ಮಂಗಳೂರು: ಟೈಮಿಂಗ್ ವಿವಾದ – ಖಾಸಗಿ ಬಸ್ ಸಿಬ್ಬಂದಿಗಳ ನಡುವೆ ಹೊಡೆದಾಟ

ಮಂಗಳೂರು: ಬಜಪೆ ಬಸ್ ನಿಲ್ದಾಣದಲ್ಲಿ ಬಸ್ ಟೈಮಿಂಗ್ ವಿಚಾರವಾಗಿ ಖಾಸಗಿ ಬಸ್ಸಿನ ಚಾಲಕ ಹಾಗೂ ನಿರ್ವಾಹಕರ ನಡುವೆ ಹೊಡೆದಾಟ ನಡೆದ ಘಟನೆ ವರದಿಯಾಗಿದೆ. ಖಾಸಗಿ ಬಸ್ಸಿನ ಚಾಲಕ ಶ್ರೀನಿವಾಸ ಹಾಗೂ ಮತ್ತೊಂದು ಬಸ್ಸಿನ ನಿರ್ವಾಹಕ ಸಂತೋಷ್ ಶೆಟ್ಟಿ ನಡುವೆ ಈ ಗಲಾಟೆ ಸಂಭವಿಸಿದೆ ಎಂದು ತಿಳಿದು ಬಂದಿದೆ. ಗಸ್ತು ಕರ್ತವ್ಯದಲ್ಲಿದ್ದ ಪೊಲೀಸರು ಸ್ಥಳಕ್ಕೆ ಆಗಮಿಸಿದಾಗಲೇ, ಪೊಲೀಸರ ಸಮ್ಮುಖದಲ್ಲೇ ಇಬ್ಬರೂ ಪರಸ್ಪರ ಅವಾಚ್ಯ ಶಬ್ದಗಳಿಂದ ಬೈದು ಹೊಡೆದಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, […]
ಮೂಡ್ಲಕಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ (MIT) ‘ಸಾವಿಷ್ಕಾರ್ 2026’ ಸಾಂಸ್ಕೃತಿಕ ಉತ್ಸವ

ಕುಂದಾಪುರ: ಮೂಡ್ಲಕಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ (MIT), ‘ಸಾವಿಷ್ಕಾರ್ 2026’ ಎಂಬ ಭವ್ಯ ರಾಷ್ಟ್ರೀಯ ಮಟ್ಟದ ಅಂತರಕಾಲೇಜು ತಾಂತ್ರಿಕ ಮತ್ತು ಸಾಂಸ್ಕೃತಿಕ ಉತ್ಸವವು ಯಶಸ್ವಿಯಾಗಿ ಜರುಗಿತು. ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ “ಬ್ಯಾಂಡ್ ಸ್ಟ್ರಿಂಗ್ಸ್” (Band Strings) ತಂಡದ ಸಂಗೀತ ರಸಮಂಜರಿ ಕಾರ್ಯಕ್ರಮವು ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು. ಈ ಸಂಗೀತ ಸಂಜೆಯಲ್ಲಿ ಪ್ರಸಿದ್ಧ ಗಾಯಕರಾದ ಜಸ್ ಕರಣ್ ಸಿಂಗ್, ಸಂದೇಶ್, ಪಲ್ಲವಿ, ರಾಜಗೋಪಾಲ್, ಗಣೇಶ್ ಕಾರಂತ್ ಮತ್ತು ಶಮಾ ಅವರು ತಮ್ಮ ಸುಮಧುರ ಧ್ವನಿಯ ಮೂಲಕ ಕಾರ್ಯಕ್ರಮಕ್ಕೆ ಕಳೆ […]
“ಉಡುಪಿಯಲ್ಲಿ ವೈದ್ಯ ಸಾಹಿತ್ಯ ಸಮ್ಮೇಳನ”

ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿ ಶಾಖೆಯಿಂದ ತಾರೀಕು 3 -5 -2026 ರವಿವಾರ ಉಡುಪಿಯ ಐಎಂಎ ಭವನದಲ್ಲಿ ಉಡುಪಿ ಕುಂದಾಪುರ ಹಾಗೂ ಕಾರ್ಕಳ ತಾಲೂಕನ್ನು ಒಳಗೊಂಡ ಐಎಂಎ ಸದಸ್ಯ ಸಾಹಿತಿಗಳನ್ನು ಒಗ್ಗೂಡಿಸಿಕೊಂಡು ಉಡುಪಿ ಜಿಲ್ಲಾ ವೈದ್ಯ ಸಾಹಿತ್ಯ ಸಮ್ಮೇಳನವು ಜರಗಿತು. ಅಪರಾಹ್ನ ಮೂರುಗಂಟೆಗೆ ಚಹಾದೊಂದಿಗೆ ಸಾಹಿತ್ಯಿಕ ಹರಟೆ ಕಾರ್ಯಕ್ರಮದೊಂದಿಗೆ ಆರಂಭವಾದ ಸಮ್ಮೇಳನದಲ್ಲಿ ಮೊತ್ತ ಮೊದಲಿಗೆ ಉಡುಪಿಯ ವೈದ್ಯ ಸಾಹಿತಿಗಳೇ ಬರೆದು ಪ್ರಕಟಿಸಿರುವ 60ಕ್ಕೂ ಹೆಚ್ಚು ಪುಸ್ತಕಗಳ ಪ್ರದರ್ಶನವನ್ನು ಉದ್ಘಾಟಿಸಲಾಯಿತು. ಇದರ ಉಸ್ತುವಾರಿಯನ್ನು ಉಡುಪಿಯ ಹಿರಿಯ ಮೂತ್ರರೋಗ […]
“ಟಿಎಂಸಿ ಅಟ್ಟಹಾಸಕ್ಕೆ ಬ್ರೇಕ್ — ಬಂಗಾಳದಲ್ಲಿ ಬಿಜೆಪಿ ಯುಗಾರಂಭ – ಶ್ರೀನಿಧಿ ಹೆಗ್ಡೆ”.

