ಕ್ರಿಕೆಟ್ ಬೆಟ್ಟಿಂಗ್ ಆರೋಪಿ ಭರತ್ ಜಯರಾಮ್ ದಾಸಗೆ ಗಡಿಪಾರು

ಉಡುಪಿ: ಕ್ರಿಕೆಟ್ ಬೆಟ್ಟಿಂಗ್ ಪ್ರಕರಣಗಳಲ್ಲಿ ಆರೋಪಿಯಾಗಿರುವ ಬ್ರಹ್ಮಾವರ ತಾಲೂಕಿನ ವಾರಂಬಳ್ಳಿ ಗ್ರಾಮದ ಮೂಡುಬಿರ್ತಿ ನಿವಾಸಿ ಭರತ್ ಜಯರಾಮ್ ದಾಸ (34) ವಿರುದ್ಧ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾಗೂ ವಿಶೇಷ ಕಾರ್ಯಾಂಗ ದಂಡಾಧಿಕಾರಿಗಳು ಗಡಿಪಾರು ಆದೇಶ ಹೊರಡಿಸಿದ್ದಾರೆ.ಭರತ್ ಜಯರಾಮ್ ದಾಸ ವಿರುದ್ಧ ಕೋಟ ಹಾಗೂ ಕುಂದಾಪುರ ಪೊಲೀಸ್ ಠಾಣೆಗಳಲ್ಲಿ ಕ್ರಿಕೆಟ್ ಬೆಟ್ಟಿಂಗ್‌ಗೆ ಸಂಬಂಧಿಸಿದಂತೆ ಒಟ್ಟು ಮೂರು ಪ್ರಕರಣಗಳು ದಾಖಲಾಗಿವೆ. ಅವುಗಳಲ್ಲಿ ಒಂದು ಪ್ರಕರಣದಲ್ಲಿ ಶಿಕ್ಷೆಯಾಗಿದ್ದು, ಉಳಿದ ಎರಡು ಪ್ರಕರಣಗಳು ತನಿಖೆಯ ಹಂತದಲ್ಲಿವೆ ಎಂದು ಪೊಲೀಸರು ತಿಳಿಸಿದ್ದಾರೆ.ಸಾರ್ವಜನಿಕ ಶಾಂತಿ […]
ನೇಜಾರು: ರಸ್ತೆ ದಾಟುತ್ತಿದ್ದ ವೇಳೆ ಕಾರು ಡಿಕ್ಕಿ ಹೊಡೆದು ಬಾಲಕ ಮೃತ್ಯು

ಉಡುಪಿ: ರಸ್ತೆ ದಾಟುತ್ತಿದ್ದ ವೇಳೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಆರನೇ ತರಗತಿಯ ಬಾಲಕನೋರ್ವ ಮೃತಪಟ್ಟ ದಾರುಣ ಘಟನೆ ನೇಜಾರು ಜ್ಯೋತಿನಗರ ಆರನೇ ಕ್ರಾಸ್ ಸಮೀಪ ನಡೆದಿದೆ.ಹೂಡೆಯ ಸಾಲಿಹಾತ್ ಆಂಗ್ಲ ಮಾಧ್ಯಮ ಶಾಲೆಯ ಆರನೇ ತರಗತಿ ವಿದ್ಯಾರ್ಥಿ ಅಬ್ದುಲ್ ರೆಹಮಾನ್ (12) ಮೃತದುರ್ದೈವಿ. ನೇಜಾರಿನ ಜ್ಯೋತಿ ನಗರ ಆರನೇ ಕ್ರಾಸ್ ಸಮೀಪ ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ಕಾರು ಬಡಿದಿದ್ದು ನಂತರ ಗಂಭೀರವಾಗಿ ಗಾಯಗೊಂಡಿದ್ದ ಬಾಲಕನನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ, ಅಲ್ಲಿ ಪರಿಶೀಲಿಸಿದ ವೈದ್ಯರು […]
ಮಂಗಳೂರು, ನಕಲಿ ಪಾಸ್‌ಪೋರ್ಟ್ ಜಾಲಭೇದನೆ: ಹಲವರ ವಿರುದ್ಧ ಕ್ರಿಮಿನಲ್ ಪ್ರಕರಣ

ಮಂಗಳೂರು: ಬೇರೊಬ್ಬರ ಗುರುತಿನ ದಾಖಲೆಗಳನ್ನು ದುರುಪಯೋಗಪಡಿಸಿಕೊಂಡು ನಕಲಿ ಪಾಸ್‌ಪೋರ್ಟ್ ಸೃಷ್ಟಿಸಿದ ವಂಚನಾ ಜಾಲವನ್ನು ಸಿ.ಎಸ್.ಬಿ ಪೊಲೀಸರು ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಉಳ್ಳಾಲ ನಿವಾಸಿಗಳಾದ ಪ್ರೀತಾ ಡಿ.ಸೋಜಾ, ಪ್ರೇಮ್ ಡಿ.ಸೋಜಾ ಹಾಗೂ ಯಶೋಧ ಕೇಶವ ಸೇರಿದಂತೆ ಹಲವರ ವಿರುದ್ಧ ಗಂಭೀರ ಆರೋಪಗಳಡಿ ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ಪೊಲೀಸರಿಗೆ ಲಭಿಸಿದ ಗೌಪ್ಯ ಮಾಹಿತಿಯಂತೆ, ಯಶೋಧ ಕೇಶವ ಎಂಬ ಮಹಿಳೆಯ ಹೆಸರಿನಲ್ಲಿ ಮತ್ತೊಬ್ಬ ಮಹಿಳೆ ಪಾಸ್‌ಪೋರ್ಟ್ ಪಡೆದು ವಿದೇಶಕ್ಕೆ ಪ್ರಯಾಣಿಸಿದ್ದಾಳೆ ಎಂಬ ಅನುಮಾನ ವ್ಯಕ್ತವಾಗಿತ್ತು. ಈ ಮಾಹಿತಿ ಆಧರಿಸಿ ತನಿಖೆ ಆರಂಭಿಸಿದ […]
“ಬಿಕರ್ನಕಟ್ಟೆಯ ಬಾಲ ಯೇಸುವಿನ ಪುಣ್ಯಕ್ಷೇತ್ರದಲ್ಲಿ ನಾಲ್ಕು ಮಂದಿ ಕಾರ್ಮೆಲೈಟ್ ಗುರುಗಳಿಗೆ ಪವಿತ್ರ ಗುರುದೀಕ್ಷೆ”

