ಎಟಿಎಂ ನಲ್ಲಿ ಕ್ಯಾಶ್ ಡೆಪಾಸಿಟ್ ಮಾಡುವಾಗ ಕ್ಯಾಶ್ ಕೊಡಿ ಯುಪಿಐ ಮಾಡ್ತೇನೆ ಎಂದು ಯಾಮಾರಿಸ್ತಾರೆ! : ಶುರುವಾಗಿದೆ ಹೊಸ ಹೈಟೆಕ್ ವಂಚನೆ ಜಾಲ, ಎಚ್ಚರದಿಂದಿರಿ!

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇದೀಗ ಹೊಸ ಮಾದರಿಯ ಹೈಟೆಕ್ ವಂಚನೆ ಜಾಲವೊಂದು ಸಕ್ರಿಯವಾಗಿದ್ದು, ಎಟಿಎಂ ಕ್ಯಾಶ್ ಡೆಪಾಸಿಟ್ ಮಷೀನ್‌ಗಳ ಬಳಿ ಹಣ ಜಮೆ ಮಾಡಲು ಬರುವ ಅಮಾಯಕ ಜನರನ್ನು ಟಾರ್ಗೆಟ್ ಮಾಡಿ ಲಕ್ಷಾಂತರ ರೂಪಾಯಿ ದೋಚುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ.ಮೈಸೂರು ಮಾತ್ರವಲ್ಲ, ರಾಜ್ಯದ ಎಲ್ಲಾ ಕಡೆಗಳಲ್ಲೂ ಈ ರೀತಿಯ ಮೋಸದ ಜಾಲವೊಂದು ಸಕ್ರೀಯವಾಗಿದೆಯಂತೆ. ಈ ಸುದ್ದಿ ಓದಿ, ಎಟಿಎಂ ನಲ್ಲಿ ಕ್ಯಾಶ್ ಡೆಪಾಸಿಟ್ ಮಾಡಲು ಹೋಗುವಾಗ ಜಾಗರೂಕರಾಗಿರಿ. ಏನಿದು ಹೊಸ ವಂಚನೆ ತಂತ್ರ? ವಂಚಕರು ಎಟಿಎಂ […]
ಖಾಸಗಿ ಫೋಟೋ, ವಿಡಿಯೋ ವೈರಲ್ ಮಾಡಿದರೆ ಕಾದಿದೆ ಕಠಿಣ ಶಿಕ್ಷೆ:ಪೊಲೀಸ್ ಮಹಾನಿರ್ದೇಶಕರ ಹೊಸ ಆದೇಶದಲ್ಲೇನಿದೆ?

ಬೆಂಗಳೂರು: ಬೇರೆಯವರ ಖಾಸಗಿ ಫೋಟೋಗಳು ಹಾಗೂ ವಿಡಿಯೋಗಳನ್ನು ಅವರ ಅನುಮತಿ ಇಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆ ಮಾಡುವುದು ಅಥವಾ ವೈರಲ್ ಮಾಡುವವರ ವಿರುದ್ಧ ಕಡ್ಡಾಯವಾಗಿ ಎಫ್‌ಐಆರ್ ದಾಖಲಿಸಬೇಕು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಹಾಗೂ ಪೊಲೀಸ್ ಮಹಾ ನಿರೀಕ್ಷಕ (ಡಿಜಿ-ಐಜಿಪಿ) ಡಾ. ಎಂ.ಎ. ಸಲೀಂ ಮಹತ್ವದ ಆದೇಶ ಹೊರಡಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಖಾಸಗಿ ದೃಶ್ಯಗಳನ್ನು ದುರುಪಯೋಗಪಡಿಸಿಕೊಂಡು ಬ್ಲಾಕ್‌ಮೇಲ್, ಸೆಕ್ಸ್ಟೋರ್ಷನ್, ಬೆದರಿಕೆ ಹಾಗೂ ಪ್ರತೀಕಾರದ ಉದ್ದೇಶದಿಂದ ಅಶ್ಲೀಲ ವಿಷಯಗಳನ್ನು ಪ್ರಸಾರ ಮಾಡುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ […]
ಕಾಸ್ಮೆಟಾಲಜಿ ಪದವಿಯಲ್ಲಿದೆ ಭವಿಷ್ಯ: MSDC ಯಲ್ಲಿದೆ ಈ ಅತ್ಯುತ್ತಮ ಪದವಿ ಕೋರ್ಸ್: ಪ್ರವೇಶಾತಿ ಶುರು, ಅರ್ಜಿ ಸಲ್ಲಿಸಿ

