ಕೊರಿಯಾ ದೇಶದ ಗೇಮಿಂಗ್ ಆ್ಯಪ್ ಟಾಸ್ಕ್ ಪೂರೈಸಲು ಹೋಗಿ ಮೂವರು ಹೆಣ್ಣು ಮಕ್ಕಳು ಆತ್ಮಹತ್ಯೆ!

ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿ ಮೂವರು ಹೆಣ್ಣು ಮಕ್ಕಳು, ಕೊರಿಯಾ ದೇಶದ ಗೇಮಿಂಗ್ ಆ್ಯಪ್‌ಗೆ ಅಡಿಕ್ಟ್ ಆಗಿ ಗೇಮ್ ಗಳನ್ನು ಆಡುತ್ತಿದ್ದರು. ಟಾಸ್ಕ್ ಪೂರೈಸುವಾಗಲೇ ಅಪಾರ್ಟ್ ಮೆಂಟ್ ನಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಮತ್ತೊಂದು ಬ್ಲೂವೇಲ್ ಗೇಮ್ಸ್ ಇದ್ದಂತೆ. ಕ್ಷಮಿಸಿ ಅಪ್ಪಾ. ನನಗೆ ತುಂಬಾ ಒಂಟಿತನ ಅನಿಸುತ್ತಿದೆ – ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿರುವ ತಮ್ಮ ವಸತಿ ಕಟ್ಟಡದ ಒಂಬತ್ತನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಮೂವರು ಸಹೋದರಿಯರ ಕೊನೆಯ ಮಾತುಗಳು ಇವು. ಬುಧವಾರ ಬೆಳಗಿನ ಜಾವ […]

ಹಂಪಿಗೆ ಪ್ರವಾಸಕ್ಕೆ ಬಂದಿದ್ದ ಕೇರಳ ವಿದ್ಯಾರ್ಥಿಗಳ ಬಸ್ ಪಲ್ಟಿ: ಮೂವರು ವಿದ್ಯಾರ್ಥಿಗಳು, ಶಿಕ್ಷಕಿಗೆ ಗಾಯ

ಬಳ್ಳಾರಿ: ಕೇರಳದಿಂದ ಹಂಪಿಗೆ ಬರುತ್ತಿದ್ದ ವಿದ್ಯಾರ್ಥಿಗಳಿದ್ದ ಟೂರಿಸ್ಟ್ ಮಿನಿ ಬಸ್ ಪಲ್ಟಿಯಾಗಿ ಮೂವರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಅಮ್ಮನಕೇರಿ ಕ್ರಾಸ್ ಬಳಿ ಘಟನೆ ನಡೆದಿದೆ. ತ್ರಿಶೂರ್ ಜಿಲ್ಲೆಯ ಶ್ರೀಕೃಷ್ಣ ಕಾಲೇಜು ವಿದ್ಯಾರ್ಥಿಗಳಿದ್ದ ಮಿನಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬಸ್ ಪಲ್ಟಿಯಾಗಿ, 7 ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯವಾಗಿದ್ದರೆ  ಶಿಕ್ಷಕಿ ಡಾ.ರಶ್ಮಿ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಪ್ರಾಥಮಿಕ ಚಿಕಿತ್ಸೆ ಕೂಡಿಸಿ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ರವಾನೆ […]

ಉಡುಪಿ:ಪಾರ್ಟ್ ಟೈಮ್ ಉದ್ಯೋಗಾವಕಾಶ

ಉಡುಪಿ:ಉದ್ಯೋಗವನ್ನು ಹುಡುಕುತ್ತಿರುವವರಿಗೆ ಉತ್ತಮ ಉದ್ಯೋಗಾವಕಾಶ ಇದಾಗಿದೆ. ಪಾರ್ಟ್ ಟೈಮ್ ಹಾಗೂ ಫುಲ್ ಟೈಮ್ ಕೆಲಸ ಮಾಡಲು ಆಸಕ್ತರಾದ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. 30 ವರ್ಷ ಮೇಲ್ಪಟ್ಟವರು ಈ ಉದ್ಯೋಗಕ್ಕೆ ಅರ್ಹರು. SSLC, PUC ಅಥವಾ ಯಾವುದೇ ಪದವಿ ಹೊಂದಿರುವವರು ಅರ್ಜಿ ಸಲ್ಲಿಸಬಹುದು. ಈಗಾಗಲೇ ಉದ್ಯೋಗದಲ್ಲಿರುವವರು, ವ್ಯಾಪಾರಸ್ಥರು, ನಿವೃತ್ತರು ಹಾಗೂ ಯಾವುದೇ ವೃತ್ತಿಪರರು ಕೂಡ ಅರ್ಜಿ ಹಾಕಬಹುದು. 📧 ನಿಮ್ಮ CV ಕಳುಹಿಸಿ: [email protected]📞 ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 9845079798

