ಕುಂದಾಪುರ: ಅಕ್ರಮ ಮರಳುಗಾರಿಕೆ ಅಡ್ಡೆಗೆ ದಾಳಿ: ಮರಳು, ಬೋಟ್ ಸಹಿತ 22 ಮಂದಿಯ ಬಂಧನ

ಉಡುಪಿ: ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದ ಆರೋಪಿಗಳನ್ನು ಬಂಧಿಸಿ, ಲಕ್ಷಾಂತರ ರೂ. ಮೌಲ್ಯದ ಮರಳು ಹಾಗೂ ಉಪಕರಣಗಳನ್ನು ವಶಪಡಿಸಿಕೊಂಡ ಘಟನೆ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕುಂದಾಪುರ ತಾಲೂಕಿನ ಮೊಳಹಳ್ಳಿ ಗ್ರಾಮದ ಮರತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಮೀಪ ಖಾಲಿ ಜಾಗದಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿತ್ತು. ಈ ವೇಳೆ ವಾರಾಹಿ ನದಿಯಿಂದ ಅಕ್ರಮವಾಗಿ ಮರಳು ತೆಗೆಯುತ್ತಿರುವುದು ಕಂಡುಬಂದಿದೆ. ದಾಳಿಯಲ್ಲಿ ಸುಮಾರು 315 ಯುನಿಟ್ ಮರಳು (ಅಂದಾಜು ಮೌಲ್ಯ ರೂ. 8,50,000/-), ಮರಳು ತೆಗೆಯಲು ಬಳಸಿದ 3 ಫೈಬ‌ರ್ […]

MSDC ಯ ಈ ವಿಶೇಷ ಕಾರ್ಯಾಗಾರದಲ್ಲಿ ಭಾಗವಹಿಸಿ, ಫಾರ್ಮಾ ವೃತ್ತಿಪರರು ಜನರೇಟಿವ್ ಎಐ ತಂತ್ರಜ್ಞಾನದಲ್ಲಿ ತಜ್ಞರಾಗಬಹುದು!

ಮಣಿಪಾಲ: ಮಣಿಪಾಲ್ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ (MSDC) ವತಿಯಿಂದ “ಫಾರ್ಮಾ ವೃತ್ತಿಪರರಿಗೆ ಜನರೇಟಿವ್ ಎಐ” ವಿಷಯದ ಮೇಲೆ ಒಂದು ದಿನದ ವಿಶೇಷ ಕಾರ್ಯಾಗಾರವನ್ನು ಫೆ. 21 ರಂದು ಆಯೋಜಿಸಲಾಗಿದೆ. ಆರು ಗಂಟೆಗಳ ಈ ಕಾರ್ಯಕ್ರಮವು ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ವೃತ್ತಿಪರರಿಗೆ ಔಷಧೋದ್ಯಮದಲ್ಲಿ ಜನರೇಟಿವ್ ಎಐ ಅನ್ವಯಿಕೆಗಳ ಕುರಿತು ಪರಿಚಯ ಮತ್ತು ಪ್ರಾಯೋಗಿಕ ಅರಿವು ನೀಡುವ ಉದ್ದೇಶ ಹೊಂದಿದೆ. ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಫಾರ್ಮಾ ಕ್ಷೇತ್ರದಲ್ಲಿ ಜನರೇಟಿವ್ ಎಐಯ ಮೂಲಭೂತ ಅಂಶಗಳು, ಉದ್ಯಮದಲ್ಲಿನ GenAI ಆಧಾರಿತ ಉದ್ಯೋಗಾವಕಾಶಗಳು ಹಾಗೂ […]

ಉಡುಪಿ ನಗರಸಭೆ ಆಸ್ತಿತೆರಿಗೆ ಪಾವತಿ ವೇಳೆ ಬ್ಯಾಂಕ್ ಸೀಲ್ ದುರ್ಬಳಕೆ ಮಾಡಿ ವಂಚನೆ: ಮಹಿಳೆ ಸಹಿತ ಇಬ್ಬರ ಬಂಧನ

