ಬಾಂಗ್ಲಾದೇಶ ಚುನಾವಣೆಯಲ್ಲಿ ಬಿಎನ್ ಪಿ ಭರ್ಜರಿ ಗೆಲುವು; ಪ್ರಧಾನಿ ಮೋದಿ ಅಭಿನಂದನೆ.

ಬಾಂಗ್ಲಾದೇಶದ ಸಂಸತ್ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆದು ಐತಿಹಾಸಿಕ ಗೆಲುವು ಸಾಧಿಸಿದ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿಯನ್ನು(BNP) ಮತ್ತು ಅದರ ನಿರ್ಣಾಯಕ ಗೆಲುವಿನತ್ತ ಮುನ್ನಡೆಸಿದ ತಾರಿಕ್ ರೆಹಮಾನ್ ಅವರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದರು. ಇದರಿಂದ ಬಾಂಗ್ಲಾದೇಶದ ಹೊಸ ರಾಜಕೀಯ ನಾಯಕತ್ವದೊಂದಿಗೆ ಕಾರ್ಯನಿರ್ವಹಿಸಲು ಭಾರತ ಸಿದ್ಧವಾಗಿರುವುದನ್ನು ಸೂಚಿಸುತ್ತದೆ. ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಮಾಡಿದ ಪೋಸ್ಟ್ನಲ್ಲಿ, ಪ್ರಧಾನಿ ಮೋದಿ ಅವರು ಭಾರತವು ಪ್ರಜಾಸತ್ತಾತ್ಮಕ ವ್ಯವಸ್ಥೆ ಮತ್ತು ಪ್ರಾದೇಶಿಕ ಸ್ಥಿರತೆಯತ್ತ ಬದ್ಧವಾಗಿದೆ ಎಂದು ಹೇಳಿ, ಈ ಜನಾದೇಶವು ರಹ್ಮಾನ್ […]
ಎಂಐಟಿಕೆನಲ್ಲಿ ಕೃತಕ ಬುದ್ಧಿಮತ್ತೆ, ಡ್ರೋನ್ ಹಾಗೂ ರೋಬೋಟಿಕ್ಸ್ನ ಸ್ಮಾರ್ಟ್ ಇನೋವೇಶನ್ ಕೇಂದ್ರ ಉದ್ಘಾಟನೆ

ಕುಂದಾಪುರ: ಐ ಎಮ್ಜೆ ಇನ್ಸ್ಟಿಟ್ಯೂಟ್ ಅಧ್ಯಕ್ಷರಾದ ಸಿದ್ಧಾರ್ಥ ಜೆ. ಶೆಟ್ಟಿ ಅವರ ದೂರದೃಷ್ಟಿಯ ನಾಯಕತ್ವ ಮತ್ತು ಮಾರ್ಗದರ್ಶನದಡಿ, ಶೈಕ್ಷಣಿಕ ಶ್ರೇಷ್ಠತೆ, ಸಂಶೋಧನಾ ಆಧಾರಿತ ನವೀನತೆ ಹಾಗೂ ಜಾಗತಿಕ ಸಹಕಾರಗಳತ್ತ ಮುನ್ನಡೆಸುವಲ್ಲಿ ಮಹತ್ವದ ಪಾತ್ರ ವಹಿಸಿರುವ ಮೂಡ್ಲಕಟ್ಟೆ ತಾಂತ್ರಿಕ ಸಂಸ್ಥೆಯ ಸಂಶೋಧನಾ ವಿಭಾಗದ ಅಡಿಯಲ್ಲಿ ಕೃತಕ ಬುದ್ಧಿಮತ್ತೆ, ಡ್ರೋನ್ ಹಾಗೂ ರೋಬೋಟಿಕ್ಸ್ನ ಸ್ಮಾರ್ಟ್ ಇನೋವೇಶನ್ ಕೇಂದ್ರವನ್ನು ಫೆಬ್ರವರಿ 12, 2026 ರಂದು ಉದ್ಘಾಟಿಸಲಾಯಿತು. ಈ ಕೇಂದ್ರವನ್ನು ಸಂಶೋಧನೆ ಹಾಗೂ ಸಲಹಾ ವಿಭಾಗದ ಡೀನ್ ಆಗಿರುವ ಡಾ. ಇಂದ್ರ ವಿಜಯ್ […]
ಮೂಡುಬಿದಿರೆ: ಕಾರು ಬೈಕಿಗೆ ಡಿಕ್ಕಿ; ಗಾಯಗೊಂಡಿದ್ದ ಕಾಲೇಜು ವಿದ್ಯಾರ್ಥಿ ಮೃತ್ಯು

