ಹೊಸಂಗಡಿ: ಆವರಣವಿಲ್ಲದ ಬಾವಿಗೆ ಬಿದ್ದ ದನದ ರಕ್ಷಣೆ: ಸ್ಥಳೀಯರ ಕಾರ್ಯಕ್ಕೆ ಭಾರೀ ಮೆಚ್ಚುಗೆ

ಉಡುಪಿ: ಆವರಣವಿಲ್ಲದ ಬಾವಿಗೆ ಆಕಸ್ಮಿಕವಾಗಿ ಬಿದ್ದ ದನವೊಂದನ್ನು ಸ್ಥಳೀಯರು ಹಾಗೂ ಕ್ರೇನ್ ಚಾಲಕರ ಸಹಕಾರದಿಂದ ಸುರಕ್ಷಿತವಾಗಿ ರಕ್ಷಿಸಿದ ಘಟನೆ ಶುಕ್ರವಾರ ಹೊಸಂಗಡಿ ಗ್ರಾಮದ ಅಂಬೂರು ಪ್ರದೇಶದಲ್ಲಿ ನಡೆದಿದೆ. ಸ್ಥಳೀಯ ನಿವಾಸಿಯೊಬ್ಬರಿಗೆ ಸೇರಿದ ದನ ಮನೆಯ ಸಮೀಪ ಮೇಯುತ್ತಿದ್ದ ವೇಳೆ ಆವರಣವಿಲ್ಲದ ಬಾವಿಯ ಬಳಿ ತೆರಳಿ ಕಾಲು ಜಾರಿ ಬಾವಿಗೆ ಬಿದ್ದಿದೆ. ದನದ ಅರಚಾಟ ಕೇಳಿದ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದಾಗ ಅದು ಬಾವಿಯಲ್ಲಿ ಸಿಲುಕಿಕೊಂಡಿರುವುದು ಕಂಡುಬಂದಿತು. ತಕ್ಷಣ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ ಸ್ಥಳೀಯರು ಮೊದಲಿಗೆ ಹಗ್ಗದ ಸಹಾಯದಿಂದ […]
ರೆಡ್ ಅಲರ್ಟ್ ಹಿನ್ನೆಲೆ: ನಾಳೆ ಕಾಸರಗೋಡು ಜಿಲ್ಲೆಯ ಶಿಕ್ಷಣ ಸಂಸ್ಥೆಗಳಿಗೆ ರಜೆ!

ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಣೆ ಮಾಡಿರುವುದರಿಂದ, ಕಾಸರಗೋಡು ಜಿಲ್ಲೆಯಲ್ಲಿ ಜೂನ್ 6ರಂದು ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ.ಜಿಲ್ಲಾಧಿಕಾರಿಗಳ ಆದೇಶದಂತೆ ಶಾಲೆಗಳು, ಐಸಿಎಸ್‌ಇ ಹಾಗೂ ಸಿಬಿಎಸ್‌ಇ ಶಿಕ್ಷಣ ಸಂಸ್ಥೆಗಳು, ವ್ಯತ್ತಿಪರ ಕಾಲೇಜುಗಳು, ಕೇಂದ್ರ ಸರ್ಕಾರದ ಶಿಕ್ಷಣ ಸಂಸ್ಥೆಗಳು, ಮದರಸಾಗಳು, ಅಂಗನವಾಡಿ ಕೇಂದ್ರಗಳು ಹಾಗೂ ಟ್ಯೂಷನ್ ತರಗತಿಗಳು ಸೇರಿದಂತೆ ಎಲ್ಲಾ ಶೈಕ್ಷಣಿಕ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ.ವಸತಿ ಶಾಲೆಗಳಿಗೆ ಈ ರಜೆ ಅನ್ವಯಿಸುವುದಿಲ್ಲ. ಅಲ್ಲದೇ ಈಗಾಗಲೇ ನಿಗದಿಯಾಗಿರುವ ವಿಶ್ವವಿದ್ಯಾಲಯ ಪರೀಕ್ಷೆಗಳು, […]
ಅಗ್ನಿಶಾಮಕ ಸಿಬ್ಬಂದಿ ನಾಗರಾಜ್ ಪೂಜಾರಿಯ ಮತ್ತೊಂದು ಸಾಹಸ: ಬಾವಿಯೊಳಗೆ ಪ್ರಜ್ಞೆ ತಪ್ಪಿದ್ದ ವ್ಯಕ್ತಿಯ ರಕ್ಷಣೆ

