ಹೆಬ್ರಿಯ ಎಸ್.ಆರ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಕುವೆಂಪು ದಿನಾಚರಣೆ.

ಹೆಬ್ರಿ: ಹೆಬ್ರಿಯ ಎಸ್.ಆರ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಎಸ್.ಆರ್. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರಶಾಂತ್, ಎಸ್.ಆರ್ ಪಬ್ಲಿಕ್ ಸ್ಕೂಲಿನ ಪ್ರಾಂಶುಪಾಲರಾದ ಭಗವತಿ, ಉಪ ಪ್ರಾಂಶುಪಾಲರಾದ ದೀಪಕ್ ಎನ್, ಎಸ್.ಆರ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಗೋಪಾಲ ಆಚಾರ್ಯ ಹಾಗೂ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕನ್ನಡ ಶಿಕ್ಷಕ ನಾಗೇಶ್ ಅವರು ನಿರ್ವಹಿಸಿದರು.
ಇಂದೋರ್ ಕಲುಷಿತ ನೀರು ಸೇವಿಸಿದ ಮಗು ಮೃತ್ಯು!

ಭೋಪಾಲ್: ಮಧ್ಯ ಪ್ರದೇಶ (Madhya Pradesh)ದ ಇಂದೋರ್(Indore)ನ ಭಗೀರಥಪುರ (Bhagirathpura) ಪ್ರದೇಶದಲ್ಲಿ ಕುಡಿಯುವ ನೀರಿಗೆ ಚರಂಡಿ ನೀರು ಮಿಶ್ರಣವಾಗಿ ಜನರ ಜೀವಕ್ಕೆ ಕಂಟಕವಾಗಿ ಬದಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 6 ತಿಂಗಳ ಹಸುಗೂಸೊಂದು ಬಲಿಯಾಗಿದೆ. ಈ ದುರಂತದ ಬಳಿಕ ನಗರಪಾಲಿಕೆ ನಿರಂತರ ನಿರ್ಲಕ್ಷ್ಯದ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೃತ ಮಗುವಿನ ತಾಯಿ ಸಾಧನಾ ಸಾಹು ಅವರ ಪ್ರಕಾರ, “ಹಾಲಿಗೆ ಮನೆಯ ನೀರನ್ನು ಮಿಶ್ರಣ ಮಾಡಿ ಮಗುವಿಗೆ ಕುಡಿಸಿದ ಬಳಿಕ ತೀವ್ರ ವಾಂತಿ, ಅತಿಸಾರ ಕಾಣಿಸಿಕೊಂಡಿತು. ಕೂಡಲೇ […]
ಮತ್ತೆ ಬರಲಿದೆ “ದಿ ಕೇರಳ ಸ್ಟೋರಿ-2”: ಸಿನಿಮಾ ಫೆಬ್ರವರಿಯಲ್ಲಿ ಬಿಡುಗಡೆ!

ಮುಂಬೈ:ವಿವಾದಗಳ ನಡುವೆಯೂ ಭಾರಿ ಸಂಚಲನ ಮೂಡಿಸಿದ್ದ ದಿ ಕೇರಳ ಸ್ಟೋರಿ ಚಿತ್ರದ ಸಿಕ್ವೇಲ್ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ದಿ ಕೇರಳ ಸ್ಟೋರಿ 2 ಚಿತ್ರೀಕರಣ ಪೂರ್ಣಗೊಂಡಿದ್ದ ಹೊಸ ವರ್ಷದ ಆರಂಭದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಲವ್ ಜಿಹಾದ್ ಕುರಿತ ಈ ಚಿತ್ರ ಹೆಚ್ಚು ಗಂಭೀರ ಹಾಗೂ ಕರಾಳ ಕಥೆಯನ್ನು ಹೊಂದಿದೆ. ಚಿತ್ರೀಕರಣದ ವೇಳೆ ಸಂಪೂರ್ಣ ಗುಪ್ತತೆ ಕಾಪಾಡಕೊಳ್ಳಲಾಗಿತ್ತು ಎನ್ನುವುದು ಚಿತ್ರ ಬಿಡುಗಡೆಯ ಕುತೂಹಲಕ್ಕೆ ಕಾರಣವಾಗಿದೆ. ದಿ ಕೇರಳ ಸ್ಟೋರಿ ಸಿನಿಮಾದಿಂದ ಒಂದು ಭಯಾನಕ ವಾಸ್ತವ ಬೆಳಕಿಗೆ ಬಂದಿತ್ತು. 2023ರಲ್ಲಿ […]
ಎಚ್ 1ಬಿ ವೀಸಾ ನವೀಕರಣ ವಿಳಂಬ: ಅಮೆಜಾನ್ ನೌಕರರಿಗೆ ಭಾರತದಿಂದಲೇ ಕೆಲಸ ಮಾಡಲು ಅವಕಾಶ!

