ಕಾರ್ಕಳದಲ್ಲಿ ರಾಜಾಪುರ ಸಾರಸ್ವತ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ “ಸಹಕಾರ ಸಿಂಧೂರ” ವಾಣಿಜ್ಯ ಸಂಕೀರ್ಣ ಅದ್ದೂರಿ ಲೋಕಾರ್ಪಣೆ, ಸೊಸೈಟಿಯ 30ನೇ ವರ್ಷದ ಸಂಭ್ರಮಾಚರಣೆ

ಕಾರ್ಕಳ: ರಾಜಾಪುರ ಸಾರಸ್ವತ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ., ಕಾರ್ಕಳದ ವತಿಯಿಂದ ಜೋಡುರಸ್ತೆಯಲ್ಲಿ ನೂತನವಾಗಿ ನಿರ್ಮಾಣಗೊಂಡ “ಸಹಕಾರ ಸಿಂಧೂರ” ವಾಣಿಜ್ಯ ಸಂಕೀರ್ಣದ ಲೋಕಾರ್ಪಣೆ ಹಾಗೂ ಸೊಸೈಟಿಯ 30ನೇ ವರ್ಷದ ಸಂಭ್ರಮ ಕಾರ್ಯಕ್ರಮ ಭಾನುವಾರ ಅದ್ದೂರಿಯಾಗಿ ನಡೆಯಿತು. ಗೋವಾದ ಕೈವಲ್ಯ ಮಠದ ಶಿವಾನಂದ ಸರಸ್ವತಿ ಸ್ವಾಮೀಜಿ ಕಟ್ಟಡವನ್ನು ಉದ್ಘಾಟಿಸಿ ಆಶೀರ್ವಚನ ನೀಡಿ, ರಾಜಾಪುರ ಸಮಾಜಕ್ಕೆ ಇದು ಹೆಮ್ಮೆಯ ಕ್ಷಣವಾಗಿದ್ದು, ಎಲ್ಲರೂ ಒಂದಾಗಿ ಕೈಜೋಡಿಸಿರುವುದರಿಂದ ಈ ಭವ್ಯ ಕಟ್ಟಡ ನಿರ್ಮಾಣ ಸಾಧ್ಯವಾಗಿದೆ ಎಂದರು. ಸಹಕಾರಿ ತತ್ವವೇ ಸಮಾಜದ ಬಲವಾಗಿದ್ದು, ಸೇವಾಭಾವದೊಂದಿಗೆ […]

ಕೊಡವೂರು ಶಂಕರನಾರಾಯಣ ದೇವಸ್ಥಾನ: ಮಹಾರುದ್ರಯಾಗದ ಆಮಂತ್ರಣ ಪತ್ರಿಕೆ ಬಿಡುಗಡೆ

ಉಡುಪಿ: ಕೊಡವೂರು ಶಂಕರನಾರಾಯಣ ದೇವಸ್ಥಾನದಲ್ಲಿ ಲೋಕ ಕಲ್ಯಾಣಾರ್ಥ, ನಾಡಿನ ಜನರ ಸುಭೀಕ್ಷೆಗಾಗಿ ಪ್ರಸಾದ್‌ರಾಜ್‌ ಕಾಂಚನ್‌ ನೇತೃತ್ವದಲ್ಲಿ ಮೇ 14ರಿಂದ 19ರವರೆಗೆ ನಡೆಯಲಿರುವ ಮಹಾ ರುದ್ರಯಾಗದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ಭಾನುವಾರ ಕೊಡವೂರು ಶಂಕರನಾರಯಾಣ ದೇಗುಲದ​ ವಸಂತ ಮಂಟಪದ ನಡೆಯಿತು.ಆಮಂತ್ರಣ ಪತ್ರಿಕೆಯನ್ನು ​ಉದ್ಯಮಿ ಸಾಧು ಸಾಲ್ಯಾನ್‌ ಬಿಡುಗಡೆಗೊಳಿಸಿ ಶುಭಹಾರೈಸಿದರು.​ ಮಹಾರುದ್ರಯಾಗ ಸಮಿತಿಯ ಕಾರ್ಯಾಧ್ಯಕ್ಷ ಪ್ರಸಾದ್‌ರಾಜ್‌ ಕಾಂಚನ್‌ ಮಾತನಾಡಿ, ಮಹಾ ರುದ್ರಯಾಗವು ನಡೆಯುವುದು ಅತ್ಯಂತ ವಿರಳ, ಈ ರುದ್ರಯಾಗದ ಜತೆಗೆ ಬಡಜನರಿಗೆ ಆರೋಗ್ಯ ಸೇವೆ ಮತ್ತು ಉದ್ಯೋಗವನ್ನು ಕಲ್ಪಿಸುವ […]

ಜಗತ್ತನ್ನೇ ಬೆಚ್ಚಿಬೀಳಿಸುತ್ತಿದೆ “ಮಿಥೋಸ್ ಎಐ”! ಅಂಥದ್ದೇನಿದೆ ಇದರಲ್ಲಿ?

ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ ಹೊಸ ತಿರುವು ತಂದಿರುವ ಆಂಥ್ರೋಪಿಕ್ ಕಂಪನಿಯ ‘ಮಿಥೋಸ್’ ಎಐ ಮಾಡೆಲ್ ಇದೀಗ ಜಾಗತಿಕ ಮಟ್ಟದಲ್ಲಿ ಆತಂಕ ಹುಟ್ಟಿಸಿದೆ. ಸಾಫ್ಟ್‌ವೇರ್ ದೋಷಗಳನ್ನು ಪತ್ತೆಹಚ್ಚುವುದರ ಜೊತೆಗೆ ಅವನ್ನು ಬಳಸಿಕೊಂಡೇ ಸ್ವಯಂಚಾಲಿತ ಸೈಬರ್ ದಾಳಿಗಳನ್ನು ನಡೆಸುವ ಸಾಮರ್ಥ್ಯ ಇದಕ್ಕಿದೆ ಎಂಬ ವರದಿಗಳು ತಲೆದೋರಿವೆ. ಏನಿದು ‘ಮಿಥೋಸ್’ ಎಐ? ‘ಮಿಥೋಸ್’ ಎನ್ನುವುದು ಆಂಥ್ರೋಪಿಕ್ ಸಂಸ್ಥೆಯ ಕ್ಲಾಡ್ ಎಐ ಸರಣಿಗೆ ಸೇರಿದ ಅತ್ಯಾಧುನಿಕ ಮಾಡೆಲ್. ಸಾಮಾನ್ಯ ಎಐ ಮಾದರಿಗಳಂತೆ ಕೇವಲ ಪ್ರಶ್ನೆಗಳಿಗೆ ಉತ್ತರ ನೀಡುವುದಷ್ಟೇ ಅಲ್ಲ, ಸಂಕೀರ್ಣ ಕೋಡಿಂಗ್ […]

ನೀವು ಬುಕ್ ಮಾಡಿದ್ದ ಟ್ರೈನ್ ಮಿಸ್ ಆದ್ರೆ ಹೀಗೂ ಮಾಡ್ಬೋದು!

ಪ್ರಯಾಣದ ಗಡಿಬಿಡಿಯಲ್ಲಿ ಹಲವರು ಎದುರಿಸುವ ಸಾಮಾನ್ಯ ಸಮಸ್ಯೆ ಎಂದರೆ ಟ್ರೈನ್ ಮಿಸ್ ಆಗುವುದು. ಆದರೆ ಇಂತಹ ಸಂದರ್ಭದಲ್ಲಿ ಕೈಯಲ್ಲಿರುವ ಟಿಕೆಟ್‌ನೊಂದಿಗೆ ಮತ್ತೊಂದು ರೈಲಿನಲ್ಲಿ ಪ್ರಯಾಣಿಸಬಹುದೇ ಎಂಬ ಪ್ರಶ್ನೆ ಬಹುತೇಕ ಜನರಲ್ಲಿ ಮೂಡುತ್ತದೆ. ಈ ಬಗ್ಗೆ ಭಾರತೀಯ ರೈಲ್ವೆ ನಿಯಮಗಳು ಸ್ಪಷ್ಟ ಸೂಚನೆ ನೀಡಿವೆ. ರಿಸರ್ವೇಷನ್ ಟಿಕೆಟ್ ಇದ್ದರೆ ಏನು? ಕನ್ಫರ್ಮ್ ರಿಸರ್ವೇಷನ್ ಟಿಕೆಟ್ ಹೊಂದಿದ್ದರೆ, ನೀವು ಟ್ರೈನ್ ಮಿಸ್ ಮಾಡಿದ ಬಳಿಕ ಅದೇ ಟಿಕೆಟ್ ಮೂಲಕ ಬೇರೆ ರೈಲಿನಲ್ಲಿ ಪ್ರಯಾಣಿಸಲು ಅವಕಾಶ ಇರುವುದಿಲ್ಲ. ಹೀಗೆ ಪ್ರಯಾಣಿಸಿದರೆ ಟಿಟಿಇ […]

ಶೃಂಗೇರಿ ವಿಧಾನಸಭಾ ಕ್ಷೇತ್ರದತ್ತ ಮತದಾರರ ಚಿತ್ತ, ಅಂಚೆ ಮತಗಳ ಮರುಎಣಿಕೆ, ಕಾದಿದೆಯಾ ಟ್ವಿಸ್ಟ್?

ಶೃಂಗೇರಿ: ಹೈಕೋರ್ಟ್ ನಿರ್ದೇಶನದಂತೆ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರುಎಣಿಕೆ ಕಾರ್ಯ ಮೇ 2ರಂದು ನಡೆಯಲಿದೆ. ಐಡಿಎಸ್‌ಜಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮರುಎಣಿಕೆಗೆ ಅಗತ್ಯವಿರುವ ಎಲ್ಲಾ ವ್ಯವಸ್ಥೆಯನ್ನು ಜಿಲ್ಲಾಡಳಿತ ಸಿದ್ಧಪಡಿಸಿದೆ. ಮರುಎಣಿಕೆಯಲ್ಲಿ ಏನಾಗಲಿದೆ? ಯಾವ ಅಭ್ಯರ್ಥಿಗೆ ಜಾಸ್ತಿ ಮತಗಳು ಬಿದ್ದಿದೆ ಎನ್ನುವುದು ಬಹಿರಂಗವಾಗಲಿದೆ. ಹಾಗಾಗಿ ಶೃಂಗೇರಿ ವಿಧಾನಸಭಾ ಕ್ಷೇತ್ರದತ್ತ ಮತದಾರರ ಚಿತ್ತ ಮರುಎಣಿಕೆಯತ್ತ ವಾಲಿದೆ. ಮೇ 2ರಂದು ಬೆಳಿಗ್ಗೆ 8 ಗಂಟೆಯಿಂದಲೇ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಲಿದ್ದು, ಹೆಚ್ಚುವರಿ ಜಿಲ್ಲಾಧಿಕಾರಿ ಗೌರವ್ ಶೆಟ್ಟಿ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. […]