ಉಡುಪಿ–ಮಂಗಳೂರಿನ ಪ್ರಖ್ಯಾತ ಖಾಸಗಿ ಕಂಪನಿಯಲ್ಲಿ ಉದ್ಯೋಗಾವಕಾಶ!

ಉಡುಪಿ:ಉಡುಪಿ–ಮಂಗಳೂರಿನಲ್ಲಿ ವಿವಿಧ ಹುದ್ದೆಗಳಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹುದ್ದೆಗಳು : 1.ಪ್ರೊಡಕ್ಷನ್ ಸೂಪರ್‌ವೈಸರ್, 2.ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್, 3.ಬಿಲ್ಲಿಂಗ್/ಕ್ಯಾಶಿಯರ್, 4.ಟೆಲಿಕಾಲರ್, 5.ಆಫೀಸ್ ಸ್ಟಾಫ್/ಕ್ಯಾಶಿಯರ್ 6.ಗ್ರಾಫಿಕ್ ಡಿಸೈನರ್/ವೀಡಿಯೋ ಎಡಿಟರ್ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:6360343209, 9632298960

ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿ ಪರ್ಕಳ: ನೂತನ ಅಧ್ಯಕ್ಷರು ಉಪಾಧ್ಯಕ್ಷರ ಅವಿರೋಧ ಆಯ್ಕೆ

ಪರ್ಕಳ: ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿ., ಪರ್ಕಳ 2026 ರಿಂದ ಮುಂದಿನ ಐದು ವರ್ಷದ ಅವಧಿಗೆ ನೂತನ ಅಧ್ಯಕ್ಷರಾಗಿ ನರಸಿಂಹ ನಾಯಕ್ ಮಣಿಪಾಲ ಉಪಾಧ್ಯಕ್ಷರಾಗಿ ಮಹೇಶ್ ನಾಯಕ್ ಅಂಬಲಬೆಟ್ಟು ಅವಿರೋಧವಾಗಿ ಆಯ್ಕೆಯಾದರು. ಚುನಾವಣಾ ನಿರ್ವಚನಾಧಿಕಾರಿಯಾಗಿ ಶ್ರೀ ರೋಹಿತ್ ಆರ್ ಕಾರ್ಯನಿರ್ವಹಿಸಿದರು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಸಂಸ್ಥೆಯ ಮುಖ್ಯಕಾರ್ಯನಿರ್ವಹಣಾಧಿಕಾರಿ ನಿತ್ಯಾನಂದ ನರಸಿಂಗೆ ತಿಳಿಸಿದರು.

ಮಣಿಪಾಲ: MSDC ಯಲ್ಲಿ ಮಾರ್ಚ್ 14 ರಂದು ನೆಕ್ಸ್ಟ್ ಜನರೇಶನ್ AI ಕಾರ್ಯಾಗಾರ

ಮಣಿಪಾಲ: ಡಾ. ಟಿ.ಎಂ.ಎ. ಪೈ ಫೌಂಡೇಶನ್ನ ಘಟಕದ ಮಣಿಪಾಲ್ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ ನಲ್ಲಿ ನೆಕ್ಸ್ಟ್ ಜನರೇಶನ್ AI ಎನ್ನುವ ಕಾರ್ಯಾಗಾರ ಮಾರ್ಚ್ 14 ರಂದು ಬೆಳಿಗ್ಗೆ 9 ರಂದು ನಡೆಯಲಿದೆ. Gen-AI ಕೌಶಲ್ಯಗಳೊಂದಿಗೆ ಇಂಜಿನಿಯರಿಂಗ್ ಕೌಶಲ್ಯಗಳನ್ನೂ ಜಾಸ್ತಿಗೊಳಿಸುವ ಕಾರ್ಯಾಗಾರ ಇದಾಗಿದೆ. ನೆಕ್ಸ್ಟ್ ಜನರೇಶನ್ AI ಕೌಶಲ್ಯಗಳನ್ನು ಈ ಕಾರ್ಯಾಗಾರ ಹೇಳಿಕೊಡಲಿದೆ. ಸಂಪನ್ಮೂಲ ವ್ಯಕ್ತಿಗಳಾಗಿ ರಾಜಲಕ್ಷ್ಮಿ ಆನಂದನ್ ಸೆಂಟರ್ ಹೆಡ್, School of IT Skills, MSDC, ಡಾ. ಶ್ವೇತಾ ಪೈ ಸಹ ಪ್ರಾಧ್ಯಾಪಕಿ, MIT ಮಣಿಪಾಲ್, […]

