ಉಡುಪಿ: 2-3 ದಿನ ಮನೆಗೆ ಬೀಗ ಹಾಕಿ ಹೋಗುತ್ತಿದ್ದೀರಾ? ಪೊಲೀಸರಿಗೆ ಮಾಹಿತಿ ನೀಡಿ ಹೋಗಿ- ಎಸ್ಪಿ ಹರಿರಾಂ ಶಂಕರ್

ಉಡುಪಿ: ಜಿಲ್ಲೆಯ ಸಾರ್ವಜನಿಕರು ಕೆಲಸದ ನಿಮಿತ್ತ ಅಥವಾ ಪ್ರವಾಸಕ್ಕಾಗಿ ತಮ್ಮ ಮನೆಯನ್ನು ಲಾಕ್ ಮಾಡಿ ಹೊರಗೆ ಹೋದಾಗ ಪೊಲೀಸರು ನಿಮ್ಮ ಮನೆಗೆ ಸುರಕ್ಷಿತೆ ಒದಗಿಸಲಿದ್ದಾರೆ. ಅಂತಹ ಮನೆಗಳ ಮೇಲೆ ನಿಗಾ ಇಡಲು ಉಡುಪಿ ಜಿಲ್ಲಾ ಪೊಲೀಸ್ ವತಿಯಿಂದ ಲಾಕ್ಡ್ ಹೌಸ್ ಬೀಟ್ ಸಿಸ್ಟಮ್’ (LHBS) ಎನ್ನುವ ವಿನೂತನ ಕಾರ್ಯಕ್ರಮವನ್ನು ಆರಂಭಿಸಿದೆ ಅಂತ ಎಸ್ಪಿ ಹರಿರಾಂ ಶಂಕರ್ ಹೇಳಿದ್ದಾರೆ. ನೀವೇನು ಮಾಡಬೇಕು? ಲಾಕ್ ಆಗಿರುವ ಮನೆಗಳ ಮೇಲೆ ಪೊಲೀಸರು ವಿಶೇಷ ನಿಗಾ ಇರಿಸುತ್ತಾರೆ. ಸದರಿ ಮನೆ ಇರುವ ಪೊಲೀಸ್ […]
ಸಂತೆಕಟ್ಟೆ: ಇಂದಿನಿಂದ ಹಲಸು ಮತ್ತು ಹಣ್ಣು ಮೇಳ

ಉಡುಪಿ: ಸಂತೆಕಟ್ಟೆ ಕೆಮ್ಮಣ್ಣು ಲಿಟ್ಲ್ ಫ್ಲವರ್ ಹಾಲ್ ನಲ್ಲಿ ಮೇ 8ರಿಂದ 10ರ ವರೆಗೆ ಹಲಸು ಮತ್ತು ಹಣ್ಣು ಮೇಳವನ್ನು ಆಯೋಜಿಸಲಾಗಿದೆ ಎಂದು ಮೇಳದ ಆಯೋಜಕ ಮುಹಮ್ಮದ್ ಮುಕ್ತಾರ್ ಹುಸೇನ್ ತಿಳಿಸಿದರು. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಚಂದ್ರ ಹಲಸು, ಕೇಸರ್ ಹಲಸು, ಏಕದಶಿ ಹಾಗೂ ರುದ್ರಾಕ್ಷಿ ಈ ನಾಲ್ಕು ತಳಿಯ ಹಲಸು ಈ ಬಾರಿ ಮೇಳದ ಪ್ರಮುಖ ಆಕರ್ಷಣೆಯಾಗಿದೆ. ಹಲಸಿನ ಹಣ್ಣನ್ನು ಆಂಧ್ರಪ್ರದೇಶದಿಂದ ತರಿಸಲಾಗಿದೆ. ಇದರ ಜೊತೆಗೆ ಹಲಸಿನ ಸಂಡಿಗೆ, ಹಪ್ಪಳ, ದೋಸೆ, […]
ಪ್ಲವ ಫೌಂಡೇಶನ್‌ನಿಂದ 100 ಪೊಲೀಸ್ ಸಿಬ್ಬಂದಿಗೆ ಜೀವ ಉಳಿಸುವ ಸಿಪಿಆರ್ ತರಬೇತಿ

