ಉಡುಪಿ: ಅನಾರೋಗ್ಯದಿಂದ ವಿದ್ಯಾರ್ಥಿ ಮೃತ್ಯು

ಉಡುಪಿ: ಅಸೌಖ್ಯಕ್ಕೊಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಸಾಲಿಗ್ರಾಮ ನಿವಾಸಿ ವಾಸುದೇವ ಭಟ್ ಅವರ ಪುತ್ರ ವಿವೇಕ್ ಭಟ್ (20) ಚಿಕಿತ್ಸೆ ಫಲಿಸದೆ ಡಿ. 14ರಂದು ಕೊನೆಯುಸಿರೆಳೆದಿದ್ದಾರೆ. ಬ್ರಹ್ಮಾವರದ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಪದವಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಅವರು ಕೆಲವು ತಿಂಗಳ ಹಿಂದೆ ಅನಾರೋಗ್ಯಕ್ಕೊಳಗಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದ. ಓದಿನ ಜತೆಗೆ ಚಿತ್ರಕಲೆ, ಮರಳುಶಿಲ್ಪ ರಚನೆ ಮೊದಲಾದ ಕಲೆಗಳಲ್ಲಿ ಹೆಸರುವಾಸಿಯಾಗಿದ್ದರು. ತಂದೆ ಎಲೆಕ್ನಿಷಿಯನ್ ಆಗಿದ್ದಾರೆ. ವಿವೇಕ ಹೆತ್ತವರ ಏಕೈಕ ಪುತ್ರ.

ಉಡುಪಿ ಬಲ್ಲಾಳ್ ಮೊಬೈಲ್ಸ್’ನಲ್ಲಿ ಬೊಂಬಾಟ್ ಆಫರ್ ಗಳ ಹಬ್ಬ: ಒಂದೊಳ್ಳೆ ಶಾಪಿಂಗ್ ಅನುಭವವನ್ನು ಮಿಸ್ ಮಾಡ್ಕೊಬೇಡಿ.!

ಉಡುಪಿ: ಕಲ್ಪನಾ ಚಿತ್ರಮಂದಿರ ಬಳಿಯ ಒರಾಯನ್ ಕಟ್ಟಡದಲ್ಲಿರುವ ಹೆಸರಾಂತ “ಬಲ್ಲಾಳ್ ಮೊಬೈಲ್ಸ್” ಶೋರೂಮ್‌ನಲ್ಲಿ ಗ್ರಾಹಕರಿಗಾಗಿ ಭರ್ಜರಿ ಆಫರ್‌ಗಳನ್ನು ಲಾಂಚ್ ಮಾಡಲಾಗಿದೆ. ಇಲ್ಲಿಗೆ ಭೇಟಿ ನೀಡುವ ಮೂಲಕ ನಿಮ್ಮ ಹಬ್ಬದ ಸಂತೋಷವನ್ನು ಶಾಪಿಂಗ್‌ ಮೂಲಕ ಮತ್ತಷ್ಟು ಹೆಚ್ಚಿಸಿಕೊಳ್ಳಬಹುದು. ಎಕ್ಸ್ಚೇಂಜ್ ಆಫರ್: ತಮ್ಮ ಹಳೆಯ ಸ್ಮಾರ್ಟ್‌ಫೋನ್‌ನ್ನು ಉತ್ತಮ ಮಾದರಿಯ ಹೊಸ ಫೋನ್‌ಗೆ ಅಪ್ಗ್ರೇಡ್ ಮಾಡಲು ಬಲ್ಲಾಳ್ ಮೊಬೈಲ್ಸ್ ವಿಶೇಷ ಎಕ್ಸ್ಚೇಂಜ್ ಆಫರ್ ನೀಡುತ್ತಿದೆ. ನಿಮಗೆ ಇಷ್ಟವಾದ ಬ್ರ್ಯಾಂಡ್‌ಗಳ ಹೊಸ ಫೋನ್‌ಗಳನ್ನು ಆಕರ್ಷಕ ದರದಲ್ಲಿ ಪಡೆಯಬಹುದು. “ದಿ ಗ್ರೇಟ್ ಫೆಸ್ಟಿವಲ್ ಸೇಲ್ಸ್” […]

ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಿಸಲು ಈ 5 ‘ಸೂಪರ್ ಫುಡ್’ ಸಹಕಾರಿ

