ಸಾತ್ವಿಕ ಯಾಗ, ದಾನ, ಜ್ಞಾನ ಭಗವಂತನ ಅನುಸಂಧಾನಕ್ಕೆ ಸರಿಯಾದ ಹಾದಿ- ಒಡಿಯೂರು ಶ್ರೀ

ಉಡುಪಿ: ಯಾಗ, ದಾನ ಮತ್ತು ತಪಸ್ಸು ಇವು ಮೂರು ಕೂಡ ಭಗವಂತನ ಅನುಸಂಧಾನಕ್ಕೆ ಸರಿಯಾದ ಹಾದಿ. ಆದರೆ ಅವುಗಳಲ್ಲಿ ಶ್ರೇಷ್ಠವಾದುದು ಸಾತ್ವಿಕವಾದ ಯಾಗ, ದಾನ ಮತ್ತು ಜ್ಞಾನ. ಇವು ಮೂರಕ್ಕೂ ಅನುಕೂಲವಾಗುವಂತೆ ಪ್ರಸಾದ್ ರಾಜ್ ಕಾಂಚನ್ ಅವರು ಈ ಮಹಾರುದ್ರಯಾಗವನ್ನು ಆಯೋಜಿಸಿದ್ದಾರೆ. ಅದು ಸಾತ್ವಿಕವಾಗಿದ್ದು, ಅದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಒಡಿಯೂರು ಗುರು ದೇವದತ್ತಾ ಸಂಸ್ಥಾನದ ಗುರು ದೇವಾನಂದ ಸ್ವಾಮೀಜಿ ಹೇಳಿದರು. ಕೊಡವೂರು ಶಂಕರನಾರಾಯಣ ದೇವಸ್ಥಾನದಲ್ಲಿ ಪ್ರಸಾದ್‌ರಾಜ್‌ ಕಾಂಚನ್‌ ಅವರ ನೇತೃತ್ವದಲ್ಲಿ ಲೋಕ ಕಲ್ಯಾಣಾರ್ಥವಾಗಿ ನಡೆಯುತ್ತಿರುವ ಮಹಾ […]