ಕುಂದಾಪುರ: ಎಂಐಟಿಕೆ’ಯಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

ಕುಂದಾಪುರ: ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯ ಕುಂದಾಪುರ ಇಲ್ಲಿ ಮಾ.9 ರಂದು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಂತರಿಕ ದೂರು ಸಮಿತಿಯು ಎಂಬಿಎ ವಿಭಾಗದ ಸಹಯೋಗದೊಂದಿಗೆ, “ ಲೀಡ್ ಹರ್ ಷಿಪ್ : ಸೆಲೆಬ್ರೇಟಿಂಗ್ ವುಮೆನ್ ಲೀಡರ್ಸ್ ” ಎಂಬ ಶೀರ್ಷಿಕೆಯ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಕಾರ್ಯಕ್ರಮದ ಗೌರವ ಅತಿಥಿಗಳಾಗಿ ಶ್ರೀಮತಿ ವಿಂಧ್ಯಾ ಎನ್ ಎಂ, ಹಿರಿಯ ಭೂವಿಜ್ಞಾನಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ ಹಾಗೂ ಶ್ರೀಮತಿ ಪೂರ್ಣಿಮಾ ಭೋಜರಾಜ, ಗ್ರೇಡೇಡ್ ಕಲಾವಿದರು ಎ ಐ […]

ಉಡುಪಿ:ಸಾರ್ವಜನಿಕರ ಬೇಡಿಕೆಗೆ ಅನುಗುಣವಾಗಿ ಅನಿಲ ಪೂರೈಕೆಗೆ ಕ್ರಮ ವಹಿಸಿ – ಜಿಲ್ಲಾಧಿಕಾರಿ ಸ್ವರೂಪ ಟಿ. ಕೆ

ಉಡುಪಿ: ಯುದ್ಧ ಸನ್ನಿವೇಶದ ಹಿನ್ನೆಲೆ, ಅನಿಲ ಕೊರತೆ ಉಂಟಾಗುತ್ತದೆ ಎಂದು ಸಾರ್ವಜನಿಕರು ಏಕಕಾಲದಲ್ಲಿ ಅನಿಲ ಸಂಪರ್ಕಕ್ಕೆ ಬುಕ್ಕಿಂಗ್ ಮಾಡುತ್ತಿದ್ದು, ಇದರಿಂದ ಬುಕ್ಕಿಂಗ್ ಕ್ರಾö್ಯಷ್ ಆಗುತ್ತಿದೆ. ಸಾರ್ವಜನಿಕ ಆಸ್ಪತ್ರೆಗಳು, ವಸತಿ ನಿಲಯಗಳು, ಗೃಹಬಳಕೆ, ಅತೀ ಅವಶ್ಯಕ ವಸ್ತುಗಳನ್ನು ಉತ್ಪಾದಿಸುವ ಕೈಗಾರಿಕಾ ಘಟಕಗಳು, ಸೇರಿದಂತೆ ಸಾರ್ವಜನಿಕರ ಬೇಡಿಕೆಗೆ ಅನುಗುಣವಾಗಿ ಆದ್ಯತೆಯ ಮೇಲೆ ಅನಿಲ ಪೂರೈಸಲು ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಸೂಚನೆ ನೀಡಿದರು. ಅವರು ಗುರುವಾರ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಪ್ರಸ್ತುತ ಗೃಹ ಬಳಕೆಯಎಲ್‌ಪಿಜಿ […]