ಉಡುಪಿ: ನಗರಸಭೆಯ ಆಸ್ತಿ ತೆರಿಗೆ ಪಾವತಿ ಪ್ರಕ್ರಿಯೆಯಲ್ಲಿ ನಕಲಿ ಸೀಲ್ ಬಳಸಿ ವಂಚನೆ ಎಸಗಿರುವ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಮಹಿಳೆ ಸಹಿತ ಇಬ್ಬರು ಆರೋಪಿಗಳನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ. ಉಡುಪಿಯ 76 ಬಡಗುಬೆಟ್ಟು ಕಸ್ತೂರ್ಬಾನಗರದ ನಿವಾಸಿ ಸುಪೇಶ್ (25) ಹಾಗೂ ಮೂಡುಅಲೆವೂರಿನ ಕುಂತಲನಗರ ನಿವಾಸಿ ಶಾಂತಾ (43) ಬಂಧಿತ ಆರೋಪಿಗಳು. ಈ ಇಬ್ಬರನ್ನು ಉಡುಪಿ ಕೃಷ್ಣಮಠದ ರಾಜಾಂಗಣ ಬಳಿ ವಶಕ್ಕೆ ಪಡೆದು, ಅವರಿಂದ ವಂಚನೆಗೆ ಬಳಸಿದ ಸೀಲ್ ಮತ್ತು ದಾಖಲೆ ಪತ್ರದ ಸೊತ್ತುಗಳನ್ನು ಸ್ವಾಧಿನಪಡಿಸಿಕೊಳ್ಳಲಾಗಿದೆ. ಘಟನೆ ವಿವರ:ನಗರಸಭೆ […]

ಉಡುಪಿಯ ಹೀರೋ ಶಕ್ತಿ ಮೋಟರ್ಸ್‌ನಲ್ಲಿ ಉದ್ಯೋಗಾವಕಾಶ

ಉಡುಪಿ:ಉಡುಪಿಯ ಹೀರೋ ಶಕ್ತಿ ಮೋಟರ್ಸ್‌ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಖಾಲಿ ಇರುವ ಹುದ್ದೆಗಳು : ◾ಪಿಡಿಐ ಇನ್‌ಚಾರ್ಜ್ – 01◾ಅಡ್ವೈಸರ್ – 02◾ಆಫೀಸ್ ಬಾಯ್ – 01◾ಸೇಲ್ಸ್ ಎಕ್ಸಿಕ್ಯೂಟಿವ್ – 01 ಆಸಕ್ತ ಅಭ್ಯರ್ಥಿಗಳು ತಮ್ಮ ರೆಸ್ಯೂಮ್ ಅನ್ನು📧 [email protected] ಗೆ ಕಳುಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:📞 +91 7996210666

ಉಡುಪಿ:ಫೆ.19 ರಂದು ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯೋತ್ಸವ -2026

ಉಡುಪಿ:ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇವರ ಸಹಯೋಗದೊಂದಿಗೆ ದಿನಾಂಕ 19/02/2026 ರಂದು ಗುರುವಾರ ಬೆಳಿಗ್ಗೆ 10.00 ಗಂಟೆಗೆ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯೋತ್ಸವ -2026 ಸರ್ಕಾರಿ ಬಾಲಕಿಯರ ಪ್ರೌಢಶಾಲಾ ಸಭಾಂಗಣ, ಡಯಟ್ ಪಕ್ಕಾ ಉಡುಪಿ ಇಲ್ಲಿ ನಡೆಯಲಿದೆ. ಮಾಹಿತಿಗಾಗಿ ಸಂಪರ್ಕಿಸಿ:ಛತ್ರಪತಿ ಶಿವಾಜಿ ವಿವಿದೊದ್ದೇಶ ಸಹಕಾರ ಸಂಘ ನಿ. ಉಡುಪಿ.📞0820-4295090, 9945624617