ಭಗವದ್ಗೀತೆ ನೀತಿಪರ ಜೀವನಕ್ಕೆ ಮಾರ್ಗದರ್ಶನ ನೀಡುವ ಗ್ರಂಥ

ಉಡುಪಿ: ಮಧ್ವಾಚಾರ್ಯರಂತಹ ಮಹಾನ್ ಚಿಂತಕರು ಬೌದ್ಧಿಕ ಹಾಗೂ ಆಧ್ಯಾತ್ಮಿಕ ಶಕ್ತಿಯನ್ನು ನೀಡಿದ್ದಾರೆ. ಭಗವದ್ಗೀತೆ ಕೇವಲ ಆಚರಣೆಯ ಗ್ರಂಥವಲ್ಲ, ನೀತಿಪರ ಜೀವನಕ್ಕೆ ಮಾರ್ಗದರ್ಶನ ನೀಡುವ ಗ್ರಂಥವಾಗಿದೆ. ಸನಾತನ ಧರ್ಮದ ಶಕ್ತಿ ವೇದಗಳಲ್ಲಿ ಹಾಗೂ ಗೀತೆಯ ಶಾಶ್ವತ ಜ್ಞಾನದಲ್ಲಿ ಅಡಕವಾಗಿದೆ ಎಂದು ಆಂಧ್ರಪ್ರದೇಶದ ಉಪಮುಖ್ಯಮಂತ್ರಿ, ನಟ ಪವನ್ ಕಲ್ಯಾಣ್ ಹೇಳಿದ್ದಾರೆ. ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣ ಮಠದ ವತಿಯಿಂದ ರಾಜಾಂಗಣದಲ್ಲಿ ನಡೆದ ಬೃಹತ್ ಗೀತೋತ್ಸವ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಉಡುಪಿ ದೇಶದ ಪ್ರಮುಖ ಆಧ್ಯಾತ್ಮಿಕ ಕೇಂದ್ರಗಳಲ್ಲಿ ಒಂದಾಗಿದೆ. ಮಧ್ವಾಚಾರ್ಯರ […]
‘ಬಿಗ್ ಬಾಸ್ ಹಿಂದಿ 19’ರ ವಿನ್ನರ್ ಗೌರವ್ ಖನ್ನಾ; ವಿನ್ನರ್ ಗೆ ಸಿಕ್ಕಿತು 50 ಲಕ್ಷ ರೂಪಾಯಿ ಬಹುಮಾನ, ಐಷಾರಾಮಿ ಕಾರು!

ಮುಂಬೈ: ಜನಪ್ರಿಯ ಹಿಂದಿ ರಿಯಾಲಿಟಿ ಶೋ ಬಿಗ್ ಬಾಸ್ ನ(Big Boss Hindi) 19ನೇ ಸೀಸನ್ ನ ಗ್ರ್ಯಾಂಡ್ ಫಿನಾಲೆಯಲ್ಲಿ ಟ್ರೋಫಿಯನ್ನು ತನ್ನ ಮುಡಿಗೇರಿಸಿಕೊಳ್ಳುವ ಮೂಲಕ ವಿಜೇತರಾಗಿದ್ದಾರೆ. ಬಿಗ್ ಬಾಸ್ 19ರ ಗ್ರ್ಯಾಂಡ್ ಫಿನಾಲೆಯಲ್ಲಿ ಅಂತಿಮ ಸ್ಪರ್ಧಿಗಳ ನಡುವೆ ತೀವ್ರ ಹಣಾಹಣಿ ನಡೆದು, ಕೊನೆಗೂ ಗೌರವ್ ಖನ್ನಾ ವಿಜೇತರಾಗಿದ್ದು, ಫರ್ಹಾನಾ ಭಟ್ ಮೊದಲ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಐವರು ಟಾಪ್ ಅಂತಿಮ ಸ್ಪರ್ಧಿಗಳಲ್ಲಿ ಅಮಲ್ ಮಲ್ಲಿಕ್, ಗೌರವ್ ಖನ್ನಾ, ಫರ್ಹಾನಾ ಭಟ್, ಪ್ರಣೀತ್ ಮೋರ್ ಮತ್ತು […]
ಉಡುಪಿ: 108 ಆ್ಯಂಬುಲೆನ್ಸ್ ಸಿಗದೆ ಗೂಡ್ಸ್ ಟೆಂಪೋದಲ್ಲಿ ರೋಗಿಯನ್ನು ಆಸ್ಪತ್ರೆಗೆ ಸಾಗಿಸಿದ ಸಾಮಾಜಿಕ ಕಾರ್ಯಕರ್ತ