ವಾಷಿಂಗ್ಟನ್: ಇತ್ತೀಚೆಗೆ ಎಚ್ 1ಬಿ ವೀಸಾ ಅರ್ಜಿಯ ನವೀಕರಣದಲ್ಲಿ ವಿಳಂಬವಾಗುತ್ತಿದ್ದು, ಭಾರತೀಯರು ನೌಕರರು ಅಮೆರಿಕಕ್ಕೆ ತರೆಳದೇ ಅತಂತ್ರದಲ್ಲಿ ಸ್ಥಿತಿಯಲ್ಲಿದ್ದಾರೆ. ಈ ನಡುವೆ ವೀಸಾ ನವೀಕರಣವಾಗದ ತನ್ನ ನೌಕರರಿಗೆ ಭಾರತದಿಂದಲೇ ಕೆಲಸ ಮಾಡಲು ಅಮೆಜಾನ್ ತಾತ್ಕಾಲಿಕವಾಗಿ ಅವಕಾಶ ನೀಡಿದೆ.ಮಾ.2ರ ವರೆಗೆ ಭಾರತದಲ್ಲಿ ಇದ್ದುಕೊಂಡು ಕೆಲಸ ಮಾಡಲು ಸೂಚನೆ ನೀಡಿ ಆದೇಶ ಹೊರಡಿಸಿದೆ. ಕೋಡಿಂಗ್ ಮಾಡಲು, ಕಾರ್ಯತಂತ್ರಗಳನ್ನು ರೂಪಿಸಲು ಹಾಗೂ ಗ್ರಾಹಕರೊಂದಿಗೆ ಸಂವಹನ ನಡೆಸುವುದನ್ನು ಒಪ್ಪಂದ ಮಾಡಿಕೊಳ್ಳುವುದನ್ನು ಕಂಪನಿ ನಿರ್ಬಂಧಿಸಿದೆ. ವೀಸಾ ಅರ್ಜಿದಾರರ ಸಾಮಾಜಿಕ ಜಾಲತಾಣವನ್ನು ಪರಿಶೀಲಿಸುವ ಕ್ರಮದಡಿ, ಡಿಸೆಂಬರ್ […]
ಉಡುಪಿ:ಗಾಂಧಿ ಆಸ್ಪತ್ರೆಯಲ್ಲಿ ಕಾಗದರಹಿತ ಒಳರೋಗಿ ಡಿಜಿಟಲ್ ದಾಖಲೆ ವ್ಯವಸ್ಥೆಯ ಉದ್ಘಾಟನೆ

ಉಡುಪಿ:ನಗರದ ಗಾಂಧಿ ಆಸ್ಪತ್ರೆಯಲ್ಲಿ ಕಾಗದರಹಿತ ಒಳರೋಗಿ ಡಿಜಿಟಲ್ ದಾಖಲೆ ನಿರ್ವಹಣಾ ವ್ಯವಸ್ಥೆಯನ್ನು ಶ್ರೀ ರಾಘವೇಂದ್ರ ಮಠದ ಪೂಜ್ಯರಾದ ಶ್ರೀ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿಗಳು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಪೂಜ್ಯ ಸ್ವಾಮೀಜಿಗಳು, ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸುವ ಮೂಲಕ ಪ್ರಕೃತಿಯ ಸಂರಕ್ಷಣೆ ಸಾಧ್ಯ ಎಂದು ತಿಳಿಸಿದರು. ಕಾಗದ ಬಳಕೆಯನ್ನು ಕಡಿಮೆ ಮಾಡುವ ಮೂಲಕ ಪರಿಸರ ರಕ್ಷಣೆಗೂ ಸಹಕಾರ ದೊರೆಯುತ್ತದೆ ಎಂದು ಹೇಳಿ, ಇಂತಹ ಐತಿಹಾಸಿಕ ಹಾಗೂ ದೂರದೃಷ್ಟಿಯ ನಿರ್ಧಾರವನ್ನು ಕೈಗೊಂಡಿರುವ ಗಾಂಧಿ ಆಸ್ಪತ್ರೆಯನ್ನು ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ಗಾಂಧಿ […]