ಮಂಗಳೂರಿನ ಬಿಕರ್ನಕಟ್ಟೆಯ ಬಾಲ ಯೇಸುವಿನ ಪುಣ್ಯಕ್ಷೇತ್ರದಲ್ಲಿ 2026ರ ಮೇ 14ರಂದು ನಡೆದ ಭವ್ಯ ಸಮಾರಂಭದಲ್ಲಿ ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಅತೀ ವಂದನೀಯ ಡಾ. ಪೀಟರ್ ಪೌಲ್ ಸಲ್ಡಾನ್ಹಾ ಅವರು ನಾಲ್ವರು ಡಿಸ್ಕಾಲ್ಡ್ ಕಾರ್ಮೆಲೈಟ್ ಡೀಕನ್‌ಗಳಾದ ವಂ. ಆಲ್ವಿನ್ ಡಿಸೋಜಾ, ವಂ. ಲೋಯ್ ಜಾಕ್ಸನ್ ಕ್ರಾಸ್ತಾ, ವಂ. ಎಲ್ಸ್ಟನ್ ಮೊಂತೇರೊ ಮತ್ತು ವಂ.ಹಿಲರಿ ರೊಡ್ರಿಗಸ್ ಅವರಿಗೆ ಪವಿತ್ರ ಗುರುದೀಕ್ಷೆ ನೀಡಿದರು. ಈ ಸಂದರ್ಭದಲ್ಲಿ ಪ್ರವಚನ ನೀಡಿದ ಬಿಷಪ್ ಅವರು, ಗುರುತ್ವವು ಮಾನವಕುಲದ ರಕ್ಷಣೆಗಾಗಿ ತನ್ನನ್ನೇ ಅರ್ಪಿಸಿಕೊಂಡ ದೇವಕುರಿ ಯೇಸುಕ್ರಿಸ್ತರನ್ನು […]
“ಬ್ರಹ್ಮಾವರದ ಎನ್. ಎನ್. ಇನ್ಫ್ರಾಸ್ಟ್ರಕ್ಚರ್ ಡೆವಲಪರ್ಸ್: ಬ್ಲೂಬೆರ್ರಿ ಹಿಲ್ಸ್ ವಸತಿ ಸಮುಚ್ಚಯ ಉದ್ಘಾಟನೆ”.

ಬ್ರಹ್ಮಾವರ: ಇಲ್ಲಿನ ನಿರ್ಮಾಣ ಸಂಸ್ಥೆ ಎನ್. ಎನ್. ಇನ್ಫ್ರಾಸ್ಟ್ರಕ್ಚರ್ ಡೆವಲಪರ್ಸ್ ಅವರಿಂದ ಬ್ರಹ್ಮಾವರದ ಹೃದಯ ಭಾಗದಲ್ಲಿ ನಿರ್ಮಾಣಗೊಂಡ ಬ್ಲೂಬೆರ್ರಿ ಹಿಲ್ಸ್ ವಸತಿ ಸಮುಚ್ಚಯ (ಬ್ಲಾಕ್ ಎ) ಗುರುವಾರ ಉದ್ಘಾಟನೆಗೊಂಡಿತು.ಹೋಲಿ ಫ್ಯಾಮಿಲಿ ಚರ್ಚ್‌ನ ರೆ! ಫಾ। ಜಾನ್ ಫೆರ್ನಾಂಡಿಸ್, ಅವರು ಆಶೀರ್ವಚಿಸಿ, ಕೆಲಸದಲ್ಲಿ ಬದ್ಧತೆ, ದೃಢ ನಿರ್ಧಾರ ಇದ್ದಾಗ ಮಾತ್ರ ಯೋಜನೆ ಪೂರ್ಣಗೊಳ್ಳಲು ಸಾಧ್ಯ. ಸಮಯ ಪರಿಪಾಲನೆ, ಗುಣಮಟ್ಟದಿಂದ ಗ್ರಾಹಕರ ವಿಶ್ವಾಸ ದೊರೆಯುತ್ತದೆ. ಈ ನಿಟ್ಟಿನಲ್ಲಿ ಸಂಸ್ಥೆಯ ನಿಯೋನ್ಸ್ ಡಿ’ಸೋಜಾ ಅವರ ಕಾರ್ಯತತ್ಪರತೆ ಯುವಜನತೆಗೆ ಮಾದರಿಯಾಗಿದೆ. ಸಮುಚ್ಚಯ ನಿರ್ಮಾಣಕ್ಕೆ […]