ಫೆ. 19 ರಿಂದ 21ರವರೆಗೆ ಮುನಿಯಾಲು ಏಕಪವಿತ್ರ ಶ್ರೀ ಮನ್ನಾಗಮಂಡಲ

ಉಡುಪಿ : ರೈತರು ಕಾರ್ಪೊರೇಟ್ ಸ್ಟ್ಯಾಂಡರ್ಡ್ ನಲ್ಲಿ ಬದುಕು ಮಾಡಬೇಕು. ರೈತರ ತ್ಯಾಗವನ್ನು ಗುರುತಿಸುವ ಉದ್ದೇಶದಿಂದ ರೈತಪೀಠ ಪ್ರಶಸ್ತಿಯನ್ನು ಸ್ಥಾಪಿಸಲಾಗಿದೆ. ನಾಗಮಂಡಲದ ಮೂಲಕ ಪ್ರಶಸ್ತಿ ಪ್ರಧಾನ ನಡೆಯಲಿದೆ. ಆ ಮೂಲಕ ರೈತರ ಸಮುದಾಯಕ್ಕೆ ವಿಶೇಷ ಮನ್ನಣೆ ನೀಡುವುದು ನಮ್ಮ ಮುಖ್ಯ ಉದ್ದೇಶ, ದೇಸಿ ಗೋವಿನ ತಳಿಗಳ ಅಭಿವೃದ್ಧಿ, ಸುಧಾರಿತ ಟೆಕ್ನಾಲಜಿ ಬಳಕೆ, ಯುವಜನರನ್ನು ಕೃಷಿಯತ್ತ ಒಲವು ಮೂಡಿಸುವ ಪ್ರಮುಖ ಉದ್ದೇಶದಿಂದ ನಾಗಮಂಡಲ ಮಾಡುತ್ತಿದ್ದೇವೆ ಎಂದು ಮುನಿಯಾಲು ಸಂಜೀವಿನಿ ಫಾರ್ಮ್‌ ಗೋಧಾಮದ ಪ್ರವರ್ತಕ ಜಿ. ರಾಮಕೃಷ್ಣ ಆಚಾರ್ ಹೇಳಿದರು.

ಮುನಿಯಾಲು ಸಂಜೀವಿನಿ ಗೋಧಾಮದ ನಾಗಬನದಲ್ಲಿ‌ ಫೆಬ್ರವರಿ 19 ರಿಂದ 21 ರವರೆಗೆ ನಡೆಯಲಿರುವ ಏಕ ಪವಿತ್ರ ಶ್ರೀ ಮನ್ನಾಗಮಂಡಲದ ವಿಷಯದ ಕುರಿತು‌ ಆಯೋಜಿಸಿದ್ದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು.

ಮುನಿಯಾಲು ಶ್ರೀ ಮನ್ನಾಗಮಂಡಲ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಶೆಟ್ಟಿ ಕಾರ್ಕಳ ಮಾತನಾಡಿ, ಕೈಗಾರಿಕೊಧ್ಯಮಿ ಜಿ ರಾಮಕೃಷ್ಣ ಆಚಾರ್ ಅವರು ರೈತನಿಗೆ ವಿಶೇಷ ಗೌರವ ಸಿಗಬೇಕು, ಕೃಷಿಗೆ ಹೆಚ್ಚು ಪ್ರೋತ್ಸಾಹ ನೀಡಲು ವಿಶೇಷ ಪ್ರಯತ್ನ ಮಾಡುತ್ತಿದ್ದಾರೆ. ಕನಸಿನ ರೈತಪೀಠ ಪ್ರಶಸ್ತಿಯನ್ನು ನಾಗಮಂಡಲದ ಮೂಲಕ ಮಾಡಲು ಹೊರಟಿರುವುದು ಮಾದರಿ ಕಾರ್ಯ ಎಲ್ಲರೂ ಸಹಕಾರ ನೀಡಬೇಕೆಂದು.

ಸಮಿತಿಯ ಅಧ್ಯಕ್ಷ ದೇವಿಪ್ರಸಾದ ಶೆಟ್ಟಿ ಸಾಣೂರುಗುತ್ತು ಮಾತನಾಡಿ, ನಾಗಮಂಡಲದಲ್ಲಿ ಪ್ರಸಾದ ರೂಪದಲ್ಲಿ ಗಿಡ ಹಾಗೂ ಬೀಜದ ಉಂಡೆಯನ್ನು ನೀಡುವ ಯೋಚನೆ ಅತ್ಯಂತ ಶ್ರೇಷ್ಠ ಕಾರ್ಯ, ಯಾವುದೇ ಆಡಂಬರವಿಲ್ಲದೆ, ರೈತರು, ವಿದ್ಯಾರ್ಥಿಗಳನ್ನು, ಯುವಜನರನ್ನು ಕೃಷಿಯ ಬಗ್ಗೆ ಹೆಚ್ಚು ಆಸಕ್ತಿ ಮೂಡಿಸುವಂತೆ ನಾಗಮಂಡಲ ಪುಣ್ಯದ ಕಾರ್ಯ ನಡೆಯಲಿದೆ ಎಂದರು.