ಉಡುಪಿ: ಕೆಲವು ವರ್ಷಗಳ ಹಿಂದೆ ಕೊಲ್ಲೂರಿನ ಸೌಪರ್ಣಿಕಾ ನದಿಯಲ್ಲಿ ಕೊಚ್ಚಿಹೋಗಿದ್ದ ಯಾತ್ರಿಕರ ಮೃತದೇಹವನ್ನು ಭಾರಿ ಮಳೆಯ ನಡುವೆಯೂ ಹರಸಾಹಸ ಪಟ್ಟು ಮೇಲಕ್ಕೆತ್ತಿ ತಂದು ರಾಜ್ಯ ಸರಕಾರದ ಗಮನ ಸೆಳೆದು ಮುಖ್ಯಮಂತ್ರಿ ಪದಕ್ಕ ಪಡೆದಿರುವ ಅಗ್ನಿಶಾಮಕ ದಳದ ಸಿಬ್ಬಂದಿ ನಾಗರಾಜ್ ಪೂಜಾರಿ ಇದೀಗ ಮತ್ತೊಂದು ಸಾಹಸ ಕಾರ್ಯದ ಮೂಲಕ ವ್ಯಕ್ತಿಯ ಜೀವ ಉಳಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸುಳ್ಯ ತಾಲೂಕಿನ ಕಸಬ ಗ್ರಾಮದ ಕಂದಡ್ಕದಲ್ಲಿ ನವೀನ್ ಕುಮಾರ್ ಎಂಬವರು ತಮ್ಮ ಮನೆಯ ಸುಮಾರು ನಲವತ್ತು ಅಡಿ ಆಳದ ಬಾವಿಯನ್ನು ಸ್ವಚ್ಛಗೊಳಿಸುವ […]
ಪೋದಾರ್ ಅಂತರಾಷ್ಟ್ರೀಯ ಶಾಲೆಯಲ್ಲಿ `ಯುಕ್ತಿ’ ಗಣಿತ ಥೀಮ್ ಅನಾವರಣ

ಉಡುಪಿ: ವಿದ್ಯಾರ್ಥಿಗಳಲ್ಲಿ ಗಣಿತದ ಬಗ್ಗೆ ಆಸಕ್ತಿ, ತಾರ್ಕಿಕ ಚಿಂತನೆ ಹಾಗೂ ಸಮಸ್ಯೆ ಪರಿಹಾರ ಕೌಶಲ್ಯವನ್ನು ಬೆಳೆಸುವ ಉದ್ದೇಶದಿಂದ ಪೋದಾರ್ ಅಂತರಾಷ್ಟ್ರೀಯ ಶಾಲೆಯಲ್ಲಿ `ಯುಕ್ತಿ’ ಗಣಿತ ಥೀಮ್‍ಗೆ ಚಾಲನೆ ನೀಡಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಡಯೆಟ್ ಉಡುಪಿಯ ಪ್ರಾಂಶುಪಾಲರಾದ ಡಾ. ಅಶೋಕ ಕಾಮತ್ ಅವರು ಯುಕ್ತಿ’ ಥೀಮ್ ಅನ್ನು ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಶಾಲೆಯ ಗಣಿತ ಶಿಕ್ಷಕಿಯರಾದ ಶ್ರೀಮತಿ ಭಾಗ್ಯಲಕ್ಷ್ಮಿ ಹಾಗೂ ಕುಮಾರಿ ದsನುಶ್ರೀ ಅವರು ಗಣಿತ ಕ್ಲಬ್ ಸದಸ್ಯರನ್ನು ಪರಿಚಯಿಸಿಯುಕ್ತಿ’ ಯೋಜನೆಯ ಉದ್ದೇಶಗಳು ಹಾಗೂ ವರ್ಷಪೂರ್ತಿ […]
ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯು ರೋಗಿಗಳಿಗೆ 5,000 ಸಸಿಗಳನ್ನು ವಿತರಿಸುವ ಮೂಲಕ ವಿಶ್ವ ಪರಿಸರ ದಿನ ಆಚರಣೆ

ಮಣಿಪಾಲ: ವಿಶ್ವ ಪರಿಸರ ದಿನ 2026 ರ ಅಂಗವಾಗಿ, ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯು ಜೂನ್ 5 ರಂದು ಆಸ್ಪತ್ರೆಗೆ ಭೇಟಿ ನೀಡಿದ ರೋಗಿಗಳು ಮತ್ತು ಅವರ ಸಹಾಯಕರಿಗೆ 5,000 ಕ್ಕೂ ಹೆಚ್ಚು ಹಣ್ಣು ಬಿಡುವ ಮತ್ತು ಔಷಧೀಯ ಸಸ್ಯಗಳ ಸಸಿಗಳನ್ನು ವಿತರಿಸುವ ಮೂಲಕ ವಿಶಿಷ್ಟ ಮತ್ತು ಅರ್ಥಪೂರ್ಣ ಕಾರ್ಯವನ್ನು ಮಾಡಿತು . ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮದ (UNEP) ಆಶ್ರಯದಲ್ಲಿ ಪ್ರತಿ ವರ್ಷ ಜಾಗತಿಕವಾಗಿ ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ. 2026 ರ ಧ್ಯೇಯವಾಕ್ಯ “ಪ್ರಕೃತಿಯಿಂದ ಪ್ರೇರಿತ ಪರಿಸರ, […]