ಉಡುಪಿ: ಪ್ಲವ ಫೌಂಡೇಶನ್ ಮತ್ತು ಅದರ ಕಾರ್ಯನಿರ್ವಾಹಕ ನಿರ್ದೇಶಕಿ ಶ್ರೀಮತಿ ರಶ್ಮಿ ಸಾಮಂತ್ ಅವರು ಇಂದು ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿಗೆ ಸಿಪಿಆರ್ ತರಬೇತಿ ಕಾರ್ಯಕ್ರಮವನ್ನು ನಡೆಸಿದರು. ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ತಜ್ಞರು ಮನುಷ್ಯಾಕೃತಿಗಳು ಮತ್ತು ಅಣಕು ತುರ್ತು ಸನ್ನಿವೇಶಗಳ ಮೂಲಕ 100 ಪೊಲೀಸರಿಗೆ ಪ್ರಾಯೋಗಿಕ ಸಿಪಿಆರ್ ತರಬೇತಿ ನೀಡಿದರು. ಹೃದಯ ಸ್ತಂಭನದಂತಹ ತುರ್ತು ಸಂದರ್ಭಗಳಲ್ಲಿ ಅನುಸರಿಸಬೇಕಾದ ಕ್ರಮಗಳನ್ನು ತಜ್ಞರು ವಿವರಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ರಶ್ಮಿ ಸಾಮಂತ್, ಪ್ರತಿ ಭಾರತೀಯನಿಗೂ ಜೀವ ಉಳಿಸುವ ಕೌಶಲ್ಯಗಳನ್ನು ಕಲಿಸುವ […]
ಉಡುಪಿ: ಗ್ಯಾಸ್ ದರ ಏರಿಕೆ ವಿರೋಧಿಸಿ ಜಿಲ್ಲಾ ಯುವ ಕಾಂಗ್ರೆಸ್ ನಿಂದ ಪ್ರತಿಭಟನೆ: ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ

ಉಡುಪಿ: ವಾಣಿಜ್ಯ ಗ್ಯಾಸ್ ದರ ತೀವ್ರ ಏರಿಕೆ ವಿರುದ್ಧ ಇಂದು ಉಡುಪಿಯಲ್ಲಿ ಪ್ರತಿಭಟನೆ ನಡೆಯಿತು. ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯಿಂದ ನಗರದ ಬ್ರಹ್ಮಗಿರಿ ಸರ್ಕಲ್ ನಲ್ಲಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಕಳೆದ ಮೂರು ತಿಂಗಳಲ್ಲಿ ಮೂರು ಬಾರಿ ವಾಣಿಜ್ಯ ಗ್ಯಾಸ್ ಬೆಲೆ ಏರಿಸಲಾಗಿದೆ. ಈ ಬಾರಿ 993 ರೂ.ಏರಿಸಿದ್ದು ಸಾರ್ವಕಾಲಿಕ ದಾಖಲೆಯಾಗಿದೆ. ಯುದ್ಧದ ನೆಪ ಹೇಳಿ ಈ ಮಟ್ಟದಲ್ಲಿ ಬೆಲೆ ಏರಿಸುವ ಮೂಲಕ ಕೇಂದ್ರ ಸರಕಾರ ಹೊಟೇಲ್ ಉದ್ಯಮಕ್ಕೆ ಭಾರೀ ಹೊಡೆತ ನೀಡಿದೆ ಎಂದು ಮುಖಂಡರು […]
ನೀವಿನ್ನು ಮನೆಗೆ ಬೀಗ ಹಾಕಿ ಹಲವು ದಿನಗಳ ಕಾಲ ಹೊರಹೋಗಬೇಕಾದರೆ ಚಿಂತಿಸಬೇಕಿಲ್ಲ: ಇಲ್ಲಿದೆ ಒಂದು ಪ್ಲಾನ್

ಉಡುಪಿ: ಇಲ್ಲಿನ ಜಿಲ್ಲಾ ಪೊಲೀಸರು ಬೀಗ ಹಾಕಿದ ಮನೆಗಳ ಸುರಕ್ಷತೆಗೆ “ಲಾಕ್ಡ್ ಹೌಸ್ ಬೀಟ್ ಸಿಸ್ಟಮ್” (LHBS) ಎಂಬ ವಿನೂತನ ಯೋಜನೆ ಆರಂಭಿಸಿದ್ದಾರೆ. ಕೆಲಸ, ಪ್ರವಾಸ ಅಥವಾ ಇತರ ಕಾರಣಗಳಿಂದ ಮನೆಗೆ ಬೀಗ ಹಾಕಿ ಹೊರಡುವ ನಿವಾಸಿಗಳ ಮನೆಗಳ ಮೇಲೆ ಪೊಲೀಸರು ವಿಶೇಷ ನಿಗಾ ಇಡಲಿದ್ದಾರೆ. ಸಂಬಂಧಪಟ್ಟ ಪೊಲೀಸ್ ಠಾಣೆಯ ಬೀಟ್ ಸಿಬ್ಬಂದಿ ಹಗಲು ಹಾಗೂ ರಾತ್ರಿ ವೇಳೆ ಮನೆಗಳಿಗೆ ಭೇಟಿ ನೀಡಿ ಭದ್ರತೆ ಪರಿಶೀಲಿಸಲಿದ್ದಾರೆ. ಪ್ರಯಾಣಕ್ಕೆ ತೆರಳುವವರು ಜಿಲ್ಲಾ ನಿಯಂತ್ರಣ ಕೊಠಡಿಯ ಸಹಾಯವಾಣಿ ಸಂಖ್ಯೆ 0820-2526709 […]