ಮೊಬೈಲ್ ಗೇಮ್ ಆಡಬೇಡ ಎಂದದ್ದಕ್ಕೆ ಬಾಲಕ ಆತ್ಮಹತ್ಯೆ! ಪೋಷಕರ ಹಿತವಚನವೇ ಮುಳುವಾಯ್ತು

ಹುಬ್ಬಳ್ಳಿ: ಮೊಬೈಲ್‌ನಲ್ಲಿ ಆನ್‌ಲೈನ್‌ ಗೇಮ್‌ ಆಡುತ್ತಿದ್ದ 14 ವರ್ಷದ ಬಾಲಕ ಸಮರ್ಥ ಪಟಿಕೆ, ಪೋಷಕರ ಹಿತವಚನ ಸಹಿಸದೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬೆಂಗೇರಿಯ ಉದಯನಗರದ ನಿವಾಸಿ ಸಮರ್ಥ್ ಕಳೆದ ಕೆಲವು ದಿನಗಳಿಂದ ‘ಫ್ರೀಫೈರ್’ಆನ್‌ಲೈನ್ ಗೇಮ್‌ಗಳಿಗೆ ವಿಪರೀತ ಅಡಿಕ್ಟ್ ಆಗಿದ್ದ. ರಾತ್ರಿ ಸತತವಾಗಿ ಗೇಮ್ ಆಡುತ್ತಿದ್ದ ಮಗನಿಗೆ ತಾಯಿ ಬುದ್ಧಿವಾದ ಹೇಳಿದ್ದಾರೆ. ‘ಮೊಬೈಲ್ ಸಾಕು ಮಾಡು, ಓದಿಕೊಳ್ಳುವ ಕಡೆ ಗಮನ ಕೊಡು’ ಎಂದು ಹೇಳಿ ಆತನ ಕೈಲಿದ್ದ ಮೊಬೈಲ್ ಕಿತ್ತುಕೊಂಡಿದ್ದಾರೆ. ಇದರಿಂದ ತೀವ್ರವಾಗಿ ನೊಂದ ಸಮರ್ಥ್, ತಕ್ಷಣ ತನ್ನ […]

ಕಾರ್ಕಳ ರಾಜಪುರ ಸಾರಸ್ವತ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ: ಎ.26 ರಂದು ಸಹಕಾರ ಸಿಂಧೂರ ಸಂಕೀರ್ಣ ಲೋಕಾರ್ಪಣೆ ಮತ್ತು ಸೊಸೈಟಿಯ ತ್ರಿಶಂತಿ ಸಂಭ್ರಮ ಆಚರಣೆ – ಅಧ್ಯಕ್ಷ ರವೀಂದ್ರ ಪ್ರಭು ಕಡಾರಿ

ಕಾರ್ಕಳ: ಮೂರು ದಶಕಗಳ ಸಣ್ಣ ಬಾಡಿಗೆ ಕಟ್ಟಡದಲ್ಲಿ ಮೊಳಕೆಯೊಡೆದ ಕಾರ್ಕಳದ ರಾಜಪುರ ಸಾರಸ್ವತ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯು ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. 30ನೇ ವರ್ಷದ ಸಂಭ್ರಮದ ಅಂಗವಾಗಿ ನಿರ್ಮಿಸಲಾದ ಸಹಕಾರ ಸಿಂಧೂರ ವಾಣಿಜ್ಯ ಸಂಕೀರ್ಣವು ಏ 26ರಂದು ಬೆಳಿಗ್ಗೆ 10.30 ಕ್ಕೆ ಲೋಕಾರ್ಪಣೆಗೊಳ್ಳಲಿದೆ ಎಂದು ಸಂಸ್ಥೆಯ ಅಧ್ಯಕ್ಷ ರವೀಂದ್ರ ಪ್ರಭು ಕಡಾರಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಈ ಸಹಕಾರಿಯು 1996ರಲ್ಲಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಹಸ್ತದಿಂದ ಚಾಲನೆ ಪಡೆದಿತ್ತು.ಜೋಡುರಸ್ತೆಯ ಪ್ರಧಾನ ಕಛೇರಿ […]

ರಾಜಪುರ ಸಾರಸ್ವತ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ: ಏಪ್ರಿಲ್ 26ರಂದು “ಸಹಕಾರ ಸಿಂಧೂರ” ಲೋಕಾರ್ಪಣೆ ಮತ್ತು ಸೊಸೈಟಿಯ ತ್ರಿಶಂತಿ ಸಂಭ್ರಮ ಆಚರಣೆ