ಉಡುಪಿ: ಮಣಿಪಾಲ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ (MSDC) ಮತ್ತು ಓರೇನ್ ಇಂಟರ್‌ನ್ಯಾಷನಲ್ ಸಂಸ್ಥೆಗಳ ಸಹಭಾಗಿತ್ವದಲ್ಲಿ ಕಾಸ್ಮೆಟಾಲಜಿ ಕ್ಷೇತ್ರದಲ್ಲಿ ಬ್ಯಾಚುಲರ್ ಪದವಿ ಕೋರ್ಸ್‌ಗಳಿಗೆ 2026–27ನೇ ಸಾಲಿನ ಪ್ರವೇಶಾತಿ ಆರಂಭಗೊಂಡಿವೆ. ಸೌಂದರ್ಯ ವೃತ್ತಿಪರರ ಮುಂದಿನ ಪೀಳಿಗೆಯನ್ನು ಸಬಲಗೊಳಿಸುವ ಉದ್ದೇಶದಿಂದ ರೂಪಿಸಲಾದ ಈ ಕೋರ್ಸ್‌ನಲ್ಲಿ ವಿದ್ಯಾರ್ಥಿಗಳಿಗೆ ಉನ್ನತ ಮಟ್ಟದ ತರಬೇತಿ ನೀಡಲಾಗುತ್ತದೆ. ಯುಜಿಸಿ ಮಾನ್ಯತೆ ಪಡೆದ ಪದವಿಯಾಗಿರುವುದರಿಂದ ಸರ್ಕಾರ ಹಾಗೂ ಖಾಸಗಿ ವಲಯಗಳಲ್ಲಿ ಉದ್ಯೋಗಾವಕಾಶಗಳು ಲಭ್ಯವಾಗಲಿವೆ.ಈ ಕೋರ್ಸ್‌ನಲ್ಲಿ ಮಾಸ್ಟರ್ ಕಾಸ್ಮೆಟಾಲಜಿ, ಮೇಕಪ್, ಕೂದಲು ಆರೈಕೆ, ನೇಲ್ ಆರ್ಟ್ ಸೇರಿದಂತೆ ಹಲವು ವಿಷಯಗಳಲ್ಲಿ […]
ನಾಲ್ಕು ದಶಕಗಳ ಪಯಣಕ್ಕೆ ಸಾಕ್ಷಿಯಾದ ಎಕ್ಸ್‌ಪರ್ಟ್ ಹಳೆ ವಿದ್ಯಾರ್ಥಿಗಳ ಸಮಾಗಮ

ಮಂಗಳೂರು: ಶೈಕ್ಷಣಿಕ ಕ್ಷೇತ್ರದಲ್ಲಿ ಶ್ರೇಷ್ಠತೆಯ ಹೆಗ್ಗುರುತಾಗಿ ಗುರುತಿಸಿಕೊಂಡಿರುವ ಎಕ್ಸ್‌ಪರ್ಟ್ ಸಮೂಹ ಶಿಕ್ಷಣ ಸಂಸ್ಥೆಯು ಮೊದಲ ಬಾರಿಗೆ ಹಳೆ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ನಾಲ್ಕು ದಶಕಗಳ ಯಶಸ್ವಿ ಪಯಣವನ್ನು ಸಂಭ್ರಮಿಸಿತು.“Reconnect, Relive, Reunite” ಎಂಬ ಧ್ಯೇಯದಡಿ ಮಂಗಳೂರು ನಗರದ ಹೊಟೇಲ್ ಓಷನ್ ಪರ್ಲ್‌ನಲ್ಲಿ ಆಯೋಜಿಸಲಾದ ಸಮಾಗಮದಲ್ಲಿ 1986ರಿಂದ 2008ರವರೆಗಿನ ಕೋಚಿಂಗ್ ಬ್ಯಾಚ್‌ಗಳಲ್ಲಿ ಅಧ್ಯಾಯನ ಮ್ಮಾಡಿರುವ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ವಿದ್ಯಾರ್ಥಿ ಜೀವನದ ಅಮೂಲ್ಯ ನೆನಪುಗಳನ್ನು ಮೆಲುಕು ಹಾಕಿದರು. ಹಳೆ ವಿದ್ಯಾರ್ಥಿಗಳು, ಶಿಕ್ಷಕ ವೃಂದ ಹಾಗೂ ಹಿರಿಯ […]
ಮೊದಲ ಸುತ್ತಿನ ಸೀಟು ಹಂಚಿಕೆ ಫಲಿತಾಂಶ: ಜ್ಞಾನಸುಧಾದ 5 ವಿದ್ಯಾರ್ಥಿಗಳು ಐ.ಐ.ಟಿಗೆ ಹಾಗೂ 14 ವಿದ್ಯಾರ್ಥಿಗಳು ಎನ್.ಐ.ಟಿಗೆ ಪ್ರವೇಶ

ಕಾರ್ಕಳ: ಐ.ಐ.ಟಿ, ಎನ್.ಐ.ಟಿ ಹಾಗೂ ಐ.ಐ.ಐ.ಟಿ ಪ್ರವೇಶಕ್ಕೆ 2026-27ನೇ ಸಾಲಿನ ಎoSಂಂ ಕೌನ್ಸಲಿಂಗ್ ಪ್ರಕ್ರಿಯೆಯು ನಡೆಯುತ್ತಿದ್ದು, ಮೊದಲ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶದಲ್ಲಿ ಜ್ಞಾನಸುಧಾದ 23 ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ಪ್ರತಿಷ್ಠಿತ ತಾಂತ್ರಿಕ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶಿಸಲು ಆಯ್ಕೆಯಾಗಿರುತ್ತಾರೆ. 5 ವಿದ್ಯಾರ್ಥಿಗಳು ಐ.ಐ.ಟಿಗೆ, 14ವಿದ್ಯಾರ್ಥಿಗಳು ಎನ್.ಐ.ಟಿಗೆ ಹಾಗೂ ನಾಲ್ವರು ವಿದ್ಯಾರ್ಥಿಗಳು ಐ.ಐ.ಐ.ಟಿ ಪ್ರವೇಶಕ್ಕೆ ಆಯ್ಕೆಯಾಗಿರುತ್ತಾರೆ. ಐ.ಐ.ಟಿ.ಗೆ ಆಯ್ಕೆಗೊಂಡವರು: 1. ಶಶಾಂಕ್ ವಿ (ಐ.ಐ.ಟಿ ಬಾಂಬೆ), 2. ತೇಜಸ್ ನಾಯಕ್ (ಐ.ಐ.ಟಿ ಭುಬನೇಶ್ವರ್), 3. ಭರತ್ ರೆಡ್ಡಿ ವಿ (ಐ.ಐ.ಟಿ […]