೆ ಮಹತ್ವದ ಎಚ್ಚರಿಕೆ ನೀಡಿದೆ. ಜೂನ್ 21, 2026ರಂದು ನಡೆಯಲಿರುವ ಮರುಪರೀಕ್ಷೆಗೆ ಸಂಬಂಧಿಸಿದ ಪ್ರವೇಶ ಪತ್ರ (Admit Card) ಡೌನ್‌ಲೋಡ್ ಮಾಡಿಕೊಳ್ಳುವ ಕುರಿತು ಅಭ್ಯರ್ಥಿಗಳಿಗೆ ಎನ್‌ಟಿಎ ಎಸ್‌ಎಂಎಸ್, ಇ-ಮೇಲ್ ಹಾಗೂ ವಾಟ್ಸಾಪ್ ಮೂಲಕ ಜ್ಞಾಪನೆಗಳನ್ನು ಕಳುಹಿಸಲು ಆರಂಭಿಸಿದೆ. ಇದರ ನಡುವೆಯೇ ನಕಲಿ ಸಂದೇಶಗಳು, ಸೈಬರ್ ವಂಚನೆ ಹಾಗೂ ಹಣ ಕೇಳುವ ಮೋಸಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಅತ್ಯಂತ […]
ರೇಣುಕಾಸ್ವಾಮಿ ಕೊಲೆ ಪ್ರಕರಣ: ಈ ಕೇಸ್ ನಿಂದ ನಿವೃತ್ತಿಯಾಗಲು ಬಯಸಿದ್ದೇನೆ ಎಂದ ದರ್ಶನ್ ಪರ ವಕೀಲರು

ಬೆಂಗಳೂರು: ನಟ ದರ್ಶನ್ ಹಾಗೂ ಇತರರ ವಿರುದ್ಧದ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ರೇಣುಕಾಸ್ವಾಮಿ ಅವರ ತಾಯಿ ಪಾಟೀ ಸಲ್ಲಿಸಿದ್ದ ಸವಾಲಿನ ಅರ್ಜಿಗೆ ಅವಕಾಶ ಕೋರಿ ಪ್ರಾಸಿಕ್ಯೂಷನ್ ಹೈಕೋರ್ಟ್ ಪೀಠದ ಮುಂದೆ ಅರ್ಜಿ ಸಲ್ಲಿಸಿದೆ. ಪ್ರಾಸಿಕ್ಯೂಷನ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಗುರುವಾರ ವಿಚಾರಣೆ ನಡೆಸಿತು. ಈ ವೇಳೆ ದರ್ಶನ್ ಪರ ವಕೀಲ ಸುನೀಲ್ಕುಮಾರ್ ವಾದ ಮಂಡನೆಗೆ ಕಾಲಾವಕಾಶ ಕೋರಿದರು. ವಿಚಾರಣಾ ನ್ಯಾಯಾಲಯದಲ್ಲಿ ದರ್ಶನ್ ಪರವಾಗಿ ಹಾಜರಾಗುತ್ತಿದ್ದೇನೆ. ಆದರೆ, ಹೈಕೋರ್ಟ್‌ನಲ್ಲಿರುವ […]
ಮಂಗಳೂರು ವಿವಿ ಅತಿಥಿ ಉಪನ್ಯಾಸಕರ ಹುದ್ದೆ : ಅರ್ಜಿ ಆಹ್ವಾನ

ಮಂಗಳೂರು: 2026-27ನೇ ಶೈಕ್ಷಣಿಕ ಸಾಲಿಗೆ ಮಂಗಳೂರು ವಿಶ್ವವಿದ್ಯಾನಿಲಯದ ಘಟಕ ಕಾಲೇಜುಗಳಾದ ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು /ವಿಶ್ವವಿದ್ಯಾನಿಲಯ ಪ್ರಥಮ ದರ್ಜೆ ಕಾಲೇಜು ಮಂಗಳಗಂಗೋತ್ರಿ/ವಿಶ್ವವಿದ್ಯಾನಿಲಯ ಕಾಲೇಜು, ನೆಲ್ಯಾಡಿ ಮತ್ತು ವಿಶ್ವವಿದ್ಯಾನಿಲಯ ಕಾಲೇಜು, ಬನ್ನಡ್ಕ ಮೂಡಬಿದಿರೆ, ಇಲ್ಲಿಯ ಪದವಿ ಕಾರ್ಯಕ್ರಮದ ಇಂಗ್ಲಿಷ್, ಕನ್ನಡ, ಹಿಂದಿ, ಸಂಸ್ಕೃತ, ಇತಿಹಾಸ, ಎಕೊನಾಮಿಕ್ಸ್, ರಾಜ್ಯಶಾಸ್ತ್ರ, ಜಿಯೋಗ್ರಾಫಿ, ಕೆಮಿಸ್ಟ್ರಿ, ಗಣಿತ, ಮೈಕ್ರೊಬಯೋಲಜಿ, ಕಂಪ್ಯೂಟರ್ ಸೈನ್ಸ್/ಬಿ.ಸಿ.ಎ, ಬಾಟನಿ, ಪ್ರಾಣಿಶಾಸ್ತ್ರ, ಕಾಮರ್ಸ್ ಆ್ಯಂಡ್ ಮ್ಯಾನೇಜ್‍ಮೆಂಟ್, ದೈಹಿಕ ಶಿಕ್ಷಣ, ಪತ್ರಿಕೋದ್ಯಮ, ಟೂರಿಸಂ ಆ್ಯಂಡ್ ಟ್ರಾವೆಲ್ ಮ್ಯಾನೇಜ್‍ಮೆಂಟ್ ವಿಷಯಗಳಿಗೆ ಅಗತ್ಯವಿರುವ ಅತಿಥಿ ಉಪನ್ಯಾಸಕರ […]
ಕಾಪು: ಸ್ಕೂಟಿಗೆ ಬಸ್ ಢಿಕ್ಕಿ- ಸವಾರ ಗಂಭೀರ

ಉಡುಪಿ: ಬಸ್ ವೊಂದು ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಕಾಪು ಸಾಯಿ ಸರ್ವಿಸ್ ಸ್ಟೇಷನ್ ಬಳಿ ನಡೆದಿದೆ. ಕಾಪು ಸರ್ವಿಸ್ ರಸ್ತೆಯಲ್ಲಿ ಮಂಗಳೂರಿನಿಂದ ಉಡುಪಿ ಕಡೆಗೆ ತೆರಳುವ ಎಕ್ಸ್ಪ್ರೆಸ್ ಬಸ್ ಎದುರಿನಿಂದ ಹೆದ್ದಾರಿಯಲ್ಲಿ ಹೋಗುತ್ತಿದ್ದ ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ. ಗಂಭೀರ ಗಾಯಗೊಂಡಿರುವ ಸ್ಕೂಟಿ ಸವಾರನನ್ನು ಮಂಗಳೂರು ಸಸಿಹಿತ್ಲು ನಿವಾಸಿ, ಪ್ರಸ್ತುತ ಕಾಪುವಿನಲ್ಲಿರುವ ಗಣೇಶ್ ಪಾತ್ರಿ ಎಂದು ಗುರುತಿಸಲಾಗಿದೆ. ಗಾಯಾಳು ಸ್ಕೂಟಿ ಸವಾರನನ್ನು […]