ಮಂಗಳೂರು: ಮೇ 16ರಂದು ನೇರ ಸಂದರ್ಶನ

ಮಂಗಳೂರು: ನಗರದ ಎಕ್ಸ್‌ಫರ್ಟ್ ಕಾಲೇಜು ಹಾಗೂ ಮಾಂಡೊ ಮೋಟಾರ್ಸ್ ಕಂಪೆನಿಯ ವತಿಯಿಂದ ಮಂಗಳೂರಿನಲ್ಲಿ ಖಾಲಿಯಿರುವ ಫಿಸಿಕ್ಸ್ ಲ್ಯಾಬ್ ಇನ್‌ಸ್ಟ್ರಕ್ಟರ್ ಹಾಗೂ ಫೀಲ್ಡ್ ಸೇಲ್ಸ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ನೇರ ಸಂದರ್ಶನವನ್ನು ಮೇ 16 ರಂದು ಪಡೀಲ್ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಬೆಳಗ್ಗೆ 10ರಿಂದ ಮಧ್ಯಾಹ್ನ 1:30ರವರೆಗೆ ಆಯೋಜಿಸಲಾಗಿದೆ. ಸಂದರ್ಶನದಲ್ಲಿ ಫಿಸಿಕ್ಸ್ ಲ್ಯಾಬ್ ಇನ್‌ಸ್ಟ್ರಕ್ಟರ್ ಹುದ್ದೆಗೆ ಬಿಎಸ್‌ಸಿ (ಫಿಸಿಕ್ಸ್ ಒಂದು ವಿಷಯವಾಗಿ ಅಭ್ಯಸಿಸಿರುವ) ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಭಾಗವಹಿಸಬಹುದು. ಫೀಲ್ಡ್ ಸೇಲ್ಸ್ ಎಕ್ಸಿಕ್ಯೂಟಿವ್ ಹುದ್ದೆಗೆ […]
ಭಾರತೀಯ ಸಿನಿಮಾಗಳು ಧರ್ಮ ಕೇಂದ್ರೀಕೃತವಾಗಿವೆ- ಪಿ.ಎನ್.ರಾಮಚಂದ್ರ

ಉಡುಪಿ: ನಮ್ಮ ಸಿನಿಮಾದ ಭಾಷೆ ನಾಟ್ಯ ಶಾಸ್ತ್ರದ ಭಾಷೆಯಾಗಿದೆ. ತಾರತಮ್ಯ, ಕೊಳ್ಳುತನ, ಪ್ರಚಾರ, ಧರ್ಮ, ಜಾತಿಗಳ ಶ್ರೇಣೀಕರಣದಿಂದಾಗಿ ಭಾರತೀಯ ಸಿನಿಮಾಗಳು ಧರ್ಮ ಕೇಂದ್ರೀಕೃತವಾಗಿವೆ. ಇತ್ತೀಚಿಗೆ ತೆರೆಕಂಡ ಧುರಂದರ ಸಿನಿಮಾವು ಏಕಮುಖವಾದ ಅಂತಹ ಸಿದ್ಧಾಂತದ ರಕ್ತಮಯ ಹುಸಿ ವಾಸ್ತವಿಕತೆಯ ದೃಶ್ಯಾವಳಿ ಹೊಂದಿದೆ. ಈ ಸಿನಿಮಾ ಉಗ್ರ ರಾಷ್ಟ್ರವಾದದ ಸಂಕೇತ ಎಂದು ರಾಷ್ಟ್ರ ಪ್ರಶಸ್ತಿ ವಿಜೇತ ಸಿನೆಮಾ ನಿರ್ದೇಶಕ ಪಿ.ಎನ್.ರಾಮಚಂದ್ರ ಹೇಳಿದ್ದಾರೆ. ರಥಬೀದಿ ಗೆಳೆಯರು ಉಡುಪಿ ವತಿಯಿಂದ ಉಡುಪಿ ಎಂಜಿಎಂ ಕಾಲೇಜಿನ ಧ್ವನ್ಯಾಲೋಕದಲ್ಲಿ ಆಯೋಜಿಸಲಾದ ಕಾರ್ಯಕ್ರಮ ದಲ್ಲಿ ಅವರು ಚಲನಚಿತ್ರಗಳ […]
ಉಡುಪಿ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ವಿವಿಧ ಹುದ್ದೆಗೆ ಅರ್ಜಿ ಆಹ್ವಾನ