ಉಡುಪಿ: ಪ್ರಧಾನಿ ನರೇಂದ್ರ ಮೋದಿಯವರ ಅಭಿವೃದ್ಧಿಯ ಆಡಳಿತಕ್ಕಾಗಿ ಹಾಗೂ ದೇಶದ ಸುಭದ್ರತೆಗಾಗಿ ಜನರು ಬಿಜೆಪಿಯನ್ನು ಗೆಲ್ಲಿಸಿದ್ದಾರೆ. ಬಿಜೆಪಿ ಸಂಘಟನಾ ಶಕ್ತಿಗೆ ಈ ಫಲಿತಾಂಶ ಹೊಸ ಹುಮ್ಮಸ್ಸು ನೀಡಲಿದೆ ಹಾಗೂ ಈ ಚುನಾವಣಾ ಫಲಿತಾಂಶದಿಂದ ದೇಶದಲ್ಲಿ ದೇಶ ದ್ರೋಹ ಶಕ್ತಿ ಕ್ಷೀಣಿಸುತ್ತಿರುವ ಲಕ್ಷಣ ಕಂಡುಬಂದಿದೆ ಎಂದು ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಶ್ರೀನಿಧಿ ಹೆಗ್ಡೆ ತಿಳಿಸಿದ್ದಾರೆ. ರಾಜಕೀಯ ಹಿಂಸಾಚಾರ, ಓಲೈಕೆ ರಾಜಕಾರಣ, ಅಕ್ರಮ ವಲಸಿಗರ ಪುಂಡಾಟ ಮೊದಲಾದವುಗಳಿಂದ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಅವಿಚ್ಛಿನ್ನ ಸಂಘಟನಾ ಶಕ್ತಿ, ಗೆಲ್ಲಲೇಬೇಕೆಂಬ […]
ಕರಾವಳಿಯ ನಿರ್ದಿಗಂತದ ಮಕ್ಕಳ ಬೇಸಿಗೆ ಶಿಬಿರ ‘ಕಾವು ಗೂಡು’ ಸಮಾರೋಪ: ಮಕ್ಕಳಿಗೆ ಬೇಕಾದ ಪರಿಸರ ಸೃಷ್ಠಿದರೆ ಪ್ರತಿಭೆ ಅರಳಲು ಸಾಧ್ಯ- ಪ್ರಕಾಶ್ ರಾಜ್

ಉಡುಪಿ: ಇಂದಿನ ಪ್ರಪಂಚದಲ್ಲಿ ಮರ, ಬೀಜದ ಬಗ್ಗೆ ಮಾತ್ರ ಯೋಚನೆ ಮಾಡುತ್ತಾರೆ. ಆದರೆ ಭೂಮಿ ಬಗ್ಗೆ ಯಾರು ಮಾತನಾಡುತ್ತಿಲ್ಲ. ಪ್ರತಿಯೊಂದು ಬೀಜದಲ್ಲೂ ಮರವಾಗುವ ಶಕ್ತಿ ಹಾಗೂ ಗುಣ ಇದೆ. ಅದಕ್ಕೆ ಬೇಕಾದ ಭೂಮಿ ಸಿದ್ಧಪಡಿಸಬೇಕು. ಆಗ ಅದು ಮರವಾಗಿ ಬೆಳೆಯುತ್ತದೆ. ಅದೇ ರೀತಿ ಹಿರಿಯರಾದ ನಾವು ಮಕ್ಕಳಿಗೆ ಬೇಕಾದ ಉತ್ತಮ ಪರಿಸರವನ್ನು ಸೃಷ್ಠಿ ಮಾಡಬೇಕಾಗಿದೆ. ಆಗ ಮಾತ್ರ ಅವರಲ್ಲಿರುವ ಪ್ರತಿಭೆಯನ್ನು ಗುರುತಿಸಲು ಸಾಧ್ಯವಾಗುತ್ತದೆ ಎಂದು ಹಿರಿಯ ನಟ ಪ್ರಕಾಶ್ ರಾಜ್ ಹೇಳಿದ್ದಾರೆ.ಕರಾವಳಿಯ ನಿರ್ದಿಗಂತದ ವತಿಯಿಂದ ಉಡುಪಿ ಬೆಳ್ಳಂಪಳ್ಳಿಯ […]