ಟೊಮೆಟೊ ಬೇಗ ಹಾಳಾಗುತ್ತಿದೆಯೇ? ಹೀಗೆ ಮಾಡಿದರೆ ವಾರಗಟ್ಟಲೇ ಫ್ರೆಶ್ ಆಗಿರುತ್ತದೆ!

ಎಲ್ಲರ ಮನೆಗಳಲ್ಲೂ ಟೊಮ್ಯಾಟೋ ಒಂಥರಾ ಆಪದ್ಭಾಂಧವ ಇದ್ದ ಹಾಗೆ. ಬೇರೆ ಯಾವುದೇ ತರಕಾರಿ ಇಲ್ಲದಿದ್ದರೂ ತೊಂದರೆ ಇಲ್ಲ ಟೊಮ್ಯಾಟೋ ಒಂದಿದ್ದರೆ ದಿಢೀರ್ ಅಡುಗೆ ತಯಾರಿಸಬಹುದು. ಹಾಗಾಗೇ ಪ್ರತಿಯೊಬ್ಬರ ಮನೆಯ ಅಡುಗೆಯಲ್ಲೂ ಟೊಮೆಟೊ ಪ್ರಮುಖ ಸ್ಥಾನ ಪಡೆದಿದೆ. ಸಾಂಬಾರ್, ದಾಲ್, ಕರಿ ಸೇರಿದಂತೆ ಬಹುತೇಕ ಎಲ್ಲಾ ಆಹಾರ ಪದಾರ್ಥಗಳ ರುಚಿಯನ್ನು ಹೆಚ್ಚಿಸುವ ಟೊಮೆಟೊ ಇಲ್ಲದೆ ಅಡುಗೆ ಪೂರ್ಣವಾಗುವುದೇ ಇಲ್ಲ. ಆದರೆ ಗೃಹಿಣಿಯರಿಗೆ ಟೊಮ್ಯಾಟೋ ಕೊಳೆತು ಹೋಗದಂತೆ ವಾರಗಟ್ಟಲೇ ಸಂರಕ್ಷಿಸಿಟ್ಟಿಕೊಳ್ಳುವುದೇ ಒಂದು ದೊಡ್ಡ ತಲೆಬಿಸಿ. ಟೊಮೆಟೊದಲ್ಲಿ ಆರೋಗ್ಯಕ್ಕೆ ಅಗತ್ಯವಾದ ಅನೇಕ […]
ಶ್ರೀಲಂಕಾದಿಂದ ಭಾರತಕ್ಕೆ 11 ಗಂಟೆಗಳ ಕಾಲ ಈಜಿ ದಾಖಲೆ ನಿರ್ಮಿಸಿದ ಬೆಂಗಳೂರಿನ ಐಟಿ ದಂಪತಿ!

ರಾಮೇಶ್ವರಂ: ಶ್ರೀಲಂಕಾದಿಂದ ಭಾರತಕ್ಕೆ ಸುಮಾರು 32 ಕಿಲೋಮೀಟರ್ ದೂರವನ್ನು ಈಜಿ ಬೆಂಗಳೂರು ಮೂಲದ ಐಟಿ ವೃತ್ತಿಪರ ದಂಪತಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಡ್ಯಾನಿಶ್ ಅಬ್ದಿ ಮತ್ತು ವೃಶಾಲಿ ಪ್ರಸಾದೆ ಅವರು ಐತಿಹಾಸಿಕ ರಾಮ ಸೇತು ಮಾರ್ಗದಲ್ಲಿ ‘ಸೈಡ್-ಬೈ-ಸೈಡ್ ಓಪನ್ ವಾಟರ್ ಸ್ವಿಮ್’ ಪೂರ್ಣಗೊಳಿಸಿದ ಮೊದಲ ದಂಪತಿಗಳಾಗಿದ್ದಾರೆ. ಮೇ 7ರಂದು ಈ ಸಾಹಸಿಕ ಈಜು ಪ್ರಾರಂಭಗೊಂಡಿದ್ದು, ಶ್ರೀಲಂಕಾದ ತಲೈಮನ್ನಾರ್ ನಿಂದ ಬೆಳಿಗ್ಗೆ 4:30ಕ್ಕೆ ಆರಂಭಿಸಿದ ದಂಪತಿ, ಮಧ್ಯಾಹ್ನ 3:15ರ ಸುಮಾರಿಗೆ ತಮಿಳುನಾಡಿನ ಧನುಷ್ಕೋಟಿ ತಲುಪಿದರು. ಸುಮಾರು 10 ಗಂಟೆ […]
ವಿದೇಶ ಪ್ರವಾಸ ಮಾಡಬೇಡಿ,ಚಿನ್ನ ಖರೀದಿ ಮಾಡಬೇಡಿ ಎಂದ ಪ್ರಧಾನಿ ಮೋದಿ ಹೇಳಿಕೆ ಬಾಲಿಶತನದ್ದು: ಮಂಜುನಾಥ ಭಂಡಾರಿ ಟೀಕೆ