ಉಡುಪಿ: ಪ್ರತಿಷ್ಠಿತ ಮಣಿಪಾಲದಲ್ಲಿರುವ ಉಡುಪಿ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ವಿವಿಧ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. Physiology ಆಯಾ ಕ್ಷೇತ್ರದಲ್ಲಿ ಯುಜಿ/ಪಿಗ್ ಹೊಂದಿರುವ ಆಸಕ್ತ ಅಭ್ಯರ್ಥಿಗಳು ತಮ್ಮ ರೆಸ್ಯೂಮ್’ಅನ್ನು [email protected] ಗೆ ಕಳುಹಿಸಬಹುದು. ಮಾಹಿತಿಗಾಗಿ ಸಂಪರ್ಕಿಸಿ: 9611586912
ಮಣಿಪಾಲ: ಭಗ್ನ ಪ್ರೇಮಿಯಿಂದ ಯುವತಿಗೆ ಚೂರಿ ಇರಿತ; ಶಾಂತಿನಗರ ಸಮೀಪದ ಮಹಿಳಾ ಪಿಜಿಯಲ್ಲಿ ಘಟನೆ.

ಉಡುಪಿ: ಭಗ್ನ ಪ್ರೇಮಿಯಿಂದ ಯುವತಿಗೆ ಚೂರಿಯಿಂದ ಇರಿದ ಘಟನೆ ಮಣಿಪಾಲ- ಅಲೆವೂರು ರಸ್ತೆಯ ಶಾಂತಿನಗರ ಸಮೀಪದ ಐಡಿಯಲ್ ಬಿಲ್ಡಿಂಗ್ ನಲ್ಲಿರುವ ಮಹಿಳಾ ಪಿಜಿಯಲ್ಲಿ ನಡೆದಿದೆ.ಅಂಕೋಲ ಮೂಲದ ಯೋಗಿತಾ(23) ಮಾರಣಾಂತಿಕ ಹಲ್ಲೆಗೊಳಗಾದ ಯುವತಿ. ಈಕೆ ಮಣಿಪಾಲ- ಅಲೆವೂರು ರಸ್ತೆಯ ಶಾಂತಿನಗರ ಸಮೀಪದ ಐಡಿಯಲ್ ಬಿಲ್ಡಿಂಗ್ ನಲ್ಲಿರುವ ಮಹಿಳಾ ಪಿಜಿಯಲ್ಲಿ ವಾಸವಾಗಿದ್ದಳು. ಮಂಗಳವಾರ ರಾತ್ರಿ ಆಕೆಗೆ ಚೂರಿ ಇರಿಯಲಾಗಿದೆ. ಯುವತಿಯು ಪ್ರೀತಿ ನಿರಾಕರಿಸಿರುವುದಕ್ಕೆ ಭಗ್ನ ಪ್ರೇಮಿ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.ಗಂಭೀರ ಗಾಯಗೊಂಡಿರುವ ಯುವತಿಯನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಿ, ತೀವ್ರ […]
ಮುಂದಿನ ಎರಡು ದಿನ ರಾಜ್ಯದ ವಿವಿದೆಡೆ ಭಾರೀ ಮಳೆಯ ಮನ್ಸೂಚನೆ, ಕರಾವಳಿಯಲ್ಲೂ ವರುಣನ ತಂಪು!

ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನಗಳ ಕಾಲ ಆಲಿಕಲ್ಲು ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಉತ್ತರ ಒಳನಾಡು ಭಾಗಗಳಲ್ಲಿ ಮೇ 14 ಮತ್ತು 15ರಂದು ವ್ಯಾಪಕ ಮಳೆಯೊಂದಿಗೆ ಆಲಿಕಲ್ಲು ಮಳೆಯಾಗುವ ಸಾಧ್ಯತೆ ಇರುವುದಾಗಿ ಇಲಾಖೆ ತಿಳಿಸಿದೆ. ದಕ್ಷಿಣ ಒಳನಾಡು ಭಾಗಗಳಲ್ಲಿಯೂ ಮೇ 15ರಂದು ಮಳೆಯ ಅಬ್ಬರ ಹೆಚ್ಚಾಗುವ ನಿರೀಕ್ಷೆಯಿದೆ. ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಮಳೆಯಾಗಲಿದ್ದು, ಗಾಳಿಯ ವೇಗ ಗಂಟೆಗೆ 40 ರಿಂದ 50 […]