ಉಡುಪಿ: ವಿದ್ಯಾರ್ಥಿಗಳಿಗೆ ಅದ್ಬುತ ಅವಕಾಶ – ಲಾರ್ಡ್ಸ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ವಿದ್ಯಾರ್ಥಿವೇತನ ಪರೀಕ್ಷೆ.

ಉಡುಪಿ: ಜಿಲ್ಲೆಯ ನಿಟ್ಟೂರಲ್ಲಿರುವ ಲಾರ್ಡ್ಸ್ ಇಂಟರ್‌ನ್ಯಾಷನಲ್ ರೆಸಿಡೆನ್ಶಿಯಲ್ ಶಾಲೆಯಲ್ಲಿ 2026ನೇ ಸಾಲಿನ ವಿದ್ಯಾರ್ಥಿವೇತನ ಪರೀಕ್ಷೆಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಪರೀಕ್ಷೆ ಪ್ರವೇಶಕ್ಕೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗಷ್ಟೇ ವಿಶೇಷವಾಗಿ ಆಯೋಜಿಸಲಾಗಿದೆ. ಮಾರ್ಚ್ 29, 2026ರಂದು ನಡೆಯಲಿರುವ ಈ ಪರೀಕ್ಷೆಯಲ್ಲಿ 1ರಿಂದ 9ನೇ ತರಗತಿಯವರೆಗೆ ವಿದ್ಯಾರ್ಥಿಗಳು ಭಾಗವಹಿಸಬಹುದು. ಪರೀಕ್ಷೆಯ ಬಳಿಕ ವಿದ್ಯಾರ್ಥಿಗಳ ಮೌಲ್ಯಮಾಪನ ಆಧರಿಸಿ ವಿದ್ಯಾರ್ಥಿವೇತನದ ವಿವರಗಳನ್ನು ಪ್ರಕಟಿಸಲಾಗುವುದು ಎಂದು ಶಾಲಾ ಆಡಳಿತ ತಿಳಿಸಿದೆ.ಹೆಚ್ಚಿನ ಮಾಹಿತಿಗಾಗಿ www.lordsedu.in⁠ ವೆಬ್‌ಸೈಟ್ ಅಥವಾ 77956 48500 / 77956 48501 ಗೆ ಸಂಪರ್ಕಿಸಬಹುದು.

ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಿಗೆ ‘ಯುಕ್ತಿ 2026’ ರಲ್ಲಿ ದ್ವಿತೀಯ ಸ್ಥಾನ

ಉಡುಪಿ: ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ವಿದ್ಯಾರ್ಥಿಗಳಾದ ಗೌರವ್ ಶೆಟ್ಟಿ ಮತ್ತು ಕಾರ್ತಿಕ್ ಎ ಆಚಾರ್ಯ ಇವರು ದಿನಾಂಕ 27 ಮತ್ತು 28 ಫೆಬ್ರವರಿ 2026 ರಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ನಡೆದ “ಯುಕ್ತಿ 2026”, ರಾಷ್ಟ್ರೀಯ ಮಟ್ಟದ ಲೈನ್ ಫಾಲೋವರ್ ಸ್ಪರ್ಧೆಯಲ್ಲಿ ಇವರು ದ್ವಿತೀಯ ಬಹುಮಾನವನ್ನು ಪಡೆದಿರುತ್ತಾರೆ. ವಿದ್ಯಾರ್ಥಿಗಳ ಈ ಸಾಧನೆಯು ವಿದ್ಯಾರ್ಥಿಗಳಲ್ಲಿನ ನಾವೀನ್ಯತೆ, ತಾಂತ್ರಿಕ ಶ್ರೇಷ್ಠತೆ ಮತ್ತು ಪ್ರಾಯೋಗಿಕ ಕಲಿಕೆಯನ್ನು ಬೆಳೆಸುವಲ್ಲಿ ಸಂಸ್ಥೆಯ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. […]

ಹಾಸನ: ಖಾಸಗಿ ಬಸ್ – ಲಾರಿ ನಡುವೆ ಅಪಘಾತ; ಕುಂದಾಪುರದ ವ್ಯಕ್ತಿ ಮೃತ್ಯು.

