“ಬಟರ್ ಫ್ಲೈ ಹಾಲ್ ಚಂದ್ರನಗರದಲ್ಲಿ ಉಚಿತ ಸಮಗ್ರ ಆರೋಗ್ಯ ತಪಾಸಣಾ ಶಿಬಿರ”

ಕಾಪು : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ, ಜಿಲ್ಲಾ ಏಡ್ಸ್ ನಿಯಂತ್ರಣ ಹಾಗೂ ತಡೆಗಟ್ಟುವಿಕೆ ಘಟಕ ಉಡುಪಿ, ಸಮುದಾಯ ಆರೋಗ್ಯ ಕೇಂದ್ರ ಶಿರ್ವ, ಬಟರ್ ಫ್ಲೈ ಗೆಸ್ಟ್ ಹೌಸ್ & ಪಾರ್ಟಿ ಹಾಲ್ ಚಂದ್ರನಗರ ಗ್ರಾಮ ಪಂಚಾಯತ್ ಕುತ್ಯಾರು /ಕಳತ್ತೂರು, ಅಲಯನ್ಸ್ ಕ್ಲಬ್ ಉಡುಪಿ ರಾಯಲ್, ರೋಟರಿ ಕ್ಲಬ್ ಶಿರ್ವ ಇದರ ಸಹಯೋಗದೊಂದಿಗೆ ಉಚಿತ ಸಮಗ್ರ ಆರೋಗ್ಯ ತಪಾಸಣಾ ಶಿಬಿರ ಚಂದ್ರನಗರದ ಬಟರ್ ಫ್ಲೈ ಹಾಲ್ ಸಭಾಂಗಣದಲ್ಲಿ ಸಮಾಜ ಸೇವಕರು ಬಟರ್ ಫ್ಲೈ […]
ಬೆಂಗಳೂರಿಗೆ ಎಂಟ್ರಿ ಕೊಟ್ಟ ಎಬೋಲಾ? ಉಗಾಂಡಾದಿಂದ ಬಂದ ಮಹಿಳೆಗೆ ಸೋಂಕಿನ ಲಕ್ಷಣ,ಹೈ ಅಲರ್ಟ್

ಬೆಂಗಳೂರು: ಉಗಾಂಡಾದಿಂದ ಬಂದಿದ್ದ ಮಹಿಳೆಯಲ್ಲಿ ಎಬೋಲಾ ಸೋಂಕಿನ ಶಂಕಿತ ಲಕ್ಷಣಗಳು ಕಂಡುಬಂದ ಹಿನ್ನೆಲೆ ರಾಜ್ಯ ಆರೋಗ್ಯ ಇಲಾಖೆ ಹೈಅಲರ್ಟ್ ಘೋಷಿಸಿದೆ. ಮಹಿಳೆಯನ್ನು ನಗರದ ಸಾಂಕ್ರಾಮಿಕ ರೋಗಗಳ ಆಸ್ಪತ್ರೆಗೆ ಸ್ಥಳಾಂತರಿಸಿ ಪ್ರತ್ಯೇಕ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ, ಇದುವರೆಗೆ ಭಾರತದಲ್ಲಿ ಎಬೋಲಾ ಸೋಂಕು ದೃಢಪಟ್ಟಿಲ್ಲ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ. ಉಗಾಂಡಾದ ಕ್ಯಾಂಪಾಲಾ ನಿವಾಸಿಯಾಗಿರುವ 28 ವರ್ಷದ ನಗಿರೆ ಲತೀಫಾ ಮೇ 23ರಂದು ಬೆಂಗಳೂರಿಗೆ ಬಂದಿದ್ದರು. ಬಳಿಕ ದೇಹ ನೋವು ಸೇರಿದಂತೆ ಎಬೋಲಾ ವೈರಸ್‌ಗೆ ಹೋಲುವ ಕೆಲವು […]
ರಾಜ್ಯದ ಅರ್ಧದಷ್ಟು ಬೇಕರಿ ತಿನಿಸುಗಳು ತಿನ್ನಲು ಯೋಗ್ಯವಲ್ಲ,ತಿಂಡಿಗಳಲ್ಲಿ ಕ್ಯಾನ್ಸರ್ ಕಾರಕ ಅಂಶಗಳು, ವರದಿ ಬಿಚ್ಚಿಟ್ಟ ಭಯಾನಕ ಸತ್ಯಗಳಿವು!

ಬೆಂಗಳೂರು: ಬಣ್ಣ ಬಣ್ಣದ ಸಿಹಿತಿಂಡಿಗಳು, ಬಿಸಿ ಬಿಸಿ ಪಫ್ಸ್, ಕುರುಕುಲು ಚಿಪ್ಸ್‌ಗಳನ್ನು ಇಷ್ಟಪಟ್ಟು ತಿನ್ನುವ ಗ್ರಾಹಕರಿಗೆ ರಾಜ್ಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ನೀಡಿರುವ ಇತ್ತೀಚಿನ ವರದಿ ಆತಂಕ ಹುಟ್ಟಿಸಿದೆ. ರಾಜ್ಯದ ವಿವಿಧ ಬೇಕರಿಗಳಲ್ಲಿ ಮಾರಾಟವಾಗುತ್ತಿರುವ ಹಲವು ಆಹಾರ ಪದಾರ್ಥಗಳು ಮಾನವ ಸೇವನೆಗೆ ಸುರಕ್ಷಿತವಾಗಿಲ್ಲ ಎಂಬ ಅಂಶ ಲ್ಯಾಬ್ ಪರೀಕ್ಷೆಯಲ್ಲಿ ಬಹಿರಂಗವಾಗಿದೆ. ಆಹಾರ ಸುರಕ್ಷತಾ ಅಧಿಕಾರಿಗಳು ರಾಜ್ಯಾದ್ಯಂತ ಸಂಗ್ರಹಿಸಿದ 35,639 ಆಹಾರದ ಮಾದರಿಗಳನ್ನು ರಾಸಾಯನಿಕ ವಿಶ್ಲೇಷಣೆಗೆ ಕಳುಹಿಸಿದ್ದರು. ಲ್ಯಾಬ್ ವರದಿಯ ಪ್ರಕಾರ, ಅನೇಕ ಬೇಕರಿ ಉತ್ಪನ್ನಗಳು […]
ನಾಳೆ (ಮೇ.28) ಸಿದ್ದರಾಮಯ್ಯ ರಾಜೀನಾಮೆ, ಡಿಕೆಶಿ ಮುಖ್ಯಮಂತ್ರಿಯಾಗಿ ಈ ವಾರವೇ ಪ್ರಮಾಣವಚನ?

ಬೆಂಗಳೂರು: ಕಳೆದ ಮೂರು ವರ್ಷಗಳಿಂದ ರಾಜ್ಯದ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ಥಾನ ಬದಲಾವಣೆ ಕುರಿತ ರಾಜಕೀಯ ಚರ್ಚೆಗಳು ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿವೆ. ಗುರುವಾರ (ಮೇ 28) ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಕೇಳಿಬರುತ್ತಿವೆ. ಈ ಶುಕ್ರವಾರ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಿಸುವ ನಿರೀಕ್ಷೆ ಇದೆ ದೆಹಲಿ ಹೈಕಮಾಂಡ್ ಸಭೆಯ ಬಳಿಕ ರಾಜ್ಯ ಕಾಂಗ್ರೆಸ್‌ನಲ್ಲಿ ಮಹತ್ವದ ರಾಜಕೀಯ ಬೆಳವಣಿಗೆಗಳು ನಡೆಯುತ್ತಿದ್ದು, […]