ಕಾರ್ಕಳ :ಜೆಇಇ ಮೈನ್ (ಬಿ.ಟೆಕ್) ಮೊದಲ ಹಂತದ ಫಲಿತಾಂಶ:ಜ್ಞಾನಸುಧಾದ 9 ವಿದ್ಯಾರ್ಥಿಗಳಿಗೆ 99ಕ್ಕಿಂತ ಅಧಿಕ ಪರ್ಸಂಟೈಲ್

ಕಾರ್ಕಳ :ರಾಷ್ಟ್ರಮಟ್ಟದಲ್ಲಿ ಇಂಜಿನಿಯರಿಂಗ್ ಪ್ರವೇಶಕ್ಕಾಗಿ ಎನ್.ಟಿ.ಎ ನಡೆಸಿದ ಜೆಇಇ ಮೈನ್(ಬಿ.ಟೆಕ್)-2026ರ ಪ್ರಥಮ ಹಂತದ ಫಲಿತಾ೦ಶದಲ್ಲಿ ಜ್ಞಾನಸುಧಾ ಪಿ.ಯು ಕಾಲೇಜಿನ 9 ವಿದ್ಯಾರ್ಥಿಗಳು 99ಕ್ಕಿಂತ ಅಧಿಕ ಪರ್ಸಂಟೈಲ್ ಗಳಿಸಿ ಉತ್ತಮ ಸಾಧನೆಮಾಡಿರುತ್ತಾರೆ. ಟಾಪರ್ ಆಗಿ 99.9055199 ಪರ್ಸಂಟೈಲ್‌ನೊ೦ದಿಗೆ ಕನಿಷ್ಕ್ ಅಮೀನ್ ಹೊರಹೊಮ್ಮಿದ್ದಾರೆ.22 ವಿದ್ಯಾರ್ಥಿಗಳು 98 ಪರ್ಸಂಟೈಲ್‌ಗಿಂತ ಅಧಿಕ, 48 ವಿದ್ಯಾರ್ಥಿಗಳು 97 ಪರ್ಸಂಟೈಲ್‌ಗಿಂತ ಅಧಿಕ,74 ವಿದ್ಯಾರ್ಥಿಗಳು 96 ಪರ್ಸಂಟೈಲ್‌ಗಿಂತ ಅಧಿಕ, 94 ವಿದ್ಯಾರ್ಥಿಗಳು 95 ಪರ್ಸಂಟೈಲ್‌ಗಿಂತ ಅಧಿಕ ಹಾಗೂ 220 ವಿದ್ಯಾರ್ಥಿಗಳು 90 ಪರ್ಸಂಟೈಲ್‌ಗಿಂತ ಅಧಿಕ ಫಲಿತಾಂಶ ತಮ್ಮದಾಗಿಸಿಕೊ೦ಡಿದ್ದಾರೆ. […]

ಮಂಗಳೂರು:ಎಕ್ಸ್‌ಪರ್ಟ್ ಪಿಯು ಕಾಲೇಜು: ಜೆಇಇ 2026 ರ ಫಲಿತಾಂಶಗಳು

ಮಂಗಳೂರು :ಕಳೆದ ತಿಂಗಳು ನಡೆದ ರಾಷ್ಟ್ರೀಯ ಮಟ್ಟದ ಎಂಜಿನಿಯರಿಂಗ್ ಪರೀಕ್ಷೆ ಜೆಇಇ (ಮುಖ್ಯ) 2026 ರ ಮೊದಲ ಅವಧಿಯಲ್ಲಿ, ಮಂಗಳೂರಿನ ಎಕ್ಸ್‌ಪರ್ಟ್ ಪಿಯು ಕಾಲೇಜಿನ 15 ವಿದ್ಯಾರ್ಥಿಗಳು ಶೇ.99 ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ. ಜೆಇಇ (ಮುಖ್ಯ) ದ ಮೊದಲ ಅಧಿವೇಶನ ಈ ವರ್ಷದ ಜನವರಿಯಲ್ಲಿ ನಡೆದಿದ್ದು, ಎಕ್ಸ್‌ಪರ್ಟ್ ಕಾಲೇಜು ಕೊಡಿಯಾಲ್‌ಬೈಲ್ ಮತ್ತು ಎಕ್ಸ್‌ಪರ್ಟ್ ಕಾಲೇಜು ವಳಚಿಲ್ ಎರಡನ್ನೂ ಸೇರಿಸಿದರೆ ಒಟ್ಟು 36 ವಿದ್ಯಾರ್ಥಿಗಳು ಶೇ.98 ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ. ಅದೇ ರೀತಿ, ಕಾಲೇಜಿನ 72 […]

ಮೂಡುಬಿದಿರೆ: ಜೆ.ಇ.ಇ. ಪ್ರಥಮ ಹಂತದ ಫಲಿತಾಂಶ:ಆಳ್ವಾಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ

