ಉಡುಪಿ:ಜನಸಾಮಾನ್ಯರು ತಮಗಿರುವ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಮಾಹಿತಿ ಹೊಂದುವುದರೊಂದಿಗೆ ಅಗತ್ಯಕ್ಕನುಗುಣವಾಗಿ ಕಾನೂನು ಬಳಕೆ ಮಾಡಿಕೊಳ್ಳಿ : ನ್ಯಾ. ವಿಭು ಬಖ್ರು

ಉಡುಪಿ: ದೇಶದ ಪ್ರತಿಯೊಬ್ಬ ಪ್ರಜೆಗೂ ಭಾರತದ ಸಂವಿಧಾನದಲ್ಲಿ ಮೂಲಭೂತ ಹಕ್ಕು ಮತ್ತು ಕರ್ತವ್ಯಗಳನ್ನು ನೀಡಿದ್ದು, ಅದರ ಬಗ್ಗೆ ಪ್ರತಿಯೊಬ್ಬರೂ ಅರಿವು ಹೊಂದಿರುವುದರೊಂದಿಗೆ ಅಗತ್ಯಕ್ಕನುಗುಣವಾಗಿ ಕಾನೂನುಗಳನ್ನು ಬಳಕೆ ಮಾಡಿಕೊಳ್ಳಬೇಕುಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಪ್ರಧಾನಪೋಷಕರಾದ ಗೌರವಾನ್ವಿತ ನ್ಯಾಯಮೂರ್ತಿ ವಿಭು ಬಖ್ರು ಹೇಳಿದರು. ಅವರು ಶನಿವಾರ ಕುಂದಾಪುರ ತಾಲೂಕು ಕೆರಾಡಿ ಗ್ರಾಮದ ವರಸಿದ್ಧಿ ವಿನಾಯಕ ಕಾಲೇಜಿನಲ್ಲಿ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಕಾನೂನು […]
ಉಡುಪಿ:”ಗ್ರಾಮಾಡಳಿತವೇ ಪ್ರಜಾಪ್ರಭುತ್ವದ ನೈಜ ತೊಟ್ಟಿಲು”:ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ.

ಉಡುಪಿ: ಪ್ರಜಾಪ್ರಭುತ್ವದ ಯಶಸ್ವಿವಿನ ಬೇರು ನಿಂತಿರುವುದೇ ಸ್ಥಳೀಯ ಆಡಳಿತ ಮೇಲೆ.ಸ್ಥಳೀಯ ಆಡಳಿತ ಯಶಸ್ವಿಯಾಗ ಬೇಕಾದರೆ ಎಲ್ಲಾ ವಗ೯ದ ಜನರ ಸಹಭಾಗಿತ್ವ ಸಹಕಾರ ಅತೀ ಅಗತ್ಯ.ಈ ನಿಟ್ಟಿನಲ್ಲಿ ಶಾಲಾ ಮಕ್ಕಳಿಗಾಗಿಯೇ ಹಕ್ಕುಗಳ ಅರಿವು ಮೂಡಿಸುವ ನಿಟ್ಟಿನಲ್ಲಿ ಮಕ್ಕಳ ಹಕ್ಕುಗಳ ವಿಶೇಷ ಗ್ರಾಮ ಸಭೆ ನಡೆಸುವುದು ಅತ್ಯಂತ ಔಚಿತ್ಯ ಪೂರ್ಣವಾದ ಮಾದರಿ ಕಾರ್ಯಕ್ರಮವೆಂದು ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಅಭಿಪ್ರಾಯಿಸಿದರು. 17ನೇ ಚೇರ್ಕಾಡಿ ಗ್ರಾಮಪಂಚಾಯತ್ ವತಿಯಿಂದ ಶ್ರೀ ಶಾರದಾ ಹೈಸ್ಕೂಲಿನ ಪರಿಸರದಲ್ಲಿ ನಡೆದ ಮಕ್ಕಳ ಹಕ್ಕುಗಳ ವಿಶೇಷ ಅಧಿವೇಶನದಲ್ಲಿ ಸಂಪನ್ಮೂಲ ಉಪನ್ಯಾಸವಿತ್ತು […]
ಉಡುಪಿ:InTouch ಮಾರ್ಕೆಟಿಂಗ್ ಸೊಲ್ಯುಷನ್ಸ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ

ಉಡುಪಿ:InTouch ಮಾರ್ಕೆಟಿಂಗ್ ಸೊಲ್ಯುಷನ್ಸ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಹುದ್ದೆಗಳು: ▪ಗ್ರಾಫಿಕ್ ಡಿಸೈನರ್ / ವಿಡಿಯೋ ಎಡಿಟರ್▪ಮಾರ್ಕೆಟಿಂಗ್ ಎಕ್ಸಿಕ್ಯುಟಿವ್ ನಿಮ್ಮ ರೆಸ್ಯೂಮ್ ಅನ್ನು ಕೆಳಗಿನ ಇಮೇಲ್ ಗೆ ಕಳುಹಿಸಿ: [email protected] +91 8105732895
ಉಡುಪಿ: ಮದ್ಯ ವ್ಯಸನಿಯಿಂದ ಅಡ್ಡಾದಿಡ್ಡಿ ಗ್ಯಾಸ್ ಬುಲೆಟ್ ಟ್ಯಾಂಕರ್ ಚಾಲನೆ: ತಪ್ಪಿದ ಭಾರೀ ದುರಂತ!

ಉಡುಪಿ: ಟ್ಯಾಂಕರ್ ಚಾಲಕನೊಬ್ಬ ರಾತ್ರಿಯ ಹೊತ್ತು ಹೆಡ್ ಲೈಟ್ ಕೂಡ ಹಾಕದೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಡ್ಡಾದಿಡ್ಡಿಯಾಗಿ ಗ್ಯಾಸ್ ಬುಲೆಟ್ ಟ್ಯಾಂಕರ್ ಮಾಡಿಕೊಂಡು ಬಂದಿದ್ದು ಕೂದಲೆಳೆಯ ಅಂತರದಲ್ಲಿ ಹಲವಾರು ಅಪಘಾತಗಳು ತಪ್ಪಿದೆ. ಕೊನೆಗೆ ಆತನನ್ನು ಅಂಬಲಪಾಡಿಯ ಬಳಿ ವಾಹನವನ್ನು ನಿಲ್ಲಿಸಿ ಸಾರ್ವಜನಿಕರು ಮದ್ಯ ವ್ಯಸನಿಯನ್ನು ವಶಕ್ಕೆ ಪಡೆದು ಪೋಲಿಸರಿಗೆ ಒಪ್ಪಿಸಿದ್ದಾರೆ. ಟ್ಯಾಂಕರ್ ಚಾಲಕ ಮಹಾರಾಷ್ಟ್ರ ಮೂಲದವನಾಗಿದ್ದು, ಬಹಳಷ್ಟು ಮದ್ಯ ಸೇವಿಸಿ ರಾತ್ರಿಯ ಹೊತ್ತು ಹೆಡ್ ಲೈಟ್ ಕೂಡ ಹಾಕದೆ ಬಹಳಷ್ಟು ವೇಗವಾಗಿ ಬರುತ್ತಿದ್ದ. ಇದನ್ನು ಗಮನಿಸಿದ ವ್ಯಕ್ತಿಯೊರ್ವರು ವಾಹನವನ್ನು […]
ಉಡುಪಿ ಜಿಲ್ಲಾಸ್ಪತ್ರೆ 108 ಸೇವೆ ವೈಫಲ್ಯ ರೋಗಿಗಳ ಜೀವದೊಂದಿಗೆ ಚೆಲ್ಲಾಟವಾಡುತ್ತಿರುವ ರಾಜ್ಯ ಸರ್ಕಾರ : ಯಶ್ ಪಾಲ್ ಸುವರ್ಣ ಆಕ್ರೋಶ

ಉಡುಪಿ ಜಿಲ್ಲಾಸ್ಪತ್ರೆಗೆ ಸಂಬಂಧಿಸಿದಂತೆ ತುರ್ತು ಸಂದರ್ಭದಲ್ಲಿ ರೋಗಿ 2 ಗಂಟೆ ಕಾದರೂ 108 ಸೇವೆ ಲಭ್ಯವಾಗದೆ ಸಮಾಜಸೇವಕ ವಿಶು ಶೆಟ್ಟಿ ಯವರು ರೋಗಿಯನ್ನು ಗೂಡ್ಸ್ ವಾಹನದಲ್ಲಿ ಕರೆ ತಂದ ಘಟನೆ ಅತ್ಯಂತ ದುರದೃಷ್ಟಕರವಾಗಿದ್ದು, ರಾಜ್ಯ ಸರ್ಕಾರ ಜಿಲ್ಲೆಯ ಆರೋಗ್ಯ ಸಮಸ್ಯೆಗಳ ಬಗ್ಗೆ ಮಲ ತಾಯಿ ಧೋರಣೆ ನಡೆಸುತ್ತಿದ್ದು ರೋಗಿಗಳ ಜೀವದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ 2 ವರ್ಷಗಳಲ್ಲಿ ಹಲವಾರು ಬಾರಿ 108 ಸೇವೆ ವ್ಯತ್ಯಯವಾಗಿ ರೋಗಿಗಳು […]