ಹೃದಯ ಆರೋಗ್ಯ ವಿಶ್ವಾದ್ಯಂತ ಅದರಲ್ಲೂ ಮುಖ್ಯವಾಗಿ ಭಾರತದಲ್ಲಿ ಜನತೆಗೆ ಅತ್ಯಂತ ಕಳವಳ ಹುಟ್ಟಿಸಿರುವ ಅಂಶ. ಉತ್ತಮ ಜೀವನ ಸಾಗಿಸುವ ಹುಡುಕಾಟದಲ್ಲಿ ಹಲವು ಮಂದಿ ‘ಸೂಪರ್ ಫುಡ್’ ಅಂಶವನ್ನು ತಮ್ಮ ಊಟದಲ್ಲಿ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಲೇ ಇದ್ದಾರೆ. ಸಾಮಾನ್ಯವಾಗಿ ಗುಡ್ ಕೊಲೆಸ್ಟ್ರಾಲ್ ಎಂದು ಕರೆಸಿಕೊಳ್ಳುವ ಅಧಿಕ ಸಾಂದ್ರತೆಯ ಲಿಪೊಪ್ರೊಟೀನ್, ದೇಹದ ಆರೋಗ್ಯ ಸುಸ್ಥಿರವಾಗಿರಲು ಗಣನೀಯ ಕೊಡುಗೆ ನೀಡುತ್ತದೆ. ಹೈದರಾಬಾದ್‍ನ ಯಶೋಧಾ ಆಸ್ಪತ್ರೆಯ ಹಿರಿಯ ಹೃದ್ರೋಗ ತಜ್ಞ ಡಾ.ವಿ.ರಾಜಶೇಖರ್ ಅವರ ಪ್ರಕಾರ, “ಎಚ್‍ಡಿಎಲ್ ಪದರ ಕ್ರೋಢೀಕರಣವು, ಅಧಿಕ ಕೊಲೆಸ್ಟ್ರಾಲ್ […]

ಉಡುಪಿ:ಜಿಲ್ಲಾ ಮಟ್ಟದ ಸಿರಿಧಾನ್ಯ ಮತ್ತು ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆ

ಉಡುಪಿ: ಕೃಷಿ ಇಲಾಖೆಯ ವತಿಯಿಂದ ಸಿರಿಧಾನ್ಯ ಮತ್ತು ಸಾವಯವ ಅಂತರರಾಷ್ಟ್ರೀಯ ವಾಣಿಜ್ಯ ಮೇಳ – 2026 ರ ಅಂಗವಾಗಿ ರಾಜ್ಯ ಮಟ್ಟದ ಸಿರಿಧಾನ್ಯ ಮತ್ತು ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆಯ ಪೂರ್ವಭಾವಿಯಾಗಿ ಜಿಲ್ಲಾ ಮಟ್ಟದಲ್ಲಿ “ಸಿರಿಧಾನ್ಯ ಮತ್ತು ಮರೆತು ಹೋದ ಖಾದ್ಯಗಳ ಪಾಕಸ್ಪರ್ಧೆ” ಯು ಡಿಸೆಂಬರ್ 23 ರಂದು ಬೆಳಗ್ಗೆ 11 ಗಂಟೆಗೆ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿಗಳ ಕಛೇರಿ ಸಂಕೀರ್ಣದಲ್ಲಿ ಆಯೋಜಿಸಲಾಗಿದೆ. ಸದರಿ ಸ್ಪರ್ಧೆಯಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳು/ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳನ್ನು ಹೊರತುಪಡಿಸಿ, ಜಿಲ್ಲೆಯ […]

ಉಡುಪಿ:ಕಟಪಾಡಿ ಓವರ್ ಪಾಸ್ ಕಾಮಗಾರಿ ಹಿನ್ನೆಲೆ, ವಾಹನಗಳ ಸುಗಮ ಸಂಚಾರಕ್ಕೆ ಮಾರ್ಗ ಕಲ್ಪಿಸಿ : ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ

ಉಡುಪಿ:ರಾಷ್ಟ್ರೀಯ ಹೆದ್ದಾರಿ 66 ರ ಕಟಪಾಡಿಯಲ್ಲಿ ವೆಹಿಕಲ್ ಓವರ್ ಪಾಸ್ ಕಾಮಗಾರಿ ಕೈಗೊಂಡಿದ್ದು, ಈ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಗೆ ಬದಲಿ ಮಾರ್ಗಗಳಲ್ಲಿ ಸುಗಮ ಹಾಗೂ ಸುರಕ್ಷತೆಯಿಂದ ಸಂಚರಿಸಲು ಅನುವುಮಾಡಿಕೊಡಬೇಕೆಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಸೂಚನೆ ನೀಡಿದರು. ಅವರು ಸೋಮವಾರ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹೆದ್ದಾರಿ 66 ರ ಕಟಪಾಡಿ ಜಂಕ್ಷನ್‌ನಲ್ಲಿ ರೋಡ್ ಓವರ್ ಬ್ರಿಡ್ಜ್ ನಿರ್ಮಾಣ ಕಾಮಗಾರಿ ಕುರಿತು ಚರ್ಚಿಸಲು ಆಯೋಜಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಕಟಪಾಡಿ […]