ಉಡುಪಿ : ಡಿಸೆಂಬರ್ 10ರಂದು ವೈಕುಂಠ ಬಾಳಿಗ ಕಾನೂನು ಕಾಲೇಜ್ ನಲ್ಲಿ ವಿಶ್ವ ಮಾನವ ಹಕ್ಕು ದಿನಾಚರಣೆ

ಉದ್ಘಾಟಿಸಿ ಮಾತನಾಡಿದ ಹ್ಯೂಮನ್ ರೈಟ್ಸ್ ಫೆಡರೇಶನ್ ಆಫ್ ಇಂಡಿಯಾ ಉಡುಪಿ ವಿಭಾಗೀಯ ಅಧ್ಯಕ್ಷ ಶ್ರೀ ಉದಯ್ ನಾಯ್ಕ್, ಪ್ರತಿಯೊಬ್ಬರೂ ಬದುಕಿನಲ್ಲಿ ಮಾನವೀಯ ಮೌಲ್ಯ ಅಳವಡಿಸಿಕೊಂಡರೆ, ಮಾನವ ಹಕ್ಕುಗಳ ಉಲ್ಲಂಘನೆ ಸಮಸ್ಯೆ ಎದುರಾಗುವುದಿಲ್ಲ. ಘನತೆ, ಸಮಾನತೆ, ಮಾನವ ಹಕ್ಕುಗಳು ಬೆಲೆ, ಗೌರವ ಕೊಡುವ ಮನೋಭಾವ ಮಕ್ಕಳಲ್ಲಿ ಬೆಳೆಸಬೇಕು ಎಂದರು. ನ್ಯಾಷನಲ್ ಇನ್ಷೂರೆನ್ಸ್ ಕಂಪನಿ ನಿವ್ರತ್ತ ಹಿರಿಯ ವಿಭಾಗೀಯ ವ್ಯವಸ್ಥಾಪಕ ಶ್ರೀ ರಮೇಶ್ ನಾಯ್ಕ್.ಕೆ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ| ಸುರೇಖಾ ಕೆ. ಅಧ್ಯಕ್ಷತೆ ವಹಿಸಿ ಮಾನವ ಹಕ್ಕುಗಳನ್ನು ಸ್ವಯಂ […]
ಉಡುಪಿ:ವಿದ್ಯಾರ್ಥಿಗೆ ಶಿಕ್ಷೆ: ಪ್ರಾಂಶುಪಾಲರ ವಿರುದ್ಧ ಪ್ರಕರಣ ದಾಖಲು

ಉಡುಪಿ: ವಿದ್ಯಾರ್ಥಿಯೊಬ್ಬನನ್ನು ಮೂರು ತಾಸು ತರಗತಿಯ ಹೊರಗಡೆ ನಿಲ್ಲಿಸಿ ನೀರು ಕೊಡದೆ ಮಾನಸಿಕ ಹಿಂಸೆ ನೀಡಿರುವ ಕಾಲೇಜಿನ ಪ್ರಾಂಶುಪಾಲರ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಡುಪಿಯ ನಿಟ್ಟೂರಿನ ಸಿಲಾಸ್ ಪದವಿ ಪೂರ್ವ ಕಾಲೇಜಿನಲ್ಲಿ ನ.3ರಂದು ಬೆಳಗ್ಗೆ 17ರ ಹರೆಯದ ನೊಂದ ವಿದ್ಯಾರ್ಥಿ ತರಗತಿಯಲ್ಲಿ ಇರುವಾಗ ಯಾರೋ ವಿದ್ಯಾರ್ಥಿಗಳು ಸಿಡಿಮದ್ದನ್ನು ಸಿಡಿಸಿದ್ದರೆನ್ನಲಾಗಿದೆ. ತರಗತಿಯಲ್ಲಿ ಸಿಡಿಮದ್ದನ್ನು ಸಿಡಿಸಿದ್ದ ವಿದ್ಯಾರ್ಥಿಗಳು ಅವರ ತಪ್ಪನ್ನು ಕಾಲೇಜಿನ ಪ್ರಾಂಶುಪಾಲರ ಮುಂದೆ ಒಪ್ಪಿಕೊಂಡಿದ್ದರು. ಆದರೂ ಕೂಡ ಪ್ರಾಂಶುಪಾಲರು ಯಾವುದೇ ತಪ್ಪನ್ನು ಮಾಡದ […]
ಮೈಸೂರಿನಲ್ಲಿ ರಸ್ತೆ ಅಪಘಾತ: ಬೈಕ್’ಗೆ ವಾಹನ ಡಿಕ್ಕಿ – ಸುಳ್ಯದ ಯುವಕ ಮೃತ್ಯು.