ಹಾಸನ: ಹಿರೀಸಾವೆಯ ಅಮ್ಮಕುಟೀರ ಬಡಾವಣೆ ಬಳಿ ಮಂಗಳವಾರ ಬೆಳಗಿನ ಜಾವ 4-30 ಕ್ಕೆ ಖಾಸಗಿ ಬಸ್ ಮತ್ತು ಲಾರಿ ನಡುವೆ ಅಪಘಾತ ನಡೆದು, ಪ್ರಯಾಣಿಕರೊಬ್ಬರು ಮೃತಪಟ್ಟಿದ್ದು, 8 ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ. ಬಸ್ ನಲ್ಲಿದ್ದ ಕುಂದಾಪುರದ ಕೃಷ್ಣ ಶೆಟ್ಟಿ ಎಂಬುವವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಅಪಘಾತದಲ್ಲಿ 8ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯಗಳಾಗಿದ್ದು, ಒಬ್ಬರ ಸ್ಥಿತಿ ಗಂಭೀರವಾಗಿದೆ. ಮಂಗಳೂರಿನಿಂದ ಬೆಂಗಳೂರಿಗೆ ಹೋಗುತ್ತಿದ್ದ ದುರ್ಗಾಂಬ ಟ್ರಾವೆಲ್ ಗೆ ಸೇರಿದ ಬಸ್ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ವಾಹನ ಒಂದನ್ನು […]

ಕ್ರೆೈಸ್ಟ್ಕಿಂಗ್ ಆಂಗ್ಲಮಾಧ್ಯಮ ಶಾಲೆಯಲ್ಲಿ ‘ವರ್ಟೆಕ್ಸ್ ವೆಂಚರ್–2026’ ಬೇಸಿಗೆ ಶಿಬಿರ

ಕಾರ್ಕಳ: ಇಲ್ಲಿನ ಕ್ರೆೈಸ್ಟ್ಕಿಂಗ್ ಆಂಗ್ಲಮಾಧ್ಯಮ ಶಾಲೆಯ ಪ್ರಾಥಮಿಕ ಹಾಗೂ ಪ್ರೌಢ ವಿಭಾಗದ ಮಕ್ಕಳಿಗಾಗಿ ಬೇಸಿಗೆ ಶಿಬಿರವನ್ನು ಸಂಸ್ಥೆಯ ನೂತನ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು. ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಸಂತ ಬೆಸಿಲಿಕಾ ಅತ್ತೂರು ಇಲ್ಲಿನ ಸಹಾಯಕ ಧರ್ಮ ಗುರುಗಳಾದ ರೆ| ರಾಬಿನ್ ಜಾಯ್ಸನ್‌ರವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ವಿದ್ಯಾರ್ಥಿಗಳಲ್ಲಿರುವ ಸೃಜನಶೀಲತೆ ಮತ್ತು ಕೌಶಲ್ಯವನ್ನು ಅಭಿವೃದ್ಧಿ ಪಡಿಸುವಲ್ಲಿ ಇಂತಹ ಶಿಬಿರ ಅತ್ಯವಶ್ಯಕ ಎಂದು ಹೇಳಿದರು. ಶಿಬಿರದ ಮುಖ್ಯ ಅತಿಥಿಯಾಗಿ ಆಗಮಿಸಿದ ಯಕ್ಷರಂಗಾಯಣ ಕಾರ್ಕಳ ನಿರ್ದೇಶಕರಾದ […]

ಕೊಲಂಬಿಯಾ ಸೇನಾ ವಿಮಾನ ಅಪಘಾತ: 66 ಸೈನಿಕರು ಮೃತ್ಯು.

ಕೊಲಂಬಿಯಾ: ನಿನ್ನೆ ಕೊಲಂಬಿಯಾದ ಸೇನಾ ವಿಮಾನದ ಅಪಘಾತದಲ್ಲಿ ಮೃತ ಸೈನಿಕರ ಸಂಖ್ಯೆ 66 ಎಂದು ಕೊಲಂಬಿಯಾ ಸೇನಾ ವಕ್ತಾರರು ಅಧಿಕೃತ ಮಾಹಿತಿ ನೀಡಿದ್ದಾರೆ. ವಿಮಾನದಲ್ಲಿ ಸಿಬ್ಬಂದಿ ಸೇರಿ ಒಟ್ಟು 115 ಜನ ಇದ್ದರು ಎಂದು ತಿಳಿಸಿದ್ದಾರೆ. 66 ಶವಗಳನ್ನು ಶವಾಗಾರಕ್ಕೆ ಸ್ಥಳಾಂತರಿಸಲಾಗಿದ್ದು, ಇನ್ನೂ 15 ಸೈನಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಉಳಿದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವಿವರಿಸಿದ್ದಾರೆ. ಮೃತರಲ್ಲಿ 6 ವಾಯುಸೇನೆ ಇಬ್ಬರು ಪೊಲೀಸ್ ಅಧಿಕಾರಿಗಳು ಹಾಗೂ ಉಳಿದವರು ಸೇನೆಗೆ ಸಂಬಂಧಿಸಿದವರು ಎಂದು ತಿಳಿಸಿದ್ದಾರೆ. ಕೊಲಂಬಿಯಾದ ಈಕ್ವೆಡಾರ್‌ ಗಡಿ ಬಳಿ […]