ಮೂಡುಬಿದಿರೆ: ರಾಷ್ಟ್ರಮಟ್ಟದಲ್ಲಿ ಇಂಜಿನಿಯರಿಂಗ್ ಪ್ರವೇಶಕ್ಕಾಗಿ ಎನ್.ಟಿ.ಎ. ನಡೆಸಿದ ಜೆಇಇ ಮೈನ್ಸ್ ಪರೀಕ್ಷೆಯ ಪ್ರಥಮ ಹಂತದ ಫಲಿತಾಂಶ ಪ್ರಕಟಗೊಂಡಿದ್ದು, ಆಳ್ವಾಸ್ ಪದವಿಪೂರ್ವ ಕಾಲೇಜಿನ ಪಿಯುಷ್ ಎಚ್ 99.4585176 ಪರ್ಸೇಂಟೈಲ್ ಗಳಿಸಿ ಸಾಧನೆ ಮೆರೆದಿದ್ದಾರೆ. 8 ವಿದ್ಯಾರ್ಥಿಗಳು 98.5 ಪರ್ಸೇಂಟೈಲ್‌ಗಳಿಗಿಂತ ಅಧಿಕ ಅಂಕ ಪಡೆದು ತೇರ್ಗಡೆ ಹೊಂದಿದ್ದಾರೆ. ಶಶಾಂಕ್ ಬೋರ್ಕರ್ (98.9610456), ಸೃಜನ್ ವಿ (98.7320359), ಮೆಲ್ರೋಯ್ ಕಾಸ್ಟೆಲಿನೋ (98.648776), ಪ್ರಣವ್ ಎನ್. ಪಂಡಿತ್ (98.5677958), ಹರ್ಷವರ್ಧನ ಕೆ. ಪಿ. (98.5552656), ಕ್ಷಮ ಅಶೋಕ್ ಹಕಟಿ (98.5177603), ಕ್ಲಾರೆನ್ಸ್ ಡಿಸೋಜ […]

ಮಾರ್ಪಳ್ಳಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಸಂಪನ್ನ

ಉಡುಪಿ: ಮಾರ್ಪಳ್ಳಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಸಂಪನ್ನಗೊಂಡಿತು. ದೇವಸ್ಥಾನದ ಅರ್ಚಕರ ನೇತೃತ್ವದಲ್ಲಿ ಗಣಹೋಮ, ನವಕ ಪ್ರಧಾನ ಹೋಮ, ಮಹಾಪೂಜೆ ನೆರವೇರಿತು. ಮಧ್ಯಾಹ್ನ ರಥೋತ್ಸವ ನಡೆದ ಬಳಿಕ ಮಹಾಅನ್ನಸಂತರ್ಪಣೆ ನಡೆಯಿತು. ಸಾವಿರಾರು ಭಕ್ತರು ಭೋಜನ ಪ್ರಸಾದ ಸ್ವೀಕರಿಸಿದರು. ಸಂಜೆ ಸ್ಥಳೀಯ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು‌. ಬಳಿಕ ಮಾರ್ಪಳ್ಳಿ ಮಹಾಲಿಂಗೇಶ್ವರ ಯಕ್ಷಗಾನ ಕಲಾಮಂಡಳಿಯ‌ ಸದಸ್ಯರಿಂದ ಕವಿರತ್ನ ಕಾಳಿದಾಸ ಯಕ್ಷಗಾನ ಪ್ರದರ್ಶನಗೊಂಡಿತು. ರಾತ್ರಿ ನಡೆದ ಮಹಾರಥೋತ್ಸವದಲ್ಲಿ ಪಾಲ್ಗೊಂಡ ಸಾವಿರಾರು ಭಕ್ತರು ರಥವನ್ನು ಎಳೆದು […]

ಉದ್ಯೋಗ ನಷ್ಟದ ಆತಂಕ ಬಿಡಿ: ಪ್ರಧಾನಿ ಮೋದಿ

ನವದೆಹಲಿ: ಕೃತಕ ಬುದ್ಧಿಮತ್ತೆ (ಎ.ಐ) ತಂತ್ರಜ್ಞಾನದಿಂದ ಬೃಹತ್‌ ಪ್ರಮಾಣದ ಉದ್ಯೋಗ ನಷ್ಟದ ಆತಂಕವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ತಳ್ಳಿಹಾಕಿದ್ದಾರೆ. ‘ಈಗಾಗಲೇ ಅಸ್ತಿತ್ವದಲ್ಲಿರುವ ಉದ್ಯೋಗಗಳು ಎ.ಐ ತಂತ್ರಜ್ಞಾನದಿಂದ ಹೊಸ ರೂಪ ಪಡೆದುಕೊಳ್ಳಬಹುದು. ಅದೇ ರೀತಿ, ಹೊಸ ಉದ್ಯೋಗಗಳ ಸೃಷ್ಟಿಗೂ ಕಾರಣವಾಗುತ್ತದೆ ಹಾಗೂ ದೇಶದ ಆರ್ಥಿಕತೆಯನ್ನು ಉತ್ತೇಜಿಸುತ್ತದೆ’ ಎಂದು ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ‘ವಿಶ್ವದ ಅಗ್ರ ಮೂರು ಎ.ಐ ಸೂಪರ್‌ಪವರ್‌ಗಳಲ್ಲಿ ಭಾರತಕ್ಕೆ ಸ್ಥಾನ ಕಲ್ಪಿಸುವುದು ತಮ್ಮ ಗುರಿ’ ಎಂಬ ಮಾತನ್ನು ಪ್ರಧಾನಿ ಪುನರುಚ್ಚರಿಸಿದರು.‘ಭಾರತದ ಐ.ಟಿ […]