ಉಡುಪಿ: ಅಸೌಖ್ಯಕ್ಕೊಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಸಾಲಿಗ್ರಾಮ ನಿವಾಸಿ ವಾಸುದೇವ ಭಟ್ ಅವರ ಪುತ್ರ ವಿವೇಕ್ ಭಟ್ (20) ಚಿಕಿತ್ಸೆ ಫಲಿಸದೆ ಡಿ. 14ರಂದು ಕೊನೆಯುಸಿರೆಳೆದಿದ್ದಾರೆ.
ಬ್ರಹ್ಮಾವರದ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಪದವಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಅವರು ಕೆಲವು ತಿಂಗಳ ಹಿಂದೆ ಅನಾರೋಗ್ಯಕ್ಕೊಳಗಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದ. ಓದಿನ ಜತೆಗೆ ಚಿತ್ರಕಲೆ, ಮರಳುಶಿಲ್ಪ ರಚನೆ ಮೊದಲಾದ ಕಲೆಗಳಲ್ಲಿ ಹೆಸರುವಾಸಿಯಾಗಿದ್ದರು. ತಂದೆ ಎಲೆಕ್ನಿಷಿಯನ್ ಆಗಿದ್ದಾರೆ. ವಿವೇಕ ಹೆತ್ತವರ ಏಕೈಕ ಪುತ್ರ.

