ಕಾರ್ಕಳ: ರಾಜಾಪುರ ಸಾರಸ್ವತ ಕ್ರೆಡಿಟ್ ಕೋ – ಆಪರೇಟಿವ್ ಸೊಸೈಟಿ ವತಿಯಿಂದ ಕಾರ್ಕಳದ ಜೋಡುರಸ್ತೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ವಾಣಿಜ್ಯ ಸಂಕೀರ್ಣ ‘ಸಹಕಾರ ಸಿಂಧೂರ’ ಉದ್ಘಾಟನೆ ಮತ್ತು ಸೊಸೈಟಿಯ ತ್ರಿಂಶತಿ ಸಂಭ್ರಮ ಎ. 26ರಂದು ಬೆಳಗ್ಗೆ 10.30ಕ್ಕೆ ಸೊಸೈಟಿ ಆವರಣದಲ್ಲಿ ನಡೆಯಲಿದೆ. ಉದ್ಘಾಟನೆಯನ್ನು ಗೋವಾ, ಶ್ರೀ ಸಂಸ್ಥಾನ ಗೌಡಪಾದಾಚಾರ್ಯ ಕೈವಲ್ಯ ಮಠದ ಶ್ರೀಮದ್ ಶಿವಾನಂದ ಸರಸ್ವತಿ ಸ್ವಾಮೀಜಿ, ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ|ಡಿ. ವೀರೇಂದ್ರ ಹೆಗ್ಗಡೆ, ಎಸ್‌ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಡಾ| ಎಂ. […]

IPL: ಡೆಲ್ಲಿ ತಂಡದ ಆಟಗಾರನಿಗೆ ಅಭ್ಯಾಸದ ವೇಳೆ ಗಂಭೀರ ಗಾಯ! ಚಿಂತೆಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ !

ಇಂಡಿಯನ್ ಪ್ರೀಮಿಯರ್ ಲೀಗ್‌ನ ಮಹತ್ವದ ಘಟ್ಟದಲ್ಲಿ Delhi Capitals (DC) ತಂಡಕ್ಕೆ ದೊಡ್ಡ ಆತಂಕ ಎದುರಾಗಿದೆ. 35ನೇ ಪಂದ್ಯಕ್ಕೂ ಮುನ್ನ ಅಭ್ಯಾಸದ ವೇಳೆ ಯುವ ಬ್ಯಾಟರ್ ಸಾಹಿಲ್ ಪರಾಖ್ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ದೆಹಲಿಯ Arun Jaitley Stadium ನಲ್ಲಿ ಶುಕ್ರವಾರ ಸಂಜೆ ನಡೆದ ತರಬೇತಿ ವೇಳೆ, 18 ವರ್ಷದ ಸಾಹಿಲ್ ನೆಟ್ಸ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು. ವೇಗದ ಬೌಲರ್ ಎಸೆದ ಬೌನ್ಸರ್‌ನ್ನು ಎದುರಿಸುವಲ್ಲಿ ವಿಫಲವಾದ ಅವರು, ಚೆಂಡು ನೇರವಾಗಿ ಮುಖಕ್ಕೆ ಬಡಿದ ಪರಿಣಾಮ ಮೈದಾನದಲ್ಲೇ ಕುಸಿದರು. […]

ಉಡುಪಿ ಡಾ. ಜಿ. ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು : ನಿರ್ವಹಣಾ ಹಬ್ಬ ‘ಲಕ್ಷ್ಯ-2026’ ಉದ್ಘಾಟನೆ

ಉಡುಪಿ, ಎ. 24: ಡಾ. ಜಿ. ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು ಇಲ್ಲಿನ ವಾಣಿಜ್ಯಶಾಸ್ತ್ರ, ನಿರ್ವಹಣಾ ವಿಭಾಗ ಮತ್ತು ಆಂತರಿಕ ಗುಣಮಟ್ಟ ಭರವಾಸಕೋಶ ಇದರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ಒಂದು ದಿನದ ನಿರ್ವಹಣಾ ಹಬ್ಬ ‘ಲಕ್ಷ್ಯ-2026’ರ ಉದ್ಘಾಟನಾ ಕಾರ್ಯಕ್ರಮವು ಕಾಲೇಜಿನ ಪಿ. ಜಿ ಸಭಾಂಗಣದಲ್ಲಿ ನಡೆಯಿತು. ಮಹಿಳಾ ಉದ್ಯಮಿ ಮತ್ತು ಫುಡ್ ಬ್ಲಾಗರ್ ಆದ ರೋವೆನಾ ಫೆರ್ನಾಂಡಿಸ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಜೀವನದಲ್ಲೊಂದು ನಿರ್ದಿಷ್ಟ ಗುರಿಯನ್ನು ಹೊಂದಿದ್ದರೆ […]