ಸುಳ್ಯ: ಮೈಸೂರಿನ ಮಳವಳ್ಳಿಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸುಳ್ಯದ ಯುವಕ ಮೃತಪಟ್ಟ ಘಟನೆ ಶುಕ್ರವಾರ ಮುಂಜಾನೆ ನಡೆದಿದೆ. ಸುಳ್ಯ ಉಬರಡ್ಕ ಮಿತ್ತೂರು ಗ್ರಾಮದ ಕಲ್ಟಾರ್ ನಿವಾಸಿ ಶೇಷಪ್ಪನಾಯ್ಕ ಎಂಬವರ ಪುತ್ರ ದೀಕ್ಷಿತ್ (25) ಮೃತಪಟ್ಟ ವರು. ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಕೆಲಸಕ್ಕಿದ್ದ ದೀಕ್ಷಿತ್ ಬೆಂಗಳೂರಿನಿಂದ ಕಂದಡ್ಕದ ಕಲ್ಟಾರಿನ ತನ್ನ ಮನೆಗೆ ಬೈಕ್‌ನಲ್ಲಿ ಬರುತ್ತಿದ್ದ ವೇಳೆ ಮೈಸೂರು ಸಮೀಪದ ಮಳವಳ್ಳಿಯಲ್ಲಿ ಅಪರಿಚಿತ ವಾಹನವೊಂದು ಬೈಕ್‌ಗೆ ಢಿಕ್ಕಿ ಹೊಡೆದು ಪರಾರಿಯಾಗಿದೆ. ಘಟನೆಯಲ್ಲಿ ಗಂಭೀರ ಗಾಯಗೊಂಡ ದೀಕ್ಷಿತ್‌ರನ್ನು ಸ್ಥಳೀಯರು ಸಮೀಪದ ಆಸ್ಪತ್ರೆಗೆ […]
ಡಿ.14 ರಂದು ಕಾಳು ಮೆಣಸು ಅಡಿಕೆ ಕಾಫಿ ಬೆಳೆಗಾರರಮಾಹಿತಿ ಶಿಬಿರ ಮತ್ತು ಸಮಾವೇಶ

ಪುತ್ತೂರು: ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳ ಕಾಳು ಮೆಣಸು, ಅಡಿಕೆ ಮತ್ತು ಕಾಫಿ ಬೆಳೆಗಾರರ ಮಾಹಿತಿ ಶಿಬಿರ ಮತ್ತು ಸಮಾವೇಶವು ಡಿಸೆಂಬರ್ 14ರಂದು ಪುತ್ತೂರಿನ ದರ್ಬೆಯಲ್ಲಿರುವ ಸುಭದ್ರಾ ಸಭಾ ಮಂದಿರದಲ್ಲಿ ನಡೆಯಲಿದೆ. ಕಾಳುಮೆಣಸು ಕೊಯ್ಲು-ಸಂಸ್ಕರಣೆ, ಕಾಫಿ ಕೊಯ್ಲು- ಸಂಸ್ಕರಣೆ, ದೂಪದ ಗಿಡದಲ್ಲಿ ಕಾಳುಮೆಣಸು ಕೃಷಿ ಮತ್ತು ಅಡಿಕೆ ಎಲೆ ಚುಕ್ಕಿ ರೋಗ ಹತೋಟಿ ಮತ್ತು ನಿರ್ಮೂಲನೆ ಕುರಿತಂತೆ ತಜ್ಞರು ಮಾಹಿತಿ ನೀಡಲಿದ್ದಾರೆ.
ಕೀಳಂಜೆ: ತ್ರಿವರ್ಣ ವಿಶ್ವ ವೇದಿಕೆ, 12ನೇ ವಾರ್ಷಿಕೋತ್ಸವ

ಹೆಬ್ರಿ: ನಿರಂತರ ಸಮಾಜಮುಖಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡ ತ್ರಿವರ್ಣ ವಿಶ್ವ ವೇದಿಕೆಯ ಸ್ಥಾಪಕ ಅಧ್ಯಕ್ಷ ಸತೀಶ್ ಪೂಜಾರಿ ಅವರ ಜನಪರ ಕಾಳಜಿ ಶ್ಲಾಘನೀಯ ಎಂದು ಮಾಂಡವಿ ಬಿಲ್ಡರ್ಸ್ ಉಡುಪಿ ಇದರ ಆಡಳಿತ ನಿರ್ದೇಶಕ ಜೈಸನ್ ಡೇಸ್ ಹೇಳಿದರು. ಅವರು ಹಾವಂಜೆ ಗ್ರಾಮದ ಕೀಳಂಜೆ ತ್ರಿವರ್ಣ ವಿಶ್ವ ವೇದಿಕೆ ರಿ. ಇದರ 12ನೇ ವಾರ್ಷಿಕೋತ್ಸವದ ಪ್ರಯುಕ್ತ ಗ್ರಾಮದ ಸಂಬಂಧಪಟ್ಟ ಶ್ರೀ ನಂದಿಕೇಶ್ವರ ಮತ್ತು ಪರಿವಾರ ದೈವಸ್ಥಾನದಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿ ವೇದಿಕೆ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು. […]