ಫೆ. 19 ರಿಂದ 21ರವರೆಗೆ ಮುನಿಯಾಲು ಏಕಪವಿತ್ರ ಶ್ರೀ ಮನ್ನಾಗಮಂಡಲ

ಉಡುಪಿ : ರೈತರು ಕಾರ್ಪೊರೇಟ್ ಸ್ಟ್ಯಾಂಡರ್ಡ್ ನಲ್ಲಿ ಬದುಕು ಮಾಡಬೇಕು. ರೈತರ ತ್ಯಾಗವನ್ನು ಗುರುತಿಸುವ ಉದ್ದೇಶದಿಂದ ರೈತಪೀಠ ಪ್ರಶಸ್ತಿಯನ್ನು ಸ್ಥಾಪಿಸಲಾಗಿದೆ. ನಾಗಮಂಡಲದ ಮೂಲಕ ಪ್ರಶಸ್ತಿ ಪ್ರಧಾನ ನಡೆಯಲಿದೆ. ಆ ಮೂಲಕ ರೈತರ ಸಮುದಾಯಕ್ಕೆ ವಿಶೇಷ ಮನ್ನಣೆ ನೀಡುವುದು ನಮ್ಮ ಮುಖ್ಯ ಉದ್ದೇಶ, ದೇಸಿ ಗೋವಿನ ತಳಿಗಳ ಅಭಿವೃದ್ಧಿ, ಸುಧಾರಿತ ಟೆಕ್ನಾಲಜಿ ಬಳಕೆ, ಯುವಜನರನ್ನು ಕೃಷಿಯತ್ತ ಒಲವು ಮೂಡಿಸುವ ಪ್ರಮುಖ ಉದ್ದೇಶದಿಂದ ನಾಗಮಂಡಲ ಮಾಡುತ್ತಿದ್ದೇವೆ ಎಂದು ಮುನಿಯಾಲು ಸಂಜೀವಿನಿ ಫಾರ್ಮ್‌ ಗೋಧಾಮದ ಪ್ರವರ್ತಕ ಜಿ. ರಾಮಕೃಷ್ಣ ಆಚಾರ್ ಹೇಳಿದರು. […]

ಉಡುಪಿ:ಮೊಗವೀರ ಯುವ ಸಂಘಟನೆ ಹೆಮ್ಮಾಡಿ ಘಟಕದ ನೂತನ ಪದಾಧಿಕಾರಿಗಳ ಪದಪ್ರದಾನ

ಉಡುಪಿ:ಸಂಘಟನೆಯ ಮೂಲಕ ಸಮಾಜದ ಏಳ್ಗೆ ಸಾಧ್ಯವಿದೆ. ಸ್ವಾಭಿಮಾನವನ್ನು ಯಾರಿಗೂ ಒತ್ತೆ ಇಡುವುದು ಬೇಡ. ಹೋಬಳಿಗಳೊಂದಿಗೆ ಉತ್ತಮ ಬಾಂಧವ್ಯ ಇರಿಸಿಕೊಂಡು ಸಮಾಜದ ಸಾಮಾಜಿಕ, ಶೈಕ್ಷಣಿಕ ಪ್ರಗತಿಯಲ್ಲಿ ಸಹಭಾಗಿಗಳೋಣ. ಯುವ ಸಂಘಟನಾ ಶಕ್ತಿಯ ಮೂಲಕ ಮತ್ತೊಮ್ಮೆ ಹೆಮ್ಮಾಡಿ ಘಟಕ ಬಲಿಷ್ಠ ಘಟಕವಾಗಿ ಮೂಡಿಬರಲಿ ಎಂದು ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕರಾದ ನಾಡೋಜ ಡಾ. ಜಿ.ಶಂಕರ್ ಹೇಳಿದರು. ಅವರು ಹೆಮ್ಮಾಡಿ ಮೀನುಗಾರರ ಪ್ರಾಥಮಿಕ ಮೀನುಗಾರರ ಸಹಕಾರ ಸಂಘದ ಮತ್ಸ್ಯಜ್ಯೋತಿ ಸಭಾಂಗಣದಲ್ಲಿ ನಡೆದ ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲೆ, ಹೆಮ್ಮಾಡಿ ಘಟಕದ […]

ಉಡುಪಿ:ಯಕ್ಷಗಾನ ಕಲಾಕ್ಷೇತ್ರ: 75 ನೇ ವಾರ್ಷಿಕೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ

ಉಡುಪಿ:ಗುಂಡಿಬೈಲು ಯಕ್ಷಗಾನ ಕಲಾಕ್ಷೇತ್ರ ದ 75 ನೇ ವಾರ್ಷಿಕೋತ್ಸವ, ನಿಟ್ಟೂರು ಭೋಜಪ್ಪ ಸುವರ್ಣ ಸ್ಮಾರಕ ಪ್ರಶಸ್ತಿ ಪ್ರದಾನ ಸಮಾರಂಭ,ಅಮೃತ ಮಹೋತ್ಸವ ಸಮಿತಿಯ ವಿಜ್ಞಾಪನಾ ಪತ್ರ ಬಿಡುಗಡೆ ಕಾರ್ಯಕ್ರಮ ಗುಂಡಿಬೈಲು ತಲ್ಲೂರು ಗಾರ್ಡನ್ ನಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿದ ಇಂದ್ರಾಳಿ ಜಯಕರ್ ಶೆಟ್ಟಿ  ಯವರು  ಉಡುಪಿ ಜಿಲ್ಲೆಯ ಇತಿಹಾಸದಲ್ಲಿ  ಅಮೃತ ಮಹೋತ್ಸವ ಕಂಡ ಏಕೈಕ ಹವ್ಯಾಸಿ ಯಕ್ಷಗಾನ ಸಂಘ ಕಲಾಕ್ಷೇತ್ರವಾಗಿದೆ.ನೂರಾರು ಕಲಾವಿದರನ್ನು ಕಲಾಸೇವೆಗೆ ತೊಡಗಿಸಿ ಕೊಳ್ಳುವಂತೆ ಮಾಡುವಲ್ಲಿ ಸಂಘದ ಪಾತ್ರ ಹಿರಿದಾಗಿದೆ ಎಂದು ಹೇಳಿದರು. ರಾಜ್ಯೋತ್ಸವ ಪುರಸ್ಕೃತ […]