ಉಡುಪಿ:ವಿಶ್ವ ಕ್ಯಾನ್ಸರ್ ದಿನ 2026: ಕ್ಯಾನ್ಸರ್ ಜಾಗೃತಿಗಾಗಿ ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲ ವತಿಯಿಂದ ಬೈಕ್ ರ್ಯಾಲಿ (ಜಾಥಾ)

ಮಣಿಪಾಲ:ಪ್ರತಿ ವರ್ಷ ಫೆಬ್ರವರಿ 4ರಂದು ಆಚರಿಸಲ್ಪಡುವ ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ, ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲವು, ಮಣಿಪಾಲ ಆಟೋ ಕ್ಲಬ್, ಉಡುಪಿ ಜಾವಾ–ಯೆಜ್ಡಿ ಮೋಟಾರ್‌ಸೈಕಲ್ ಕ್ಲಬ್, ರಾಯಲ್ ಎನ್‌ಫೀಲ್ಡ್ ರೈಡರ್ಸ್ ಉಡುಪಿ ಹಾಗೂ ಆಭರಣ ಮೋಟಾರ್ಸ್, ಉಡುಪಿ ಇವರ ಸಹಯೋಗದೊಂದಿಗೆ “ನಾವು ಒಟ್ಟಾಗಿ ಕ್ಯಾನ್ಸರ್ ವಿರುದ್ಧ ಜೀವನಕ್ಕಾಗಿ ಸವಾರಿ ಮಾಡುತ್ತೇವೆ” ಎಂಬ ದ್ಯೇಯದೊಂದಿಗೆ ಬೈಕ್ ರ್ಯಾಲಿಯನ್ನು ಆಯೋಜಿಸಿತು. ಈ ಕಾರ್ಯಕ್ರಮದ ಉದ್ದೇಶ ಕ್ಯಾನ್ಸರ್ ತಡೆಗಟ್ಟುವಿಕೆ, ಆರಂಭಿಕ ಪತ್ತೆ ಹಾಗೂ ಕ್ಯಾನ್ಸರ್ ವಿರುದ್ಧ ಹೋರಾಟದಲ್ಲಿ ಸಾರ್ವಜನಿಕರ ಒಗ್ಗಟ್ಟಿನ ಮಹತ್ವದ […]

ಬೆಳ್ತಂಗಡಿ: ಯುವತಿ ನಾಪತ್ತೆ

ಉಪ್ಪಿನಂಗಡಿ: ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳ್ತಂಗಡಿ ತಾಲೂಕು ಉರುವಾಲು ಗ್ರಾಮದ ಮಜಿಕುಡೇಲು ಎಂಬಲ್ಲಿನ ನಿವಾಸಿ ಸುಪ್ರೀತಾ(20) ಎಂಬಾಕೆ ಮಂಗಳವಾರ ನಸುಕಿನಿಂದ ನಾಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ನಿಡಲಾಗಿದೆ. ದಿವಂಗತ ಶೀನಪ್ಪ ಎಂಬವರ ಮಗಳಾಗಿರುವ ಈಕೆ ಸೋಮವಾರ ರಾತ್ರಿ ಎಂದಿನಂತೆ ಮಲಗಿದ್ದವಳು ಮಂಗಳವಾರ ನಸುಕಿನ ವೇಳೆ ಕಾಣಿಸದೇ ಇದ್ದು, ಮೊಬೈಲ್ ಫೋನ್ ಕರೆಯೂ ಸ್ವೀಕರಿಸಿರಲಿಲ್ಲ. ಬಳಿಕ ಆಕೆಯ ಮೊಬೈಲ್ ಸ್ವಿಚ್ ಆಫ್ ಆಗಿದೆ ಎಂದು ಆಕೆಯ ತಾಯಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಹತ್ತನೇ ತರಗತಿಯ ವರೆಗೆ […]