ಮೂಡುಬಿದಿರೆ : ತಾಲೂಕಿನ ಬನ್ನಡ್ಕದಲ್ಲಿ ಗುರುವಾರ ರಾತ್ರಿ ನಡೆದ ಕಾರು–ಬೈಕ್ ಢಿಕ್ಕಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ರೋಟರಿ ಪಿಯುಸಿ ಕಾಲೇಜಿನ ವಿದ್ಯಾರ್ಥಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು ಮಾರ್ಪಾಡಿ ಗ್ರಾಮದ ಕೋಟೆಬಾಗಿಲಿನ ಸದಾನಂದ ಸುವರ್ಣ–ರಾಜಶ್ರೀ ದಂಪತಿಯ ಪುತ್ರ ಶ್ರವಣ್ ಎಂದು ಗುರುತಿಸಲಾಗಿದೆ. ಕಾಮಗಾರಿ ಹಂತದಲ್ಲಿರುವ ಕಾರ್ಕಳ–ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿಯ ಬನ್ನಡ್ಕ ದೈವಸ್ಥಾನದ ಸಮೀಪ ಈ ದುರ್ಘಟನೆ ಸಂಭವಿಸಿದೆ. ಕಂಟೆಂಟ್ ಕ್ರಿಯೇಟರ್ ಸೂರಜ್ ಅಂಚನ್ ಅವರೊಂದಿಗೆ ಶ್ರವಣ್ ಸಹ ಸವಾರರಾಗಿದ್ದರು ಎನ್ನಲಾಗಿದೆ. ಕಾರ್ಕಳ ಕಡೆಯಿಂದ ವೇಗವಾಗಿ ಬಂದ […]
ಕಾರ್ಕಳ ಜ್ಞಾನಸುಧಾ :’ಎಕೋಸ್ ಆಫ್ ಇಂಗ್ಲಿಷ್’- ಮಾದರಿ ಪ್ರದರ್ಶನ

ಗಣಿತನಗರ :ಕಾರ್ಕಳ ಜ್ಞಾನಸುಧಾ ಆಂಗ್ಲಮಾಧ್ಯಮ ಶಾಲೆ ಹಾಗ್ತೂ ಪ್ರೌಢಶಾಲೆಯಲ್ಲಿ 7ನೇ ತರಗತಿಯ ಮಕ್ಕಳಿಂದ ‘ಎಕೋಸ್ ಆಫ್ ಇಂಗ್ಲಿಷ್’- ಮಾದರಿ ಪ್ರದರ್ಶನ ನಡೆಯಿತು. ಉಪಪ್ರಾಂಶುಪಾಲೆ ಶ್ರೀಮತಿ ವಾಣಿ ಕೆ ಇವರ ನಿರ್ದೇಶನದಲ್ಲಿ, ವಿದ್ಯಾರ್ಥಿಗಳು, ತರಗತಿ ಆಂಗ್ಲಭಾಷಾ ಶಿಕ್ಷಕಿ ಕು.ದರ್ಶಿನಿಯವರಮಾರ್ಗದರ್ಶನದಲ್ಲಿ ವಿವಿಧ ಆಂಗ್ಲಭಾಷಾ ಲೇಖಕರ ಪರಿಚಯ, ಪುಸ್ತಕ ಪರಿಚಯ, ವ್ಯಾಕರಣದ ಮಾದರಿಗಳ ಪ್ರದರ್ಶನ, ವಿದ್ಯಾರ್ಥಿಗಳೇ ತಯಾರಿಸಿದ ವಿವಿಧ ಬುಕ್ ಮಾರ್ಕ್ಸ್, ವ್ಯಾಕರಣ ಕ್ರಾಫ್ಟ್ಗಳಪ್ರದರ್ಶನದ ಜೊತೆಗೆ ಭಾಷಾಕಲಿಕೆಯನ್ನು ಮನೋರಂಜನಾ ಆಟಗಳ ಮುಖಾಂತರ ಪ್ರಸ್ತುತಪಡಿಸಿದರು. ಈ ಸಂದರ್ಭದಲ್ಲಿ ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ […]
ಯಕ್ಷಗಾನ ಕಲಾಕ್ಷೇತ್ರ: ಅಮೃತ ಮಹೋತ್ಸವ ದ ವಿಜ್ಞಾಪನಾ ಪತ್ರ ಬಿಡುಗಡೆ ಕಾರ್ಯಕ್ರಮ

ಉಡುಪಿ:ಗುಂಡಿಬೈಲು ಯಕ್ಷಗಾನ ಕಲಾಕ್ಷೇತ್ರದ 75 ನೇ ವಾರ್ಷಿಕೋತ್ಸವ ದ ಸಂದರ್ಭದಲ್ಲಿ ಅಮೃತ ಮಹೋತ್ಸವದ ವಿಜ್ಞಾಪನಾ ಪತ್ರ ವನ್ನು ಉಡುಪಿ ಎಂಜಿನಿಯರ್ಸ್ ಅಸೋಸಿಯೇಷನ್ ಅಧ್ಯಕ್ಷ, ಅದಿತಿ ಬಿಲ್ಡರ್ಸ್ ಮಾಲಕ ರಂಜನ್ ಕೆ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು 75 ವರ್ಷ ಗಳ ಇತಿಹಾಸ ಉಳ್ಳ ಯಕ್ಷಗಾನ ಸಂಘ ಗುಂಡಿಬೈಲಿನಲ್ಲಿ ಇರುವುದು ಸ್ಥಳೀಯರಾದ ನಮಗೆ ಹೆಮ್ಮೆ ತರುವ ವಿಚಾರ, ಮಕ್ಕಳಿಗೆ ಯಕ್ಷಗಾನ ಅಭ್ಯಾಸ ಮಾಡಿಸಿ ಅವರಲ್ಲಿ ಸಂಸ್ಕೃತಿ ಮೂಡಿಸುವ ಕೆಲಸ ಶ್ಲಾಘನೀಯ, ಅಮೃತ ಮಹೋತ್ಸವದ ವಿಜ್ಞಾಪನಾ ಪತ್ರ […]