ಮಂಗಳೂರು: ದೇಶದ ಪ್ರಧಾನಿಯ ಜವಾಬ್ದಾರಿಯುತ ಸ್ಥಾನದಲ್ಲಿರುವ ನರೇಂದ್ರ ಮೋದಿಯವರು ವಿದೇಶಕ್ಕೆ ಪ್ರವಾಸ ಹೋಗಬೇಡಿ, ಚಿನ್ನ ಖರೀದಿಸಬೇಡಿ, ವಾಹನಗಳಲ್ಲಿ ನಿಯಮಿತವಾಗಿ ಓಡಾಡಿ ಎಂದು ಹೇಳಿಕೆ ನೀಡಿರುವುದು ಬಾಲಿಶತನದ್ದು. ಇಂತಹ ಹೇಳಿಕೆಯನ್ನು ಈ ದೇಶದ ಜನತೆ ಯಾವತ್ತೂ ನಿರೀಕ್ಷೆ ಮಾಡಲ್ಲ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಟೀಕಿಸಿದ್ದಾರೆ. ಮೋದಿ ಸರಕಾರದ ವೈಫಲ್ಯ: ದೇಶದಲ್ಲಿ ವಾಣಿಜ್ಯ ಗ್ಯಾಸ್ ಬೆಲೆ ಭಾರೀ ಏರಿಕೆಯಾಗಿದೆ. ಉದ್ಯಮ ವಲಯವೂ ದರ ಏರಿಕೆಯಿಂದ ಕಂಗಾಲಾಗಿದೆ. ರಸಗೊಬ್ಬರ ಕೊರತೆಯ ಮುನ್ಸೂಚನೆ ಸಿಕ್ಕಿದೆ. ಇಂತಹ ಸಂದರ್ಭ […]
“ಎಸ್. ಎಂ.ಎ. ಅಭಿಯಾನಕ್ಕೆ ಮಜೂರು ಆಡಳಿತ ಸಮಿತಿ ಸಾಥ್”

ಆರ್ಥಿಕವಾಗಿ ಹಿಂದುಳಿದಿರುವ ಊರಿನಲ್ಲಿ ಮದರಸಗಳ ಸಹಕಾರ ವಿದ್ಯಾರ್ಥಿಗಳ ವಿದ್ಯಾಭ್ಯಾಸ ಗೋಸ್ಕರ ಸಹಕಾರ ಹಾಗೂ ಇನ್ನಿತರ ಹಲವಾರು ಸಾಮಾಜಿಕ ಚಟುವಟಿಕೆಗಳನ್ನು ನಡೆಸುತ್ತಿರುವಸುನ್ನೀ ಮೇನೇಜ್ಮೆಂಟ್ ಎಸೋಷಿಯೇಶನ್ ಕರ್ನಾಟಕ ರಾಜ್ಯ ಸಮಿತಿ ರಾಜ್ಯಾದ್ಯಕತ ನಡೆಸಿದಮದ್ರಸ ಡೇ ಕಾರ್ಯಕ್ರಮಕ್ಕೆ ಬದ್ರಿಯಾ ಜುಮುಅ ಮಸ್ಜಿದ್ ಮಲ್ಲಾರು – ಮಜೂರು ಆಡಳಿತ ಸಮಿತಿಯು ಸಂಪೂರ್ಣ ಸಹಕಾರ ನೀಡಿತು. “ನಿರ್ಗತಿಕರ, ಆರ್ಥಿಕ ದುರ್ಬಲ ಗೊಂಡಿರುವವರ ಬಗ್ಗೆ ಕಾಳಜಿ ವಹಿಸಿರುವ ಎಸ್, ಎಂ.ಎ. ಯ. ಕಾರ್ಯಚಟುವಟಿಕೆಗಳು ಬಹಳ ಅಭಿನಂದನಾರ್ಹ ವಾಗಿದೆ.ಇಂಥಹ ಚಟುವಟಿಕೆಗಳಿಗೆ ನಮ್ಮ ಸಂಪೂರ್ಣ ಬೆಂಬಲವಿದೆ. ಇದನ್ನು ಎಲ್ಲರೂ […]
ಕಾರ್ಕಳ: ಬಾವಿಯಲ್ಲಿ ಸಿಲುಕಿದ್ದ ಮೂವರು ಕಾರ್ಮಿಕರ ರಕ್ಷಣೆ

ಉಡುಪಿ: ಬಾವಿಗೆ ಇಳಿದು ಮಣ್ಣು ತೆಗೆಯುತ್ತಿದ್ದ ವೇಳೆ ಸಂಕಷ್ಟಕ್ಕೆ ಸಿಲುಕಿದ್ದ ಮೂವರು ಕಾರ್ಮಿಕರನ್ನು ಕಾರ್ಕಳ ಅಗ್ನಿಶಾಮಕ ಇಲಾಖೆಯ ಸಿಬ್ಬಂದಿ ಸಾಹಸಮಯ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ. ಕಾರ್ಕಳ ತಾಲೂಕಿನ ಕುಕ್ಕುಂದೂರು ಸಮೀಪದ ಅಶ್ವಥಪುರ ಎಂಬಲ್ಲಿ ಈ ಘಟನೆ ನಡೆದಿದೆ. ರಾಜೇಶ್ (42), ಪವನ್ (29) ಹಾಗೂ ಗೋಪಾಲ್ ನಾಯ್ಕ (52) ಬಾವಿಯ ಮಣ್ಣು ತೆಗೆಯುವ ಕೆಲಸಕ್ಕಾಗಿ ಬಾವಿಗಿಳಿದಿದ್ದರು. ಈ ವೇಳೆ ಮೇಲಕ್ಕೆ ಬರುತ್ತಿದ್ದ ರಾಜೇಶ್ ಅವರು ಆಯತಪ್ಪಿ ಬಿದ್ದು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಅವರನ್ನು ರಕ್ಷಿಸಲು ಮುಂದಾದ ಪವನ್ ಹಾಗೂ […]