ಸಭೆಯಲ್ಲಿ ಸವಿತಾ ಆರ್‌ ಆಚಾರ್‌, ರಕ್ಷಿತ್ ಆಚಾರ್ ಇದ್ದರು.
ಕೊರಂಗ್ರಪಾಡಿ ವಿದ್ವಾನ್ ಕೆಪಿ ಕುಮಾರಗುರು ತಂತ್ರಿ ನೇತೃತ್ವದಲ್ಲಿ, ವಾಸುದೇವ ಭಟ್ ಅವರ ಸಹಯೋಗದೊಂದಿಗೆ ಪಾತ್ರಿಗಳಾದ ರಾಮಚಂದ್ರ ಕುಂಜಿತ್ತಾಯ ಹಾಗೂ ಗೋಳಿಯಂಗಡಿ ಸುಬ್ರಹ್ಮಣ್ಯ ವೈದ್ಯ ಅವರ ಮೇಳದೊಂದಿಗೆ ನಾಗಮಂಡಲ ನಡೆಯಲಿದೆ.

ಫೆಬ್ರವರಿ 19ರ ಗುರುವಾರ ಋತಿಜ್ವರ ಸ್ವಾಗತ, ಋತಿಗ್ವರಣ, ಫಲನ್ಯಾಸ-ಪ್ರಾರ್ಥನೆ, ಆದ್ಯಶುದ್ಧಿ- ಪುಣ್ಯಾಹ, ಮಾತೃಕಾಪೂಜನಮ್, ನಾಂದೀಸಮಾರಾಧನ್, ಸಪ್ತರ್ಷಿ ಪೂಜನಮ್, ಅರಣಿಮಥನ, ಬ್ರಹ್ಮ ಕೂರ್ಚ ಹೋಮ, 6 ಕಾಯಿ ಗಣಯಾಗ, ನವಗ್ರಹ ಯಾಗ, ಪ್ರತಿಸರಬಂಧಪೂರ್ವಕ ಕಂಕಣಬಂಧನ, ಶ್ರೀಮದ್ ಭಾಗವತ ಪಾರಾಯಣರಂಭ, ಉಗ್ರಾಣ ಮುಹೂರ್ತ, ಅನ್ನರಾಧನ ಉಗ್ರಾಣ ಮುಹೂರ್ತ, ಅಂಕೂರ ಪೂಜೆ, ಸಪ್ತಶುದ್ಧಿ, ಭೂ ಶುದ್ದಿ, ವಾಸ್ತು ವಿದ್ಯಾ ಕಲಪ, ರಾಕ್ಷೋಘ್ನಸೂಕ್ತಯಾಗ, ಪ್ರಕಾರ ಬಲಿ ನಡೆಯಲಿದೆ.

20 ರ ಶುಕ್ರವಾರ ಮೃತ್ಯುಂಜಯ ಹೋಮ, ಕೂಷ್ಮಂಡಯಾಗ, ಭೂತನಾಥ ಪ್ರಿತೀಕರ ಪ್ರತ್ಯಕ್ಷ ಅಶ್ವಪೂಜಾ, ಪ್ರಸನ್ನ ಪೂಜೆ, ಸಾನ್ನಿಧ್ಯಾರ್ಥ ನೂರುಂಪಾಲುಮ್, ಚಕ್ರಬ್ಜಮಂಡಲ ಪೂಜಾ, ಭದ್ರಕಮಂಡಲ ಪೂಜೆ ನಡೆಯಲಿದೆ.

ಫೆಬ್ರವರಿ 21ರ ಶನಿವಾರ ಆಶ್ಲೇಷ ಬಲಿದಾನ, ಪಂಚ ವಿಂಶತಿ ದ್ರವ್ಯ ಮಿಳಿತ ಕಲಶ, ಪ್ರಧಾನಯಾಗ, ಸರ್ಪತ್ರಯ ಮಂತ್ರ ಯಾಗ, ಪವಮಾನ ಸೂಕ್ತಯಾಗ, ತಿಲಯಾಗ, ಬ್ರಹ್ಮಚಾರಿ ಆರಾಧನೆ, ಪ್ರಸನ್ನ ಪೂಜೆ, ಪಲ್ಲಪೂಜೆ, ಅನ್ನರಾದನೆ, ದುರ್ಗ ನಮಸ್ಕಾರ, ಹಾಲಿಟ್ಟು ಸೇವೆ, ಏಕ ಪವಿತ್ರ ಶ್ರೀಮನ್ನಾ ನಾಗಮಂಡಲ ಸೇವೆ, ಅನುಗ್ರಹ ವಾಕ್ಯ ಪ್ರಧಾನ, ಪ್ರಸಾದ ವಿತರಣೆ, ಪ್ರಸನ್ನ -ಉತ್ತರ ಪೂಜೆ, ಮಹಾ ಅನ್ನಸಂತರ್ಪಣೆ ಜರುಗಲಿದೆ.