ಉಡುಪಿ: ಉದ್ಯಾವರದಲ್ಲಿ ಅಸ್ವಸ್ಥಗೊಂಡ ರೋಗಿಯೊಬ್ಬರಿಗೆ ರಾತ್ರಿ 7ಗಂಟೆಯಿಂದ 9.30ರವರೆಗೆ ಆ್ಯಂಬುಲೆನ್ಸ್ ಸಿಗದೆ ರೋಗಿ ಚಿಂತಾಜನಕ ಪರಿಸ್ಥಿತಿ ತಲುಪಿದಾಗ ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿ ಅಂಬಲಪಾಡಿ ಅವರು ತನ್ನ ಗೂಡ್ಸ್ ಟೆಂಪೋದಲ್ಲಿ ಮಂಚ ಇರಿಸಿ ರೋಗಿಯನ್ನು ಆಸ್ಪತ್ರೆಗೆ ದಾಖಲಿಸಿದ ಘಟನೆ ನಡೆದಿದೆ. ರೋಗಿಯ ಸಂಬಂಧಪಟ್ಟವರು108 ಆ್ಯಂಬುಲೆನ್ಸ್ ಗೆ ಕರೆ ಮಾಡಿದಾಗ ಆ್ಯಂಬುಲೆನ್ಸ್ ಲಭ್ಯವಿರಲಿಲ್ಲ. ಖಾಸಗಿ ಆ್ಯಂಬುಲೆನ್ಸ್ ಗಳು ಕೂಡ ಲಭ್ಯವಿರದಿರುವುದರಿಂದ ರೋಗಿಯ ಕಡೆಯವರು ವಿಶು ಶೆಟ್ಟಿ ಅವರನ್ನು ಸಂಪರ್ಕಿಸಿದ್ದಾರೆ. ವಿಶು ಶೆಟ್ಟಿ ಕೂಡ ಖಾಸಗಿ ಆ್ಯಂಬುಲೆನ್ಸ್ ಗೆ ಸಂಪರ್ಕಿಸಿ […]
ಸದ್ವಿಚಾರಗಳ ಮೂಲಕ ಸಮಾಜ ಬೆಸೆಯುವ ಕಾರ್ಯವಾಗಲಿ- ಪುತ್ತಿಗೆ ಶ್ರೀ

ಉಡುಪಿ: ಮಾಧ್ಯಮಗಳ ಸದ್ವಿಚಾರಗಳು ಮೂಡಿಬಂದು ಸಮಾಜವನ್ನು ಬೆಸೆಯುವ ಕಾರ್ಯವಾಗಬೇಕು ಎಂದು ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಅಭಿಪ್ರಾಯ ವ್ಯಕ್ತಪಡಿಸಿದರು. ಪರ್ಯಾಯ ಪುತ್ತಿಗೆ ಶ್ರೀಕೃಷ್ಣ ಮಠ ಆಶ್ರಯದಲ್ಲಿ ಸುಗುಣಮಾಲಾ ಮಾಸಪತ್ರಿಕೆ ಹಾಗೂ ಬೆಂಗಳೂರಿನ ಸಮಾನ ಮನಸ್ಕ ಮಾಧ್ಯಮ ಮಿತ್ರರ ವೇದಿಕೆ ವಿಕಾಸ’ ನೇತೃತ್ವದಲ್ಲಿ ಶನಿವಾರ ಗೀತಾ ಮಂದಿರದ ಪುತ್ತಿಗೆ ಶ್ರೀನೃಸಿಂಹ ಸಭಾಭವನದಲ್ಲಿ ನಡೆದ ‘ಕರಾವಳಿ ವಿಕಾಸ ಸಂಭ್ರಮ’ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು. ಬ್ರಾಹ್ಮಣ ಸಮುದಾಯದ ಬಗ್ಗೆ ಕೆಲವರು ತಪ್ಪು ಅಭಿಪ್ರಾಯ ಹೊಂದಿದ್ದಾರೆ. ಅದು ಸರಿಯಲ್ಲ. […]
ಮೂಡುಪೆರಂಪಳ್ಳಿ ನವಚೈತನ್ಯ ಯುವಕ ಮಂಡಲದ 40ನೇ ವಾರ್ಷಿಕೋತ್ಸವ: ಡಾ. ತಲ್ಲೂರು ಅವರಿಗೆ ವಜ್ರ ಚೈತನ್ಯ ಪ್ರಶಸ್ತಿ ಪ್ರದಾನ

ಉಡುಪಿ: ಸಂಘ ಸಂಸ್ಥೆಗಳಿಂದ ಉತ್ತಮ ಕಾರ್ಯಗಳು ನಡೆದರೆ ಅದು ಸಮಾಜದ ಉನ್ನತಿ ಕಾರಣ ಆಗುತ್ತದೆ ಎಂದು ಅದಮಾರು ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಹೇಳಿದರು. ಅವರು ಶುಕ್ರವಾರ ಮೂಡುಪೆರಂಪಳ್ಳಿಯ ವಿಶ್ವಪ್ರಿಯ ಬಯಲು ರಂಗಮಂಟಪದಲ್ಲಿ ನಡೆದ ನವ ಚೈತನ್ಯ ಯುವಕ ಮಂಡಲದ 40ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು. ಎಲ್ಲಿ ಸಜ್ಜನರಿಗೆ ಗೌರವ ಆದರಗಳು ನಡೆಯುತ್ತಿವೆ ಎಂದಾದರೆ ಆ ಸಂಘಗಳು ಉತ್ತಮ ಕಾರ್ಯಗಳನ್ನು ನಡೆಸುತ್ತಿವೆ ಎಂದರ್ಥ. ಮೂಡುಪೆರಂಪಳ್ಳಿ ನವಚೈತನ್ಯ ಯುವಕ ಮಂಡಲದ 40 ನೇ ವರ್ಷಕ್ಕೆ ಪಾದಾರ್ಪಣೆ […]