ಉಡುಪಿ:“ಯುವ ಪ್ರಜ್ಞಾ -ಪಿಐಎಂ ನ ಯುವ ಧ್ವನಿ” ಅಡಿಯಲ್ಲಿ ಕೇಂದ್ರ ಬಜೆಟ್ 2026 ರ ಕುರಿತು ವಿದ್ಯಾರ್ಥಿ ಸಮಿತಿ ವಿಶ್ಲೇಷಣೆ

ಉಡುಪಿ:ಪೂರ್ಣಪ್ರಜ್ಞಾ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (ಪಿಐಎಂ) ಫೆಬ್ರವರಿ 6, 2026 ರಂದು ತನ್ನ ವಿದ್ಯಾರ್ಥಿ ವೇದಿಕೆಯಾದ “ಯುವ ಪ್ರಜ್ಞಾ – ಯುವ ಪಿಐಎಂ ಧ್ವನಿ” ಅಡಿಯಲ್ಲಿ ಕೇಂದ್ರ ಬಜೆಟ್ 2026 ರ ಕುರಿತು ವಿದ್ಯಾರ್ಥಿ ಸಮಿತಿ ವಿಶ್ಲೇಷಣೆಯನ್ನು ಆಯೋಜಿಸಿತು. ಪಿಐಎಂನ ಹಣಕಾಸು ವೇದಿಕೆಯು ನಡೆಸಿದ ಈ ಕಾರ್ಯಕ್ರಮವು ನಿರ್ವಹಣಾ ವಿದ್ಯಾರ್ಥಿಗಳಲ್ಲಿ ಆರ್ಥಿಕ ಅರಿವು ಮತ್ತು ವಿಶ್ಲೇಷಣಾತ್ಮಕ ಕೌಶಲ್ಯಗಳನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.ಪ್ರಾಚೀನ ಭಾರತದಿಂದ ಆಧುನಿಕ ಕಾಲದವರೆಗಿನ ಬಜೆಟ್ ಪರಿಕಲ್ಪನೆಯ ವಿಕಸನವನ್ನು ವಿವರಿಸಿದ ಮೇಘನಾ ಮತ್ತು ಪ್ರಜ್ಞಾ ಅವರ […]

ಶಿರ್ವ ಸಮೀಪ ಚಲಿಸುತ್ತಿದ್ದ ಕಾರಿಗೆ ಆಕಸ್ಮಿಕ ಬೆಂಕಿ: ಚಾಲಕನ ಸಮಯಪ್ರಜ್ಞೆಯಿಂದ ಐವರ ಪ್ರಾಣ ರಕ್ಷಣೆ

ಉಡುಪಿ: ಮಂಗಳೂರಿನಿಂದ ಶಿರ್ವದತ್ತ ಸಾಗುತ್ತಿದ್ದ ಮಾರುತಿ ಡಿಸೈರ್ ಕಾರೊಂದು ಸೋಮವಾರ ಮಧ್ಯರಾತ್ರಿ ಆಕಸ್ಮಿಕವಾಗಿ ರಸ್ತೆ ಮಧ್ಯದಲ್ಲೇ ಬೆಂಕಿಗಾಹುತಿಯಾದ ಘಟನೆ ನ್ಯಾರ್ಮ ಶ್ರೀ ಜಾರಂದಾಯ ದೈವಸ್ಥಾನದ ಸಮೀಪ ಸಂಭವಿಸಿದೆ. ಚಾಲಕನ ಸಮಯಪ್ರಜ್ಞೆಯಿಂದಾಗಿ ಕಾರಿನಲ್ಲಿದ್ದ ಐವರು ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಸೋಮವಾರ ತಡರಾತ್ರಿ ಮಂಗಳೂರಿನಿಂದ ಶಿರ್ವಕ್ಕೆ ಬರುತ್ತಿದ್ದ ಕಾರು ನ್ಯಾರ್ಮ ಪ್ರದೇಶವನ್ನು ತಲುಪುತ್ತಿದ್ದಂತೆ ಅದರ ಇಂಜಿನ್ ಭಾಗದಿಂದ ಹೊಗೆ ಹೊರಬರುತ್ತಿರುವುದು ಗಮನಕ್ಕೆ ಬಂದಿದೆ. ತಕ್ಷಣ ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಚಾಲಕ ಕಾರನ್ನು ರಸ್ತೆ ಬದಿಗೆ ನಿಲ್ಲಿಸಿ, ಕಾರಿನಲ್ಲಿದ್ದ ತನ್ನ ಕುಟುಂಬದ […]