ಆರ್ಥಿಕವಾಗಿ ಹಿಂದುಳಿದಿರುವ ಊರಿನಲ್ಲಿ ಮದರಸಗಳ ಸಹಕಾರ ವಿದ್ಯಾರ್ಥಿಗಳ ವಿದ್ಯಾಭ್ಯಾಸ ಗೋಸ್ಕರ ಸಹಕಾರ ಹಾಗೂ ಇನ್ನಿತರ ಹಲವಾರು ಸಾಮಾಜಿಕ ಚಟುವಟಿಕೆಗಳನ್ನು ನಡೆಸುತ್ತಿರುವ
ಸುನ್ನೀ ಮೇನೇಜ್ಮೆಂಟ್ ಎಸೋಷಿಯೇಶನ್ ಕರ್ನಾಟಕ ರಾಜ್ಯ ಸಮಿತಿ ರಾಜ್ಯಾದ್ಯಕತ ನಡೆಸಿದ
ಮದ್ರಸ ಡೇ ಕಾರ್ಯಕ್ರಮಕ್ಕೆ ಬದ್ರಿಯಾ ಜುಮುಅ ಮಸ್ಜಿದ್ ಮಲ್ಲಾರು – ಮಜೂರು ಆಡಳಿತ ಸಮಿತಿಯು ಸಂಪೂರ್ಣ ಸಹಕಾರ ನೀಡಿತು. “ನಿರ್ಗತಿಕರ, ಆರ್ಥಿಕ ದುರ್ಬಲ ಗೊಂಡಿರುವವರ ಬಗ್ಗೆ ಕಾಳಜಿ ವಹಿಸಿರುವ ಎಸ್, ಎಂ.ಎ. ಯ. ಕಾರ್ಯಚಟುವಟಿಕೆಗಳು ಬಹಳ ಅಭಿನಂದನಾರ್ಹ ವಾಗಿದೆ.
ಇಂಥಹ ಚಟುವಟಿಕೆಗಳಿಗೆ ನಮ್ಮ ಸಂಪೂರ್ಣ ಬೆಂಬಲವಿದೆ. ಇದನ್ನು ಎಲ್ಲರೂ ಸಂಪೂರ್ಣವಾಗಿ ಬೆಂಬಲಿಸುವ ಅನಿವಾರ್ಯತೆ ಇದೆ ಎಂದು ಮಸ್ಜಿದ್ ಆಡಳಿತ ಸಮಿತಿ ಅಧ್ಯಕ್ಷರಾದ ಡಾ.ಫಾರೂಕ್ ಚಂದ್ರನಗರ ಇವರು ಕಾರ್ಯಸೂಚಿಯನ್ನು ಬಿಡುಗಡೆಗೊಳಿತ್ತಾ ಹೇಳಿದರು
ಈ ಸಂದರ್ಭದಲ್ಲಿ ಮಸ್ಜಿದ್ ಕತೀಬರಾದ ಅಬ್ದುಲ್ ರಶೀದ್ ಸಖಾಫಿ ಅಲ್-ಖಾಮಿಲ್
ಮಸ್ಜಿದ್ ಉಪಾಧ್ಯಕ್ಷರಾದ ಹಸನಬ್ಬ ಮಜೂರು ಪ್ರದಾನ ಕಾರ್ಯದರ್ಶಿ ಅಶ್ರಫ್ ಮೂಸ ಕಾರ್ಯದರ್ಶಿಗಳಾದ ಅಶ್ರಫ್ ಕರಂದಾಡಿ ರಜಬ್ ಕರಂದಾಡಿ ಕೋಶಾಧಿಕಾರಿ ಪಿ.ಎಂ ಇಬ್ರಾಹಿಂ ಪಾದೂರು
ಸದಸ್ಯರಾದ ಅಬ್ದುಲ್ಲ ಚಂದ್ರನಗರ ,ಹಸನಬ್ಬ ಗುಡ್ಡೆಕೇರಿ ,ನೆಹಮತ್ ಅಚ್ಚಲ್, ಅಬ್ದುಲ್ ರೆಹಮಾನ್ ಕೊಂಬಗುಡ್ಡೆ, ಹಸನಬ್ಬ ಪಕೀರಣಕಟ್ಟೆ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

















